ಬೈಂದೂರು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ನಿ ) ನೇರಳಕಟ್ಟೆ ಶಾಖೆ,ನಬಾರ್ಡ್ ಸಹಯೋಗದೊಂದಿಗೆ ಆರ್ಥಿಕ ಅರಿವು ಜಾಗೃತಿ ಹಾಗೂ ಜನ ಸುರಕ್ಷಾ ಕಾರ್ಯಕ್ರಮ ಕಕುಂಜೆ ಜಲ ಕಾಂಪ್ಲೆಕ್ಸ್ ನಲ್ಲಿ ಮಾಹಿತಿ ಕಾರ್ಯಾಗಾರ ನಡೆಯಿತು.
ಕಕುಂಜೆ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜೀವ ಶೆಟ್ಟಿ ಬಿಜ್ರಿ ಕಾರ್ಯಕ್ರಮ ಉದ್ಘಾಟಿಸಿದರು. ನೇರಳಕಟ್ಟೆ ಬ್ಯಾಂಕಿನ ಶಾಖಾ ವ್ಯವಸ್ಥಾಪಕ ವೆಂಕಟೇಶ್ ಬಿಲ್ಲವ ಅಧ್ಯಕ್ಷತೆ ವಹಿಸಿದ್ದರು.
ಫೈನಾನ್ಸಿಯಲ್ ಲಿಟ್ರೇಸಿ ಕೌನ್ಸಿಲ್ ಕುಂದಾಪುರದ ಆಶಾಲತಾ ಆರ್ಥಿಕ ಅರಿವು ಹಾಗೂ ಜನಸುರಕ್ಷಾ ಕುರಿತು ಮಾಹಿತಿ ನೀಡಿದರು.
ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ನಿವೃತ್ತ ಉಪ ಮಹಾಪ್ರಬಂಧಕ ಸೀತಾರಾಮ್ ಮಡಿವಾಳ, ಸಾಮಾಜಿಕ ಕಾರ್ಯಕರ್ತ ನಾರಾಯಣ ನಾಯಕ್,ಗ್ರಾಮ ಪಂಚಾಯತ್ ಲೆಕ್ಕಪರಿಶೋಧಕ ಉದಯ,ನವೋದಯ ತಾಲೂಕು ಮೇಲ್ವಿಚಾರಕ ಮನೋಹರ ಶೆಟ್ಟಿ. ಹೆಚ್, ಮಹಿಳಾ ಗ್ರಾಹಕರು, ಬ್ಯಾಂಕ್ ಸಿಬ್ಬಂದಿಗಳು ಹಾಗೂ ನವೋದಯ ಪ್ರೇರಕರು ಉಪಸ್ಥಿತರಿದ್ದರು.

ಬ್ಯಾಂಕಿನ ಸಿಬ್ಬಂದಿ ಪ್ರದೀಪ್ ಶೆಟ್ಟಿ ಕಾರಿಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ಶಾಖಾ ಸಿಬ್ಬಂದಿ ದಿನಕರ್ ಶೆಟ್ಟಿ ವಂದಿಸಿದರು.