ಶಿರೂರು; ಶ್ರೀದುರ್ಗಾಂಬಿಕಾ ದೇವಸ್ಥಾನ ಕೋಟೆಮನೆ ಶಿರೂರು ಇದರ ನವರಾತ್ರಿ ವಿಜಯದಶಮಿ ಉತ್ಸವ ಸೆ.22 ರಿಂದ ಆರಂಭಗೊಂಡಿದ್ದು ಅ.02 ರ ವರೆಗೆ ನಡೆಯಲಿದೆ. ಪ್ರತಿದಿನ ಬೆಳಿಗ್ಗೆ ದೇವಳದಲ್ಲಿ ವಿವಿಧ ಪೂಜಾ ಕಾರ್ಯಕ್ರಮ ಪಲ್ಲಕ್ಕಿ ಉತ್ಸವ,ತುಲಾಭಾರ ಸೇವೆ ಮದ್ಯಾಹ್ನ ಮಹಾ ಅನ್ನಸಂತರ್ಪಣೆ ಕಾರ್ಯಕ್ರಮ ಹಾಗೂ ಪ್ರತಿದಿನ ಭಜನಾ ಕಾರ್ಯಕ್ರಮ ನಡೆಯಲಿದೆ.
ಅ.02ರಂದು ವಿಜಯ ದಶಮಿ ಪ್ರಯುಕ್ತ ಬೆಳಿಗ್ಗೆ ಪಲ್ಲಕ್ಕಿ ಉತ್ಸವ, ಅಂಬು ಪ್ರಯೋಗ,ತುಲಾಭಾರ ಸೇವೆ ಮದ್ಯಾಹ್ನ ಮಹಾಅನ್ನಸಂತರ್ಪಣೆ ಹಾಗೂ ಭಕ್ತಿಸುಧೆ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭದಲ್ಲಿ ದುರ್ಗಾಂಬಿಕಾ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ನಾರಾಯಣ ವಿ.ಮೇಸ್ತ,ಉಪಾಧ್ಯಕ್ಷ ಶಂಕರ ಎಸ್.ಮೇಸ್ತ,ಕಾರ್ಯದರ್ಶಿ ಚಂದ್ರಶೇಖರ ಡಿ.ಮೇಸ್ತ,ಉಪ ಕಾರ್ಯದರ್ಶಿ ಶಂಕರ ಕೆ.ಮೇಸ್ತ,ಖಜಾಂಚಿ ರಮೇಶ ಬಿ.ಮೇಸ್ತ,ಆಡಳಿತ ಮಂಡಳಿ ಸದಸ್ಯರು ಹಾಗೂ ಭಕ್ತಾಧಿಗಳು ಹಾಜರಿದ್ದರು.




