ಬೈಂದೂರು: ಗಲ್ಪ್ ರಾಷ್ಟ್ರದ ವಿಶ್ವಮಾನ್ಯ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಸಾಧನ್‌ದಾಸ್ ಶಿರೂರು ನೇಮಕಗೊಂಡಿದ್ದಾರೆ ಇವರು ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಗಲ್ಪ್ ರಾಷ್ಟ್ರದ ಅಧ್ಯಕ್ಷರು ಹಾಗೂ ಕನ್ನಡಿಗರ ಕನ್ನಡ ಕೂಟ ದುಬೈ ಸಂಸ್ಥೆಯ ಅಧ್ಯಕ್ಷರಾಗಿ ಕನ್ನಡ ನಾಡು, ನುಡಿ, ಸಾಹಿತ್ಯ, ಸಂಸ್ಕೃತಿಯನ್ನು ಬೆಳೆಸುವಲ್ಲಿ ಮಹತ್ತರ ಕೆಲಸಗಳನ್ನು ಮಾಡಿರುತ್ತಾರೆ. 9 ನವೆಂಬರ್ 2022 ರಂದು ದುಬೈ ಮಹಾನಗರದಲ್ಲಿ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಆಯೋಜಿಸಿದ್ದ ಮೊದಲ ವಿಶ್ವ ಕನ್ನಡ ಹಬ್ಬವನ್ನು ಯಶಸ್ವಿಗೊಳಿಸಲು ಶ್ರಮಿಸಿರುತ್ತಾರೆ. ದುಬೈ ರಾಷ್ಟ್ರದ ಕನ್ನಡಿಗರ ಬೆನ್ನೆಲುಬಾಗಿ ಅವರ ಕಷ್ಟ ಕಾರ್ಪಣ್ಯಗಳಿಗೆ ಸದಾ ಸ್ಪಂದಿಸುತ್ತಿದ್ದಾರೆ.ಇವರ ಸೇವೆ ಸಾಧನೆಗಳಿಗೆ ಮೆಚ್ಚುಗೆ ಸೂಚಿಸಿ ಸಿಂಗಾಪುರದಲ್ಲಿ ಆಯೋಜಿಸಿರುವ 2ನೇ ವಿಶ್ವ ಕನ್ನಡ ಹಬ್ಬದಲ್ಲಿ ಪ್ರಧಾನ ಮಾಡಲಾಗುತ್ತಿರುವ ವಿಶ್ವಮಾನ್ಯ ಪ್ರಶಸ್ತಿ’ಗೆ ಗಲ್ಪ್ ರಾಷ್ಟ್ರದ ಆಯ್ಕೆ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದ್ದು ಸಂಸ್ಥೆ ಅಭಿನಂದನೆಗಳನ್ನು ಸಲ್ಲಿಸಿದೆ.