ಬೈಂದೂರು: ಧಾರ್ಮಿಕ ಆಚರಣೆಗಳು ಶ್ರೇಯಸ್ಸು ನೀಡುವ ಜೊತೆಗೆ ಬದುಕಿಗೆ ನೆಮ್ಮದಿಯ ಸಂತೃಪ್ತಿ ನೀಡುತ್ತದೆ.ದೂರದೃಷ್ಟಿತ್ವದ ಕನಸಿನೊಂದಿಗೆ ಸಾವಿರಾರು ಕುಟುಂಬಗಳಿಗೆ ಧ.ಗ್ರಾ.ಯೋಜನೆ ಸ್ವಾವಲಂಬನೆಯ ಬದುಕು ನೀಡಿದೆ.ಸಾಮೂಹಿಕ ಸತ್ಯನಾರಾಯಣ ಪೂಜೆ ಮೂಲಕ ಗ್ರಾಮಾಭಿವೃದ್ದಿ ಯೋಜನೆಯ ಸದಸ್ಯರ ಕುಟುಂಬಗಳ ಜೊತೆಗೆ ಸಮಾಜಕ್ಕೂ ಕೂಡ ಒಳಿತು ನೀಡಲಿ ಎನ್ನುವುದು ಕಾವಂದರ ಆಶಯ ಎಂದು ಆದ್ಯಾತ್ಮಿಕ ಚಿಂತಕ ಹಾಗೂ ಲೇಖಕ ಬಿ.ಚಂದ್ರಶೇಖರ ನಾವಡ ಹೇಳಿದರು ಅವರು ಧ.ಗ್ರಾ.ಯೋಜನೆ ಬಿ.ಸಿ ಟ್ರಸ್ಟ್ ಬೈಂದೂರು,ಸಾಮೂಹಿಕ ಸತ್ಯನಾರಾಯಣ ಪೂಜಾ ಸಮಿತಿ ಹಾಗೂ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಬೈಂದೂರು ವಲಯ ಇದರ ವತಿಯಿಂದ ಜೆ.ಎನ್.ಆರ್ ಕಲಾ ಮಂದಿರ ಯಡ್ತರೆಯಲ್ಲಿ ನಡೆದ ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಈ ಮಾತುಗಳನ್ನಾಡಿದರು.
ಧ.ಗ್ರಾ.ಯೋಜನೆಯ ಕೇಂದ್ರ ಸಮಿತಿ ಅಧ್ಯಕ್ಷ ವಾಸು ಮೇಸ್ತ ಶಿರೂರು ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಹಿರಿಯ ಧಾರ್ಮಿಕ ಮುಖಂಡ ಬಿ.ಅಪ್ಪಣ್ಣ ಹೆಗ್ಡೆ,ಜನಜಾಗೃತಿ ವೇದಿಕೆ ಯೋಜನಾಧಿಕಾರಿ ಗಣೇಶ ಪಿ.ಆಚಾರ್ಯ,ಸಾಮೂಹಿಕ ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷ ರಘುರಾಮ ಕೆ.ಪೂಜಾರಿ,ಜಿ.ಪಂ ಮಾಜಿ ಸದಸ್ಯ ಕೆ.ಬಾಬು ಶೆಟ್ಟಿ,ಬೈಂದೂರು ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಸುಧಾಕರ ಆಚಾರ್ಯ,ಬೈಂದೂರು ತಾಲೂಕು ಭಜನಾ ಪರಿಷತ್ ಅಧ್ಯಕ್ಷ ಕೃಷ್ಣ ಪೂಜಾರಿ,ಬೈಂದೂರು ಆರಕ್ಷಕ ಠಾಣೆಯ ಠಾಣಾಧಿಕಾರಿ ತಿಮ್ಮೇಶ್ ಬಿ.ಎನ್, ಎನ್.ಐ.ಎಸ್.ಟಿ ಉಡುಪಿ ಪ್ರಾಂಶುಪಾಲ ಉಲ್ಲಾಸ ಮೇಸ್ತ ಉಪಸ್ಥಿತರಿದ್ದರು.
ಧ.ಗ್ರಾ.ಯೋಜನೆಯ ಯೋಜನಾಧಿಕಾರಿ ಕೆ.ವಿನಾಯಕ ಪೈ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಬೈಂದೂರು ವಲಯ ಮೇಲ್ವಿಚಾರಕ ರಾಮ ಎನ್.ಸ್ವಾಗತಿಸಿದರು.ಕೃಷಿ ಮೇಲ್ವಿಚಾರಕ ರಾಜು ಕಾರ್ಯಕ್ರಮ ನಿರ್ವಹಿಸಿದರು.ಸೇವಾಪ್ರತಿನಿಧಿ ರೇವತಿ ವಂದಿಸಿದರು.
News/Giri shiruru
pic/Shabari Studio yadthare