ಶಿರೂರು: ಶ್ರೀ ಚಿಕ್ಕಮ್ಮ ಚೆನ್ನಮ್ಮ ಪ್ರೆಂಡ್ಸ್ ಹೊಸೂರು ಹಾಗೂ ಬೈಂದೂರು ತಾಲೂಕು ಅಮೇಚೂರ್ ಕಬಡ್ಡಿ ಅಸೋಶಿಯೇಷನ್ ಇವರ ಜಂಟಿ ಆಶ್ರಯದಲ್ಲಿ ದ್ವಿತೀಯ ವರ್ಷದ ಮರಾಠಿ ಬಾಂಧವರ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟ ಶ್ರೀ ಚಿಕ್ಕಮ್ಮ ಚೆನ್ನಮ್ಮ ದೇವಸ್ಥಾನದ ವಠಾರದಲ್ಲಿ ನಡೆಯಿತು.
ಉದ್ಯಮಿ ಹಾಗೂ ಮಾಜಿ ಗ್ರಾ.ಪಂ ಸದಸ್ಯ ಮ್ಯಾಥ್ಯೂ ಕೆ.ಎಸ್ ಕಬಡ್ಡಿ ಪಂದ್ಯಾಟ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ಗ್ರಾಮೀಣ ಭಾಗದ ಕ್ರೀಡೆಯಾದ ಕಬಡ್ಡಿ ಜಾಗತಿಕ ಮನ್ನಣೆಗಳಿಸಿಕೊಂಡಿದೆ.ಕಠಿಣ ಪರಿಶ್ರಮ ಮತ್ತು ಆಸಕ್ತಿ ಪ್ರತಿಯೊಬ್ಬರನ್ನು ಯಶಸ್ಸಿನತ್ತಕೊಂಡೊಯುತ್ತದೆ.ಕ್ರೀಡೆಯ ಮೂಲಕ ಸಂಘಟನೆ ಮತ್ತು ಸಾಮರಸ್ಯ ಮೂಡಿಸುವುದು.ಊರಿನ ಅಭಿವೃದ್ದಿಯ ಜೊತೆಗೆ ಉತ್ತಮ ಬೆಳವಣೆಗೆ ಎಂದರು.
ವಕೀಲರಾದ ವಸಂತ್‌ರಾಜ್ ಬಿಲ್ಲವ ಹೊಸೂರು ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಪತ್ರಕರ್ತ ಅರುಣ್ ಕುಮಾರ್ ಶಿರೂರು,ಸಂಚಲನದ ಅಧ್ಯಕ್ಷ ಮಹಾದೇವ ಮರಾಠಿ,ಉದ್ಯಮಿ ನಾರಾಯಣ ಶೆಟ್ಟಿ ಕುಂಟವಾಣಿ,ಮಾಜಿ ಗ್ರಾ.ಪಂ ಸದಸ್ಯ ಉದಯ ಮಾಕೋಡಿ,ಗಣಪ ಮರಾಠಿ ಗಂಗನಾಡು,ಪ್ರದೀಪ ಸಿ.ಜೆ ಹೊಸೂರು,ಹರೀಶ ಮರಾಠಿ ನಿರೋಡಿ,ನಾರಾಯಣ ಮರಾಠಿ ಹೊಸೂರು,ತಿಮ್ಮ ಮರಾಠಿ ಹೊಸೂರು,ಕೃಷ್ಣ ಮರಾಠಿ ಹೊಸೂರು,ಗುರಿಕಾರ ಗಣೇಶ ಮರಾಠಿ,ರಾಜೇಶ ಪೂಜಾರಿ ಹೊಸೂರು,ಮಹಾದೇವ ಪೂಜಾರಿ ಕಿಸ್ಮತ್ತಿ,ದೇವೇಂದ್ರ ಮರಾಠಿ ಹೊಸೂರು,ಈರಪ್ಪ ಪೂಜಾರಿ ಹೊಸೂರು,ನಾಗರಾಜ ಮರಾಠಿ ಹೊಸೂರು,ಮುದಾಸಿರ್ ಮುಬಾರಕ್ ಭಟ್ಕಳ, ಚಿಕ್ಕಮ್ಮ ಚೆನ್ನಮ್ಮ ಪ್ರೆಂಡ್ಸ್ ಹೊಸೂರು ಅಧ್ಯಕ್ಷ ದಯಾನಂದ ಮರಾಠಿ,ಕಾರ್ಯದರ್ಶಿ ರಾಜೇಶ್ ಮರಾಠಿ ಉಪಸ್ಥಿತರಿದ್ದರು.
ವಾಸುದೇವ ಮರಾಠಿ ಹೊಸೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು.ನಾಗಪ್ಪ ಮರಾಠಿ ಹೊಸೂರು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.ರಾಜು ಮರಾಠಿ ವಂದಿಸಿದರು.
News/Giri shiruru