ಬೈಂದೂರು ಬೀದಿಗೆ ಬಂದ ಕಲ್ಲುಕೋರೆ ರಾಜಕೀಯ,ಪ್ರತಿಭಟನೆಯ ಜಾಥಾದಲ್ಲಿ ಹೈಡ್ರಾಮ,ರಾಜಕೀಯ ಜಂಜಾಟದಲ್ಲಿ ಇನ್ನಷ್ಟು ಜಟಿಲವಾಗುವುದೆ ಕಲ್ಲುಕೋರೆ ಸಮಸ್ಯೆ
ಬೈಂದೂರು: ಕಳೆದ ಆರೇಳು ತಿಂಗಳುಗಳಿಂದ ತೆರೆಮರೆಯಲ್ಲಿದ್ದ ಬೈಂದೂರು ರಾಜಕೀಯ ಮೇಲಾಟ ಇಂದು ಬೀದಿಗೆ ಬಂದಿದೆ.ರಾಜಕೀಯ ಜಂಜಾಟದಿಂದ ಜಟಿಲವಾಗಿದ್ದ ಕಲ್ಲುಕೋರೆ ಪುನರಾರಂಭದ ಸಮಸ್ಯೆ ಇನ್ನಷ್ಟು ಗೊಂದಲ ಉಂಟು ಮಾಡಿದೆ.ಹಾಲಿ ಶಾಸಕರು ಹಾಗೂ ಮಾಜಿ ಶಾಸಕರ ಬಣಗಳ ನಡುವೆ ಜಾಥಾದಲ್ಲಿ ಮಾತಿನ ಚಕಮಕಿ ನಡೆದಿದೆ.ಬಳಿಕ…
ಬೈಂದೂರು ಐತಿಹಾಸಿಕ ಪ್ರಸಿದ್ದ ತಗ್ಗರ್ಸೆ ಕಂಬಳೋತ್ಸವ ಸಂಪನ್ನ
ಬೈಂದೂರು: ಬೈಂದೂರು ಭಾಗದ ಐತಿಹಾಸಿಕ ಪ್ರಸಿದ್ದ ತಗ್ಗರ್ಸೆ ಕಂಠದಮನೆ ಸಾಂಪ್ರದಾಯಿಕ ಕಂಬಳೋತ್ಸವ ಶುಕ್ರವಾರ ಅತ್ಯಂತ ಯಶಸ್ವಿಯಾಗಿ ನಡೆಯಿತು.ತಗ್ಗರ್ಸೆ ಕಂಠದಮನೆಯ ಟಿ.ನಾರಾಯಣ ಹೆಗ್ಡೆ ಕಂಬಳೋತ್ಸವಕ್ಕೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ಕಳೆದ ಹಲವು ವರ್ಷಗಳಿಂದ ತಗ್ಗರ್ಸೆ ಕಂಬಳೋತ್ಸವ ಸಾರ್ವಜನಿಕರ ಸಹಕಾರದಿಂದ ಅತ್ಯಂತ…
ಬೈಂದೂರು ವಕೀಲರ ಸಂಘದಿಂದ ವಕೀಲರ ದಿನಾಚರಣೆ,ವಕೀಲರ ವೃತಿ ಶ್ರೇಷ್ಠವಾಗಿದ್ದು ಸಮಾಜದಲ್ಲಿ ನೊಂದವರಿಗೆ ನ್ಯಾಯ ಒದಗಿಸುವುದು ಪುಣ್ಯ ಕೆಲಸವಾಗಿದೆ;ವಿದ್ಯಾ ಎ.ಎಸ್
ಬೈಂದೂರು; ಬೈಂದೂರು ವಕೀಲರ ಸಂಘ (ರಿ.)ಬೈಂದೂರು ಇದರ ವತಿಯಿಂದ ವಕೀಲರ ದಿನಾಚರಣೆ ನಡೆಯಿತು.ಬೈಂದೂರು ಸಿವಿಲ್ ಮತ್ತು ಜೆ.ಎಮ್.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶ ವಿದ್ಯಾ ಎ.ಎಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ವಕೀಲರ ವೃತಿ ಶ್ರೇಷ್ಠವಾಗಿದ್ದು, ಸಮಾಜದಲ್ಲಿ ನೊಂದವರಿಗೆ ನ್ಯಾಯ ಒದಗಿಸುವುದು ಪುಣ್ಯ ಕೆಲಸವಾಗಿದೆ.ಜನತೆಗೆ ತ್ವರಿತ…
ರಾಜಕೀಯ ಚದುರಂಗದಾಟದಲ್ಲಿ ಬರಡಾದ ಬಡವರ ಬದುಕು,ಎರಡು ವರ್ಷದಿಂದ ಮುಗಿಯದ ಕೆಂಪು ಕಲ್ಲು ,ಮರಳು ಸಮಸ್ಯೆಯ ಗೋಳು,ಇಂದು ನಡೆಯಬೇಕಿದ್ದ ಮುಖ್ಯಮಂತ್ರಿಗಳ ಸಭೆ ರದ್ದು
ಬೈಂದೂರು: ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಒಂದು ಕಾನೂನು ಆದರೆ ಉಡುಪಿ ಜಿಲ್ಲೆಗೆ ಮಾತ್ರ ಪ್ರತ್ಯೇಕ ಕಾನೂನು ಎಂಬಂತಿದೆ.ರಾಜಕೀಯ ಚದುರಂಗದಾಟ ಅಧಿಕಾರಿಗಳ ವಾಸ್ತವತೆ ಅರಿವಿನ ಕೊರತೆ ನಡುವೆ ಉಡುಪಿ ಜಿಲ್ಲೆಯಲ್ಲಿ ಕಳೆದೆರಡು ವರ್ಷದಿಂದ ಮನೆ ನಿರ್ಮಾಣದ ಕನಸು ಕೈಬಿಡುವಂತಹ ಪರಿಸ್ಥಿತಿ ಬಂದಿದೆ. ಹತ್ತಾರು…
ವತ್ತಿನಕಟ್ಟೆ ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ ಸಂಭ್ರಮ
ಬೈಂದೂರು: ಇಲ್ಲಿನ ವತ್ತಿನಕಟ್ಟೆ ಶ್ರೀ ಮಹಾಸತಿ ಅಮ್ಮನವರ ಸನ್ನಿಧಿಯಲ್ಲಿ ಕಾರ್ತಿಕ ದೀಪೋತ್ಸವ ಹಾಗೂ ಅಷ್ಟಾವಧಾನ ಸೇವೆ ನಡೆಯಿತು.ಆನಗಳ್ಳಿ ಡಾ ಚೆನ್ನಕೇಶವ ಗಾಯತ್ರಿ ಭಟ್ ಇವರ ನೇತೃತ್ವದಲ್ಲಿ ವಿಶೇಷ ಅಲಂಕಾರ ಪೂಜೆ, ರಂಗ ಪೂಜೆ ಉತ್ಸವ, ತುಳಸಿ ಪೂಜೆ, ಅಷ್ಟಾವಧಾನ ಸೇವೆ ಹಾಗೂ…
ಶಿರೂರು ಪೇಟೆ ಶ್ರೀ ಶಾಂತಾನಂದ ಆಶ್ರಮದ ಕಟ್ಟಡದ ಜೀರ್ಣೋದ್ದಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮೂರು ಲಕ್ಷ ರೂಪಾಯಿ ದೇಣಿಗೆ
ಶಿರೂರು: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಯವರು ಮಂಜೂರು ಮಾಡಿದ ಮೂರು ಲಕ್ಷ ರೂಪಾಯಿ ಮೊತ್ತದ ಸಹಾಯಧನವನ್ನು ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಶಿರೂರು ಪೇಟೆ ಶ್ರೀ ಶಾಂತಾನಂದ ಆಶ್ರಮಕ್ಕೆ ದೇಣಿಗೆಯಾಗಿ ನೀಡಲಾಯಿತು. ಶಾಂತಾನಂದ ಆಶ್ರಮದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಸ್.ಪ್ರಕಾಶ್…
ನ.29 ರಂದು ಶಿರೂರು ಕಾಲೇಜು ಮೈದಾನದಲ್ಲಿ ಹಲವು ವರ್ಷಗಳ ಬಳಿಕ ಅದ್ದೂರಿ ಯಕ್ಷಗಾನ
ಶಿರೂರು; ಕಳೆದ ಹಲವು ವರ್ಷಗಳ ಬಳಿಕ ಪ್ರಪ್ರಥಮ ಬಾರಿಗೆ ಶಿರೂರು ಕಾಲೇಜು ಮೈದಾನದಲ್ಲಿ ಅದ್ದೂರಿಯ ಯಕ್ಷಗಾನ ನ.29 ರಂದು ರಾತ್ರಿ ನಡೆಯಲಿದೆ.ಯಕ್ಷ ಸಂಘಟಕ ದೀಪಕ್ ಕುಮಾರ್ ಶೆಟ್ಟಿ ಶಿರೂರು ಮುಂದಾಳತ್ವದಲ್ಲಿ ಪೆರ್ಡೂರು ಮೇಳದ ಕಲಾವಿದರಿಂದ ಪರ್ಣ ಕುಟೀರ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.ಆಕರ್ಷಕ ಹಿಮ್ಮೇಳ…
ಎರಗೇಶ್ವರ ಕ್ರೀಡಾ ಸಂಘ ಮೇಲ್ಪಂಕ್ತಿ ಶಿರೂರು 23ನೇ ವಾರ್ಷಿಕೋತ್ಸವ ಕಾರ್ಯಕ್ರಮ
ಶಿರೂರು: ಶ್ರೀ ಎರಗೇಶ್ವರ ಕ್ರೀಡಾ ಸಂಘ ಮೇಲ್ಪಂಕ್ತಿ ಶಿರೂರು ಇದರ 23ನೇ ವಾರ್ಷಿಕೋತ್ಸವ ಕಾರ್ಯಕ್ರಮ ಡಿ.03 ರಂದು ಮೇಲ್ಪಂಕ್ತಿ ಎರಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ.ಸಂಜೆ ಸಭಾ ಕಾರ್ಯಕ್ರಮ ಬಳಿಕ ರಾತ್ರಿ 9:30ಕ್ಕೆ ರವೀಂದ್ರ ಕಿಣಿ ನಿರ್ದೇಶನದ ತಾಳಿ ಕಟ್ಟಿದ್ದರು ಗಂಡನಲ್ಲ (ಜ್ಯೋತಿ…
ಶಿರೂರಿನ ಶ್ರವಣ್ ರಾವ್‌ಗೆ ಸುವರ್ಣ ಮಹೋತ್ಸವ ಗೌರವ
ಶಿರೂರು: ಕಸ್ತೂರಿ ಸಿರಿಗನ್ನಡ ವೇದಿಕೆ ಬೆಳಗಾವಿಯಲ್ಲಿ ಸುವರ್ಣ ಮಹೋತ್ಸವದ ಅಂಗವಾಗಿ ನಡೆದ ಕಿರಿಯ ವಯಸ್ಸಿನಲ್ಲಿ ಹಿಂದೂಸ್ತಾನಿ ಸಂಗೀತ,ಜ್ಞಾನ ಸಾಧನೆ ಗುರುತಿಸಿ ಬೈಂದೂರು ಸೈಂಟ್ ಥೋಮಸ್ ಆಂಗ್ಲ ಮಾಧ್ಯಮ ಶಾಲೆಯ 1ನೇ ತರಗತಿ ವಿದ್ಯಾರ್ಥಿ ಶಿರೂರಿನ ಶ್ರವಣ್ ರಾವ್ ರವರಿಗೆ ಸುವರ್ಣ ಮಹೋತ್ಸವ…
ಕೊಲ್ಲೂರಿನಲ್ಲಿ ಚಿತ್ರ ನಟ ಸೂರ್ಯ ದಂಪತಿಗಳು
ಬೈಂದೂರು: ದಕ್ಷಿಣ ಭಾರತದ ಪ್ರಸಿದ್ದ ಯಾತ್ರಾ ಸ್ಥಳ ಕೊಲ್ಲೂರು ಮೂಕಾಂಬಿಕೆಯ ದರ್ಶನ ಪಡೆಯಲು ನಾನಾ ಕಡೆಗಳಿಂದ ಭಕ್ತರು ಆಗಮಿಸುತ್ತಾರೆ. ಜನಸಾಮಾನ್ಯರು ಮಾತ್ರವಲ್ಲದೆ, ಸೆಲೆಬ್ರಿಟಿಗಳು ಕೂಡ ಇಲ್ಲಿಗೆ ಆಗಮಿಸಿ ದರ್ಶನ ಪಡೆಯುತ್ತಾರೆ. ಇಂದು ಕಾಲಿವುಡ್ ದಂಪತಿ ಸೂರ್ಯ ಹಾಗೂ ಜ್ಯೋತಿಕಾ ಆಗಮಿಸಿ…