ಬೈಂದೂರು: ಪಟ್ಟಣ ಪಂಚಾಯತ್ ವ್ಯಾಪ್ತಿಯಿಂದ ಗ್ರಾಮೀಣ ಭಾಗಗಳನ್ನು ಕೈ ಬಿಡಬೇಕೆಂದು ಬೈಂದೂರು ಭಾಗದ ಗ್ರಾಮೀಣ ಭಾಗದ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಪಕ್ಷಾತೀತವಾಗಿ ಬಾರಿ ಬೆಂಬಲ ವ್ಯಕ್ತವಾಗಿದೆ.ಬುಧವಾರ ಬೈಂದೂರು ರೈತ ಸಂಘದ ನಿಯೋಗ ಶಿವಮೊಗ್ಗ ತರಳಿ ಸಂಸದ ಬಿ ವೈ ರಾಘವೇಂದ್ರ ಬೇಟಿ ಮಾಡಿದರು.ಸಂಸದರು ರೈತರ ಹೋರಾಟಕ್ಕೆ ಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದ್ದು ರಾಜ್ಯದ ಸಂಬಂದಪಟ್ಟ ಸಚಿವರು ಅಧಿಕಾರಗಳ ಜೊತೆ ದೂರವಾಣಿ ಮೂಲಕ ಮಾತನಾಡಿ ರೈತರಿಗೆ ಪೂರಕವಾಗುವಂತೆ ಸಹಕರಿಸಲು ತಿಳಿಸಿದರು.ಬಳಿಕ ಮಾತನಾಡಿ ಬೈಂದೂರು ಅಭಿವೃದ್ದಿಯ ದೃಷ್ಟಿಯಿಂದ ಪಟ್ಟಣ ಪಂಚಾಯತ್ ಆಗಿರುವುದು ಸ್ವಾಗತಾರ್ಹ.ಆದರೆ ಹತ್ತಾರು ಕೀ.ಮೀ ವ್ಯಾಪ್ತಿಯ ಹಳ್ಳಿಯ ಸೇರ್ಪಡೆ ಸರಿಯಲ್ಲ.ಆರಂಭದಲ್ಲಿ ಅಧಿಕಾರಿಗಳು ಈ ಸಮಸ್ಯೆ ಮೇಲಾಧಿಕಾರಿಗಳಿಗೆ ಸಮರ್ಪಕ ಮಾಹಿತ ಸ್ಪಷ್ಟವಾಗಿ ನೀಡದಿರುವುದು ಕಾರಣವಾಗಿದೆ.ಪ್ರಸ್ತುತ ಹಳ್ಳಿಗಳನ್ನು ಕೈ ಬಿಟ್ಟು ತಿದ್ದುಪಡಿ ಮಾಡುವ ಅವಕಾಶದಲ್ಲಿ ರೈತರಿಗೆ ನ್ಯಾಯ ಸಿಗುವಲ್ಲಿ ಪೂರ್ಣ ಬೆಂಬಲ ಇದೆ ಎಂದರು
ಬೈಂದೂರು ಶಾಸಕರ ಬೇಟಿ; ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಬುಧವಾರ ರೈತರ ಧರಣಿಯಲ್ಲಿ ಭಾಗವಹಿಸಿದರು.ಬಳಿಕ ಮಾತನಾಡಿ ಪ.ಪಂ ವ್ಯಾಪ್ತಿಗೆ ಹಳ್ಳಿಗಳನ್ನು ಸೇರಿಸಿರುವುದು ಗ್ರಾಮೀಣ ಭಾಗಕ್ಕೆ ಮಾಡಿದ ಅನ್ಯಾಯ.ಇದರಿಂದ ಈಗಾಗಲೆ ಅಪಾರ ನಷ್ಟ ಮತ್ತು ಮಾನಸಿಕ ಯಾತನೆ ರೈತರು ಅನುಭವಿಸಿದ್ದಾರೆ.ಹೀಗಾಗಿ ಪ.ಪಂ ವ್ಯಾಪ್ತಿಯಿಂದ ಹಳ್ಳಿಗಳನ್ನು ಕೈ ಬಿಡಲೆ ಬೇಕು.ಈ ಕುರಿತು ಶಾಸಕನಾಗಿ ನನ್ನ ಪೂರ್ಣ ಬೆಂಬಲ ಇದೆ.ಮಾತ್ರವಲ್ಲದೆ ಪಕ್ಷದ ಹಾಗೂ ಸಂಘಟನೆಯ ನೆಲೆಯಲ್ಲಿ ಕೂಡ ಈ ಬಗ್ಗೆ ಹೋರಾಟ ನಡೆಸುತ್ತೆನೆ ಎಂದರು.ಅಕ್ರಮ ಸಕ್ರಮ 94 ಸಿ ವಿಲೆವಾರಿ ಅದಾಲತ್ ಕೂಡ ಹಮ್ಮಿಕೊಂಡಿರುವುದಾಗಿ ತಿಳಿಸಿದರು.

ಮಾಜಿ ಶಾಸಕ ಕೆ ಗೋಪಾಲ ಪೂಜಾರಿ ಕೂಡ ಬೆಂಗಳೂರಿನಲ್ಲಿ ವಿವಿದ ಸಚಿವರು ಅಧಿಕಾರಿಗಳನ್ನು ಬೇಟಿ ಮಾಡಿ ರೈತರ ಪರ ಸರಕಾರದ ಮಟ್ಟದಲ್ಲಿ ಪ್ರಯತ್ನಿಸುತ್ತಿದ್ದಾರೆ.ಬುಧವಾರ ಎಲ್ಲಾ ಪಕ್ಷದ ಕೆಲವು ಮುಖಂಡರು ವಿವಿಧ ಧಾರ್ಮಿಕ ಮುಖಂಡರು ಸಂಘ ಸಂಸ್ಥೆ ಮುಂದಾಳುಗಳು ಆಗಮಿಸಿ ರೈತರಿಗೆ ಬೆಂಬಲ ಸೂಚಿಸಿದರು. ಬೈಂದೂರು ರೈತ ಸಂಘದ ಹೋರಾಟ ಈಗಾಗಲೆ ಸಾವಿರಾರು ಸಂಖ್ಯೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದು ಬೈಂದೂರು ತಾಲೂಕು ಆಡಳಿತ ಕಛೇರಿ ಎದುರು ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿದ್ದು ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಈ ಹೋರಾಟ ಬಹಳ ಸುದ್ದಿಯಲ್ಲಿದ್ದು ದಿನದಿಂದ ದಿನಕ್ಕೆ ಹೋರಾಟದ ತೀವ್ರತೆ ಹೆಚ್ಚುತ್ತಿದ್ದು ಆದಷ್ಟು ಬೇಗ ನ್ಯಾಯ ಒದಗಿಸಿಕೊಡಬೇಕೆನ್ನುವುದು ರೈತರ ಆಗ್ರಹವಾಗಿದೆ.