ಬೈಂದೂರು: ಪಟ್ಟಣ ಪಂಚಾಯತ್ ವ್ಯಾಪ್ತಿಯಿಂದ ಗ್ರಾಮೀಣ ಭಾಗಗಳನ್ನು ಕೈಬಿಡಬೇಕೆಂದು ಆಗ್ರಹಿಸಿ ಬೈಂದೂರು ರೈತ ಸಂಘದ  ವತಿಯಿಂದ ನಡೆಯುತ್ತಿರುವ ಪ್ರತಿಭಟನೆ ಮೂರನೆ ದಿನಕ್ಜೆ ಕಾಲಿಟ್ಟಿದೆ ಬೈಂದೂರು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ ಶೆಟ್ಟಿ ಮಾತನಾಡಿ ಬಡ ರೈತರಿಗೆ ನ್ಯಾಯ ಆಗ್ರಹಿಸಿ ನಡೆಯುತ್ತಿರುವ ಈ ಹೋರಾಟಕ್ಕೆ ಬೈಂದೂರು ಕ್ಷೇತ್ರ  ಜಿಲ್ಲೆ ರಾಜ್ಯಗಳಿಂದ ಉತ್ತಮ ಸ್ಪಂದನೆ ಮತ್ತು ಬೆಂಬಲ ದೊರೆತಿದೆ.ನಮ್ನ ಹೋರಾಟವನ್ನು ಹಿನ್ನೆಡೆ ಮಾಡಲು ಯಾರಿಂದಲು ಸಾದ್ಯವಿಲ್ಲ.ಜನಪ್ರತಿನಿಧಿಗಳು ಸಾಧ್ಯವಾದರೆ ನಮ್ಮ ರೈತರ ಜೊತೆ ಬಂದು ನಮಗೆ ಬೆಂಬಲ ನೀಡಿ ಅದನ್ನು ಬಿಟ್ಟು ರಾಜಕಾರಣ ಮಾಡುವ ಪ್ರಯತ್ನ  ಮಾಡಿ ಬಡ ರೈತರಿಗೆ ದಾರಿ ತಪ್ಪಿಸುವ ಕೆಲಸ ಮಾಡಬೇಡಿ ಎಂದರು ಪ್ರತಿಭಟನೆ ತೀವ್ರತೆ ಪಡೆಯುತ್ತಿದ್ದಂತೆ ಈಗ ಹಳ್ಳಿಗಳ ನೆನಪಾಗಿದೆ.ಅಕ್ರಮ ಸಕ್ರಮ ವಿಲೇವಾರಿ ಅಧಿಕಾರಿಗಳ ಸಭೆ ಸಮೀಕ್ಷೆ ಈ ನಾಟಕ ರೈತರೆದುರು ನಡೆಯುವುದಿಲ್ಲ.ಸಾದ್ಯವಾದರೆ ಸರಕಾರದ ಮಟ್ಟದಲ್ಲಿ ಪ್ರಯತ್ನಿಸಿ ಹಳ್ಳಿಗಳಿಗೆ ನ್ಯಾಯ ಒದಗಿಸಿಕೊಡಿ ಎಂದರು.

ರೈತ ಮುಖಂಡ ವೀರಭದ್ರ ಗಾಣಿಗ ಮಾತನಾಡಿ ದೀಪಕ್ ಕುಮಾರ ಶೆಟ್ಟಿ ಯವರನ್ನು ನಮ್ಮ ಹೋರಾಟಕ್ಕೆ ನಾಯಕರನ್ನಾಗಿ ನೇಮಿಸಿಕೊಂಡು ಪಕ್ಷಾತೀತವಾಗಿ ಹೋರಾಡುತ್ತಿದ್ದೇವೆ.ಇದರಲ್ಲಿ ಯಾವ ರಾಜಕೀಯವು ಇಲ್ಲ. ದೀಪಕ್ ಕುಮಾರ ಶೆಟ್ಟಿಯವರ ಜೊತೆ ಸಮಸ್ತ ಬೈಂದೂರು ಭಾಗದ ರೈತರು ಬಡವರ ಸಹಕಾರ ಇದೆ ಎಂದರು.

ಪಟ್ಟಣ ಪಂಚಾಯತ್ ನಾಮನಿರ್ದೇಶಿತ ಸದಸ್ಯ ನಾಗರಾಜ ಶೆಟ್ಟಿ ಮಾತನಾಡಿ ಬೈಂದೂರು ಪಟ್ಟಣ ಪಂಚಾಯತ್ ವಿರೋಧಸಿ ಆರಂಭದಿಂದಲೂ ಹೋರಾಟ ನಡೆಸುತ್ತಿದ್ದು ಗ್ರಾಮೀಣ ಭಾಗಗಳನ್ನುಸೇರಿಸಿರುವುದು ಅನ್ಯಾಯ.ಇದರ ಬಗ್ಗೆ ಎಲ್ಲರ ವಿರೋಧವಿದೆ ದೀಪಕ್ ಕುಮಾರ ಶೆಟ್ಡಿ ಬೈಂದೂರು ಭಾಗದ ಪಕ್ಷಾತೀತ ನಾಯಕ ಅವರ ಸ್ವಾರ್ಥಕ್ಕಾಗಿ ಹೋರಾಡುತ್ತಿಲ್ಲ ರೈತರಿಗಾಗಿ ಹೋರಾಡುತ್ತಿದ್ದು ಅವರ ಬೆನ್ನಿಗೆ ನಮ್ಮ ಸಂಪೂರ್ಣ ಬೆಂಬಲ ಇದೆ ಎಂದರು.

ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಪೂಜಾರಿ ಮಾತನಾಡಿ ಪಟ್ಟಣ ಪಂಚಾಯತ್ ಯಾರು ಮಾಡಿದ್ದಾರೆ ಎನು ತಪ್ಪಾಗಿದೆ ಅನ್ನುವ ಚರ್ಚೆ ಈಗ ಬೇಡ ಅದೆಲ್ಲ ಬದಿಗಿಟ್ಟು ಪ್ರಸ್ತುತ ರೈತರಿಗೆ ಗ್ರಾಮೀಣ ಭಾಗಕ್ಕೆ ನ್ಯಾಯ ದೊರಕಿಸಿಕೊಡಬೇಕು ಸರಕಾರದ ಮಟ್ಟದಲ್ಲಿ ನಮ್ಮ ನಾಯಕರು ಪ್ರಯತ್ನಿಸಿ ಹಳ್ಳಿಗಳಿಗೆ ಮುಕ್ತಿ ನೀಡಬೇಕು ಎಂದರು.

ಈ ಸಂದರ್ಭದಲ್ಲಿ ಗಣೇಶ ಪೂಜಾರಿ,ಸುಧಾಕರ ಶೆಟ್ಟಿ ಉಪ್ಪುಂದ,ನಾಗಪ್ಪ ಮರಾಠಿ,ಮಂಜು ಪೂಜಾರಿ ಉಪ್ಪುಂದ,ವಾಸುದೇವ ಮರಾಠಿ,ಲಿಮೋನ್ ಅತ್ಯಾಡಿ ಸೇರಿದಂತೆ ಅನೇಕ ಮುಖಂಡರು ಆಗಮಿಸಿ ಬೆಂಬಲ ಸೂಚಿಸಿದರು. ಇಂದಿನ ಪ್ರತಿಭಟನೆಯಲ್ಲಿ ತಗ್ಗರ್ಸೆ ನಿರೋಡಿ ಭಾಗದ ರೈತರು ನೇತ್ರತ್ವ ವಹಿಸಿದ್ದರು.

ಅರುಣ್ ಕುಮಾರ್ ಶಿರೂರು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.

 

Leave a Reply

Your email address will not be published. Required fields are marked *

eight − 1 =