ಶಿರೂರು: ಅಖಿಲ ಕರ್ನಾಟಕ ಚಾರೋಡಿ ಮೇಸ್ತ ಸಮಾಜ (ರಿ.) ಇದರ ವತಿಯಿಂದ ಡಿ.28 ರಂದು ಶಿರೂರಿನಲ್ಲಿ ನಡೆಯಲಿರುವ ಚಾರೋಡಿ ಮೇಸ್ತ ಸಮ್ಮೇಳನ -2025 ರ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಗಣೇಶ ಸೇವಾ ಸಂಘ ಹಡವಿನಕೋಣೆಯಲ್ಲಿ ನಡೆಯಿತು.
ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು ಚಾರೋಡಿ ಮೇಸ್ತ ಸಮಾಜ ಬಾಂಧವರ ರಾಜ್ಯಮಟ್ಟದ ಸಮ್ಮೇಳನವು ಶಿರೂರಿನಲ್ಲಿ ನಡೆಯುತ್ತಿದ್ದು ರಾಜ್ಯದ ನಾನಾ ಕಡೆಯಿಂದ ವಿವಿಧ ಚಾರೋಡಿ ಮೇಸ್ತ ಸಮಾಜ ಬಾಂಧವರು ಆಗಮಿಸಲಿದ್ದು.ಸಮ್ಮೇಳನದಲ್ಲಿ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆಯಲಿದೆ.ಇಂತಹ ಕಾರ್ಯಕ್ರಮಕ್ಕೆ ನಮ್ಮೆಲ್ಲರ ಸಹಕಾರ ಸದಾ ಇರಲಿದೆ ಎಂದರು.
ಅಖಿಲ ಕರ್ನಾಟಕ ಚಾರೋಡಿ ಮೇಸ್ತ ಸಮಾಜದ ರಾಜ್ಯಾಧ್ಯಕ್ಷ ರಾಮಚಂದ್ರ ಶಿರೂರಕರ್ ಅಧ್ಯಕ್ಷತೆ ವಹಿದ್ದರು.
ಈ ಸಂದರ್ಭದಲ್ಲಿ ಜಿ.ಪಂ ಮಾಜಿ ಸದಸ್ಯ ಸುರೇಶ ಬಟ್ವಾಡಿ,ತಾ.ಪಂ ಮಾಜಿ ಸದಸ್ಯ ಪುಷ್ಪರಾಜ್ ಶೆಟ್ಟಿ ಶಿರೂರು,ಹಡವಿನಕೋಣೆ ಗಣೇಶ ಸೇವಾ ಸಂಘದ ಉಪಾಧ್ಯಕ್ಷ ರಾಮದಾಸ್ ಆರ್.ಮೇಸ್ತ,ಮಹೇಶ ನಾಯಕ್ ಮಂಗಳೂರು,ಸಹ ಕಾರ್ಯದರ್ಶಿ ಉಮೇಶ ಎಲ್.ಮೇಸ್ತ,ಅಖಿಲ ಕರ್ನಾಟಕ ಚಾರೋಡಿ ಮೇಸ್ತ ಸಮಾಜದ ಉಪಾಧ್ಯಕ್ಷ ನಾಗೇಶ ಮೇಸ್ತ ,ವಸಂತ ಮೇಸ್ತ ಕುಂದಾಪುರ,ಶ್ರೀಧರ ಮೇಸ್ತ,ಶಿರೂರು ಚಾರೋಡಿ ಮೇಸ್ತ ಸಮಾಜದ ಅಧ್ಯಕ್ಷೆ ಅನ್ನಪೂರ್ಣ ಮೇಸ್ತ, ಜಯ ಗಣೇಶ ಮಹಿಳಾ ಮಂಡಳಿ ಉಪಾಧ್ಯಕ್ಷೆ ಜಯಂತಿ ಜಿ.ಮೇಸ್ತ, ಅಖಿಲ ಕರ್ನಾಟಕ ಚಾರೋಡಿ ಮೇಸ್ತ ಸಮಾಜದ ಮಾಜಿ ಪ್ರಧಾನ ಕಾರ್ಯದರ್ಶಿ ಕೆ.ವಿ ಜಯರಾಮ್,ರಾಘವೇಂದ್ರ ಮೇಸ್ತ ಉಪಸ್ಥಿತರಿದ್ದರು.

ಅಣ್ಣಪ್ಪ ಮೇಸ್ತ ಪ್ರಾರ್ಥನೆಗೈದರು.ಅಖಿಲ ಕರ್ನಾಟಕ ಚಾರೋಡಿ ಮೇಸ್ತ ಸಮಾಜದ ಗೌರವಾಧ್ಯಕ್ಷ ಕೃಷ್ಣಮೂರ್ತಿ ವಿ.ಆಚಾರ್ಯ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಶಿಕ್ಷಕ ರಾಮನಾಥ ಮೇಸ್ತ ಶಿರೂರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಅಖಿಲ ಕರ್ನಾಟಕ ಚಾರೋಡಿ ಮೇಸ್ತ ಸಮಾಜದ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಎಮ್ ವಂದಿಸಿದರು.