ಬೈಂದೂರು: ಇತ್ತೀಚೆಗೆ ಮರವಂತೆ ಬೀಚ್ ಬಳಿ ಬಸ್ ಹಾಗೂ ಟ್ಯಾಂಕರ್ ನಡುವೆ ಅಪಘಾತ ಸಂಭವಿಸಿದ  ಸ್ಥಳಕ್ಕೆ ಶುಕ್ರವಾರ ಬೈಂದೂರು ವೃತ್ತ ನಿರೀಕ್ಷಕ ಶಿವಕುಮಾರ್ ನೇತ್ರತ್ವದಲ್ಲಿ  ಅಧಿಕಾರಿಗಳ ತಂಡ ಬೇಟಿ ನೀಡಿ ಜಂಟಿ ಪರಿಶೀಲನೆ ನಡೆಸಿದರು.ಪರಿಶೀಲನಾ ತಂಡದಲ್ಲಿ ವೃತ್ತ ನಿರೀಕ್ಷಕ ಶಿವಕುಮಾರ್,ಆರ್.ಟಿ.ಓ ಅಧಿಕಾರಿಗಳು ಹಾಗೂ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಹಾಜರಿದ್ದರು.

ಈ ಸಂದರ್ಭದಲ್ಲಿ ಅಪಘಾತ ನಿಯಂತ್ರಣಕ್ಕಾಗಿ ನೋ ಪಾರ್ಕಿಂಗ್ ಫಲಕ,ವೇಗ ನಿಯಂತ್ರಣ ಫಲಕ,ಪ್ರತಿಫಲನಾ ಫಲಕ ಹಾಗೂ ಅಪಘಾತ ವಲಯ ಸೂಚನಾ ಫಲಕಗಳನ್ನು ಅಳವಡಿಸಲು ಸೂಚಿಸಲಾಯಿತು ಹಾಗೂ  ಸಮುದ್ರ ಕಿನಾರೆಯಾಗಿರುವ ಕಾರಣ ಪ್ರವಾಸಿಗರ ವಾಹನ ನಿಯಂತ್ರಣ ಮತ್ತು ಸೂಕ್ತ ಮುನ್ನೆಚ್ಚರಿಕೆ ವಹಿಸಿ ಇಂತಹ ಅಪಘಾತ ಮರುಕಳಿಸದಂತೆ ಸಂಬಂಧಪಟ್ಟ ಇಲಾಖೆಗಳಿಗೆ ಸ್ಪಷ್ಟ ಮಾಹಿತಿ ಹಾಗೂ ಮುಂಜಾಗೃತೆ ವಹಿಸುವಂತೆ ತಿಳಿಸಲಾಯಿತು.

ವರದಿ/ಗಿರಿ ಶಿರೂರು

 

Leave a Reply

Your email address will not be published. Required fields are marked *

three × three =