ತೊಂಬತ್ತೇಳು ಗ್ರಾಮ ಪಂಚಾಯತ್ ಗಳಿಗೆ ಒಬ್ಬನೆ ರಾಜಕುಮಾರ,ಬೈಂದೂರು ಪಂಚಾಯತ್ ರಾಜ್ ಇಲಾಖೆಯಲ್ಲಿ ಎಂಜಿನಿಯರ್ ಗಳೇ ಇಲ್ಲ!
ಬೈಂದೂರು: ಸರಕಾರ ಗ್ರಾಮಗಳ ಅಭಿವೃದ್ದಿಗೆ ನೂರೆಂಟು ಯೋಜನೆಗಳನ್ನು ಜಾರಿಗೆ ತರುತ್ತದೆ.ಅನುಷ್ಟಾನಕ್ಕೆ ಹತ್ತಾರು ಅಧಿಕಾರಿಗಳನ್ನು ನಿಯೋಜಿಸುತ್ತದೆ.ಪ್ರತಿ ಗ್ರಾಮ ಪಂಚಾಯತ್ ಮೂಲಕ ಅಭಿವೃದ್ದಿ ಯೋಜನೆಗಳನ್ನು ನಿರ್ವಹಿಸುತ್ತದೆ.ಆದರೆ ಬೈಂದೂರು ತಾಲೂಕಿನಲ್ಲಿ ಪಂಚಾಯತ್‌ರಾಜ್ ಯೋಜನೆ ಕಾಮಗಾರಿ ನಿರ್ವಹಿಸಬೇಕಾದ ಬಹುದೊಡ್ಡ ಇಲಾಖೆಯಲ್ಲಿ ಒಂದೇ ಒಂದು ಇಂಜಿನಿಯರ್‌ಗಳಿಲ್ಲ.ಇದರ ಪರಿಣಾಮ ಸಮೃದ್ದ…
ಬೈಂದೂರು: ದಲಿತ ಸಂಘಟನೆ ವತಿಯಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ
ಬೈಂದೂರು: ಜಿಲ್ಲೆಯ ವಿವಿಧ ದಲಿತ ಸಂಘಟನೆ ಇದರ ವತಿಯಿಂದ ಶಿರೂರು ಗ್ರಾಮದಲ್ಲಿ ದಲಿತರಿಗೆ ಮೀಸಲಿಟ್ಟ ಡಿಸಿ ಮನ್ನಾಭೂಮಿ ದಲಿತರಿಗೆ ನೀಡದೆ ದಲಿತರ ಸಾಂವಿಧಾನಿಕ ಹಕ್ಕುಗಳ ಕಗ್ಗೊಲೆ ಮಾಡಿದ ಉಡುಪಿ ಜಿಲ್ಲಾಡಳಿತದ ದಲಿತ ವಿರೋಧಿ ನಡವಳಿಕೆ ಖಂಡಿಸಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಬೈಂದೂರು…
ಬೈಂದೂರು ತಾಲೂಕು ಭೂನ್ಯಾಯ ಮಂಡಳಿ ಸದಸ್ಯರಾಗಿ ಉದಯ ಪೂಜಾರಿ ಆಯ್ಕೆ
ಬೈಂದೂರು: ಬೈಂದೂರು ತಾಲೂಕು ಭೂನ್ಯಾಯ ಮಂಡಳಿ ಇದರ ನೂತನ ಸದಸ್ಯರಾಗಿ ಉದಯ ಪೂಜಾರಿ ಶಿರೂರು ಆಯ್ಕೆಯಾಗಿದ್ದಾರೆ.ಶಿರೂರು ಗ್ರಾಮ ಪಂಚಾಯತ್ ಸದಸ್ಯರಾಗಿರುವ ಇವರು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಯವರ ಶಿಫಾರಸ್ಸಿನ ಮೇರೆಗೆ ಆಯ್ಕೆ ಮಾಡಲಾಗಿದೆ.
ಗಲ್ಪ್ ರಾಷ್ಟ್ರದ ವಿಶ್ವಮಾನ್ಯ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಸಾಧನ್‌ದಾಸ್ ಶಿರೂರು ನೇಮಕ
ಬೈಂದೂರು: ಗಲ್ಪ್ ರಾಷ್ಟ್ರದ ವಿಶ್ವಮಾನ್ಯ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಸಾಧನ್‌ದಾಸ್ ಶಿರೂರು ನೇಮಕಗೊಂಡಿದ್ದಾರೆ ಇವರು ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಗಲ್ಪ್ ರಾಷ್ಟ್ರದ ಅಧ್ಯಕ್ಷರು ಹಾಗೂ ಕನ್ನಡಿಗರ ಕನ್ನಡ ಕೂಟ ದುಬೈ ಸಂಸ್ಥೆಯ ಅಧ್ಯಕ್ಷರಾಗಿ ಕನ್ನಡ ನಾಡು, ನುಡಿ, ಸಾಹಿತ್ಯ,…
ಜಲಜೀವನ್ ಮಿಷನ್ ಯೋಜನೆ,ನೀರು ಕೊಡುವ ಮುನ್ನವೇ ದೂಳು ತಿನ್ನಿಸಿದ ಗುತ್ತಿಗೆದಾರರು
ಬೈಂದೂರು: ಕೇಂದ್ರ ಸರಕಾರದ ಮಹತ್ವಕಾಂಕ್ಷೆ ಯೋಜನೆಯಾದ ಜಲಜೀವನ್ ಮಿಷನ್ ಯೋಜನೆಯ ಘರ್‌ಘರ್ ಗಂಗಾಜಲ್ ಕಲ್ಪನೆಯ ಮನೆಮನೆಗೆ ಕುಡಿಯುವ ನೀರು ಸಂಪರ್ಕ ಯೋಜನೆ ತಾಲೂಕಿನಾದ್ಯಂತ ಪ್ರಗತಿಯಲ್ಲಿದೆ.ಸುಮಾರು 585 ಕೋಟಿ ರೂಪಾಯಿ ಅನುದಾನದ ಕಾಮಗಾರಿ ಇದಾಗಿದ್ದು ಗ್ರಾಮ ಮಟ್ಟದಲ್ಲಿ ಸ್ಥಳೀಯ ಗುತ್ತಿಗಾದಾರರು ಒಪ್ಪಂದದ ಮೂಲಕ…
ಬಿಜೂರು ಸ.ಹಿ.ಪ್ರಾ.ಶಾಲೆ ಉಪ್ಪುಂದ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ದತ್ತು ಸ್ವೀಕಾರದ ಆಮಂತ್ರಣ ಪತ್ರಿಕೆ ಬಿಡುಗಡೆ
ಬೈಂದೂರು: ಡಾ. ಗೋವಿಂದ ಬಾಬು ಪೂಜಾರಿ ಸಾರಥ್ಯದ ಉಪ್ಪುಂದ ಶ್ರೀ ವರಮಹಾಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮಾ.05 ರಂದು ನಡೆಯುವ ನಮ್ಮೂರ ಶಾಲೆ ದತ್ತು ಸ್ವೀಕಾರ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಬಿಜೂರು ಮೂರ್ಗೋಳ್ಳಿಹಕ್ಲು ಶ್ರೀ ನಂದಿಕೇಶ್ವರ ದೈವಸ್ಥಾನದಲ್ಲಿ ಶನಿವಾರ…
ಬಿಜೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಉಪ್ಪುಂದ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ದತ್ತು ಸ್ವೀಕಾರ,ಹುಟ್ಟೂರ ಶಾಲೆಯನ್ನು ಮಾದರಿ ಶಾಲೆಯನ್ನಾಗಿಸುವ ಕನಸು:ಡಾ.ಗೋವಿಂದ ಬಾಬು ಪೂಜಾರಿ
ಬೈಂದೂರು: ಬೈಂದೂರು ಕ್ಷೇತ್ರದ ಬಿಜೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಉಪ್ಪುಂದ ವತಿಯಿಂದ ದತ್ತು ಸ್ವೀಕಾರ ಕಾರ್ಯಕ್ರಮ ಮಾರ್ಚ್ 05 ರಂದು ಸಂಜೆ 6 ಗಂಟೆಗೆ ಬಿಜೂರು ಶಾಲಾ ಆವರಣದಲ್ಲಿ ದತ್ತು ಸ್ವೀಕಾರ ಸಮಾರಂಭ ಮತ್ತು…
ಧ.ಗ್ರಾ.ಯೋಜನೆ ಬೈಂದೂರು ವಲಯ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ,ಧಾರ್ಮಿಕ ಆಚರಣೆಗಳು ಶ್ರೇಯಸ್ಸು ನೀಡುವ ಜೊತೆಗೆ ಬದುಕಿಗೆ ನೆಮ್ಮದಿಯ ಸಂತೃಪ್ತಿ ನೀಡುತ್ತದೆ;ಬಿ.ಚಂದ್ರಶೇಖರ ನಾವಡ
ಬೈಂದೂರು: ಧಾರ್ಮಿಕ ಆಚರಣೆಗಳು ಶ್ರೇಯಸ್ಸು ನೀಡುವ ಜೊತೆಗೆ ಬದುಕಿಗೆ ನೆಮ್ಮದಿಯ ಸಂತೃಪ್ತಿ ನೀಡುತ್ತದೆ.ದೂರದೃಷ್ಟಿತ್ವದ ಕನಸಿನೊಂದಿಗೆ ಸಾವಿರಾರು ಕುಟುಂಬಗಳಿಗೆ ಧ.ಗ್ರಾ.ಯೋಜನೆ ಸ್ವಾವಲಂಬನೆಯ ಬದುಕು ನೀಡಿದೆ.ಸಾಮೂಹಿಕ ಸತ್ಯನಾರಾಯಣ ಪೂಜೆ ಮೂಲಕ ಗ್ರಾಮಾಭಿವೃದ್ದಿ ಯೋಜನೆಯ ಸದಸ್ಯರ ಕುಟುಂಬಗಳ ಜೊತೆಗೆ ಸಮಾಜಕ್ಕೂ ಕೂಡ ಒಳಿತು ನೀಡಲಿ ಎನ್ನುವುದು…
ಸದ್ಗುರು ಶ್ರೀ ಶಾಂತಾನಂದ ಆಶ್ರಮ ಪೇಟೆ ಶಿರೂರು ನೂತನ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ
ಶಿರೂರು: ಸದ್ಗುರು ಶ್ರೀ ಶಾಂತಾನಂದ ಆಶ್ರಮ ಪೇಟೆ ಶಿರೂರು ಇದರ ದೇವಸ್ಥಾನದ ಕಟ್ಟಡ ಜೀರ್ಣಾವಸ್ಥೆಯಲ್ಲಿದ್ದು ಆ ಪ್ರಯುಕ್ತ ಸುಮಾರು 1 ಕೋಟಿ 40 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲ್ಲಿರುವ ದೇವಸ್ಥಾನದ ನೂತನ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ ಗುರುವಾರ ನಡೆಯಿತು. ಅಶ್ರಮದ ಟ್ರಸ್ಟಿ…
ಹೊಸೂರು ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ಉದ್ಘಾಟನೆ,ಕ್ರೀಡೆಯ ಮೂಲಕ ಸಂಘಟನೆ ಮತ್ತು ಸಾಮರಸ್ಯ ಮೂಡಿಸುವುದು.ಊರಿನ ಅಭಿವೃದ್ದಿಯ ಜೊತೆಗೆ ಉತ್ತಮ ಬೆಳವಣೆಗೆ;ಮ್ಯಾಥ್ಯೂ ಕೆ.ಎಸ್
ಶಿರೂರು: ಶ್ರೀ ಚಿಕ್ಕಮ್ಮ ಚೆನ್ನಮ್ಮ ಪ್ರೆಂಡ್ಸ್ ಹೊಸೂರು ಹಾಗೂ ಬೈಂದೂರು ತಾಲೂಕು ಅಮೇಚೂರ್ ಕಬಡ್ಡಿ ಅಸೋಶಿಯೇಷನ್ ಇವರ ಜಂಟಿ ಆಶ್ರಯದಲ್ಲಿ ದ್ವಿತೀಯ ವರ್ಷದ ಮರಾಠಿ ಬಾಂಧವರ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟ ಶ್ರೀ ಚಿಕ್ಕಮ್ಮ ಚೆನ್ನಮ್ಮ ದೇವಸ್ಥಾನದ ವಠಾರದಲ್ಲಿ ನಡೆಯಿತು.…