ಶಿರೂರು: ಶ್ರೀ ದುಗಾ೯ಂಬಿಕಾ ದೇವಸ್ಥಾನ ಕೋಟೆಮನೆ ಶಿರೂರು ಇದರ ಕೋಟೆಮನೆ ಶ್ರೀ ಮಹಾಕಾಳಿ ದೇವಿಯ ದೇವಿಯ ನೂತನ ಶಿಲಾಮಯ ದೇವಾಲಯ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮ ಗುರುವಾರ ಪೂರ್ವಾಹ್ನ ದೇವಸ್ಥಾನದ ಆವರಣದಲ್ಲಿ ನಡೆಯಿತು. ಬೆಳಿಗ್ಗೆ ಶಿರೂರು ಗ್ರಾಮ ಪುರೋಹಿತರಾದ ಸುರೇಶ ಅವಭೃತ ಇವರ ನೇತ್ರತ್ವದಲ್ಲಿ ಧಾರ್ಮಿಕ ಪೂಜಾ ವಿಧಿ ವಿಧಾನಗಳು ನಡೆಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ನಾರಾಯಣ ವಿ.ಮೇಸ್ತ,ಉಪಾಧ್ಯಕ್ಷ ಶಂಕರ ಎಸ್.ಮೇಸ್ತ,ಕಾರ್ಯದರ್ಶಿ ಚಂದ್ರಶೇಖರ ಮೇಸ್ತ,ಜೊತೆ ಕಾರ್ಯದರ್ಶಿ ಶಂಕರ ಕೆ.ಮೇಸ್ತ,ಖಜಾಂಚಿ ರಮೇಶ ಬಿ.ಮೇಸ್ತ,ಸದಸ್ಯರಾದ ಪಾಲಾಕ್ಷ ಮೇಸ್ತ,ನಾಗೇಶ ಎಮ್.ಮೇಸ್ತ,ಚಂದ್ರಹಾಸ ಎಸ್.ಮೇಸ್ತ,ಗೋವಿಂದ ಡಿ.ಮೇಸ್ತ,ಶಂಕರ ಜಿ.ಮೇಸ್ತ,ರಮೇಶ ಪಿ.ಮೇಸ್ತ,ನಾಗರಾಜ ವಿ.ಮೇಸ್ತ,ಕೃಷ್ಣ ಎನ್.ಮೇಸ್ತ,ಅನುವಂಶಿಕ ಅರ್ಚಕರಾದ ರಾಮಚಂದ್ರ ಮೇಸ್ತ, ಪಾಂಡುರಂಗ ಮೇಸ್ತ ಹಾಗೂ ಊರಿನ ಸರ್ವ ಭಕ್ತಾಧಿಗಳು ಹಾಜರಿದ್ದರು.







News/pic: Giri shiruru