ಬೈಂದೂರು: ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಗೆ ಗ್ರಾಮೀಣ ಭಾಗಗಳನ್ನು ಸೆರ್ಪಡಿಸಿದ ಕಾರಣ ರೈತರು ತೀವ್ರ ತೊಂದರೆ ಅನುಭವಿಸುತ್ತಿದ್ದು ಈ ಕುರಿತು ಬೈಂದೂರು ತಾಲೂಕು ರೈತ ಸಂಘದ ಮುಂದಾಳತ್ವದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜಿಲ್ಲಾಧಿಕಾರಿ ಕಛೇರಿ ಹಾಗೂ ಬೈಂದೂರು ತಾಲೂಕು ಆಡಳಿತ ಕಛೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ ಮತ್ತು ಬೈಂದೂರಿನಲ್ಲಿ ರೈತರ ಅನಿಽಷ್ಟಾವಧಿ ಪ್ರತಿಭಟನೆ ನಡೆಯುತ್ತಿದೆ.ಈ ಕುರಿತು ಇಂದು ರಾಜ್ಯ ಸರಕಾರದ ಕಂದಾಯ ಸಚಿವರು ಮತ್ತು ನಗರಾಭಿವ್ರದ್ದಿ  ಪ್ರಧಾನ ಕಾರ್ಯದರ್ಶಿಯವರನ್ನು ಬೇಟಿ ಮಾಡಿ ಚರ್ಚಿಸಿದ್ದು ಸರಕಾರದಿಂದ ಸಮರ್ಪಕ ಸ್ಪಂಧನೆಯ ಭರವಸೆಯಿದೆ ಎಂದು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ತಿಳಿಸಿದ್ದಾರೆ.ಅವರು ಇಂದು ಬೆಂಗಳೂರಿನಲ್ಲಿ ಈ ಕುರಿತು ವಿವಿಧ ಸಚಿವರು ಅಧಿಕಾರಿಗಳನ್ನು ಬೇಟಿ ಮಾಡಿದರು.ಈಗಾಗಲೆ ಕಡಬ, ಶೃಂಗೇರಿಯಲ್ಲಿ ಹನ್ನೊಂದು ವಾರ್ಡ್ ಪಟ್ಟಣ ಪಂಚಾಯತ್ ಇದ್ದು ಬೈಂದೂರಿನಲ್ಲಿ ಗ್ರಾಮೀಣ ಭಾಗ ಕೈ ಬಿಟ್ಟು ಪಟ್ಟಣ ಪಂಚಾಯತ್ ರಚನೆ ಮಾಡುವ ಕುರಿತು ಪ್ರಧಾನ ಕಾರ್ಯದರ್ಶಿ ದೀಪ ಚೋಳನ್ ಜೊತೆ ಚರ್ಚಿಸಲಾಯಿತು. ಬಳಿಕ ಅವರು ಸಕರಾತ್ಮಕ ಸ್ಪಂಧನೆ ನೀಡಿ ಉಡುಪಿ ಜಿಲ್ಲಾಧಿಕಾರಿಗಳಿಗೆ ತಕ್ಷಣ ವರದಿ ಕಳುಹಿಸಲು ತಿಳಿಸಿದ್ದು ಸರಕಾರದ ಜೊತೆ ಚರ್ಚಿಸಿ ಕಾನೂನು ಚೌಕಟ್ಟಿನಲ್ಲಿ ಸಮರ್ಪಕ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು.

ಕಂದಾಯ ಸಚಿವ ಕೃಷ್ಣ ಬೈರೇಗೌಡ ಬೇಟಿ ಮಾಡಿ ಸಚಿವರು ದೂರವಾಣಿ ಮೂಲಕ ವಿವಿಧ ಅಧಿಕಾರಿ ಜೊತೆ ಮಾತನಾಡಿದರು.ಇದರಿಂದಾಗಿ ಮಾಜಿ ಶಾಸಕರ ಪ್ರಯತ್ನ ಪಟ್ಟಣ ಪಂಚಾಯತ್ ನಿಂದ ಮುಕ್ತಿ ಆಗ್ರಹಿಸಿ.ಹೋರಾಟ ನಡೆಸುತ್ತಿರುವ ರೈತರಿಗೆ ಒಂದಿಷ್ಟು ಭರವಸೆ ಮೂಡಿದಂತಾಗಿದೆ ಮತ್ತು ಶೀಘ್ರ ಸರಕಾರ ಸಮರ್ಪಕ ಕ್ರಮ ಕೈಗೊಳ್ಳಲಿ ಎಂದು ಆಶೀಸಿದ್ದಾರೆ.ಈ ಸಂಧರ್ಭದಲ್ಲಿ ಕ್ರಷ್ಣ ಬೈರೆಗೌಡ ಆಪ್ತ ಕಾರ್ಯದರ್ಶಿ ರವಿ ತಿರ್ಲಾಪುರ ಹಾಜರಿದ್ದರು.

 

Leave a Reply

Your email address will not be published. Required fields are marked *

seventeen + eleven =