ಶಿರೂರು; ಶ್ರೀ ದುರ್ಗಾಂಬಿಕಾ ದೇವಸ್ಥಾನ ಕೋಟೆಮನೆ ಶಿರೂರು ಇದರ ಶರನ್ನವರಾತ್ರಿ ಉತ್ಸವದ ಪ್ರಯುಕ್ತ ಪಲ್ಲಕ್ಕಿ ಉತ್ಸವ ಬುಧವಾರ ನಡೆಯಿತು.ಪಲ್ಲಕ್ಕಿ ಉತ್ಸವವು ಶಿರೂರು ಮಾರ್ಕೆಟ್,ಹಡವಿನಕೋಣೆ,ಮುದ್ರಮಕ್ಕಿಹಾಗೂ ಶಿರೂರಿನ ವಿವಿಧ ಭಾಗಗಳಿಗೆ ತೆರಳಿ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು ಹಾಗೂ ಭಕ್ತಾಧಿಗಳು ಹಾಜರಿದ್ದರು.