ಶಿರೂರು: ಬೈಂದೂರು ಹಾಗೂ ಶಿರೂರು ಮುಂತಾದ ಕಡೆಗಳಲ್ಲಿ ಶನಿವಾರ ಮತ್ತು ಭಾನುವಾರ ಸುರಿದ ಬಾರಿ ಗಾಳಿ ಮಳೆಗೆ ಅಪಾರ ಪ್ರಮಾಣದ ಆಸ್ತಿ ಪಾಸ್ತಿ ಹಾನಿ ಉಂಟಾಗಿದೆ.ಯಡ್ತರೆ ಗ್ರಾಮದ ಹೊಸೂರು ಪ್ರದೀಪ್ ಎನ್ನುವವರ ಕೋಳಿ ಫಾರಂ ನೆಲಕ್ಕುರುಳಿದೆ.ಎಂಟು ಲಕ್ಷಕ್ಕೂ ಅಧಿಕ ನಷ್ಟ ಉಂಟಾಗಿದೆ.ಐನೂರಕ್ಕೂ ಅಧಿಕ ಕೋಳಿ ಸಾವನ್ನಪಿದೆ.ತಗ್ಗರ್ಸೆ, ಬೈಂದೂರು ಹಾಗೂ ಶಿರೂರು ಮುಂತಾದ ಕಡೆ ಅಪಾರ ಪ್ರಮಾಣದ ವಿದ್ಯುತ್ ಸಲಕರಣೆ, ವಿದ್ಯುತ್ ಬೇಲಿಗಳು ಮಿಂಚಿನ ಹೊಡೆತದಿಂದಾಗಿ ಸುಟ್ಟು ಹೋಗಿದೆ.

ಶಿರೂರು ಗ್ರಾಮದ ಕೋಟೆಮನೆ ನಿವಾಸಿ ಸರಸ್ವತಿ ಗಣಪತಿ ಮೇಸ್ತ ಇವರ ಮನೆಯ ಮೇಲೆ ಹಲಸಿನ ಮರ ಬಿದ್ದು ಸುಮಾರು ಎಪ್ಪತ್ತು ಸಾವಿರಕ್ಕೂ ಅಧಿಕ ನಷ್ಟ ಉಂಟಾಗಿದೆ.ಅಪಾರ ಪ್ರಮಾಣದಲ್ಲಿ ಅಡಿಕೆ,ಬಾಳೆ,ಕೃಷಿ ಗಿಡಗಳು ನೆಲಕ್ಕುರುಳಿದೆ. ಹಾನಿಯಾದ ಸ್ಥಳಕ್ಕೆ ಶಿರೂರು ಗ್ರಾಮ ಲೆಕ್ಕಾಧಿಕಾರಿ ವಿಜಯ ಕುಮಾರ್ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

Leave a Reply

Your email address will not be published. Required fields are marked *

9 − 6 =