ಬೈಂದೂರು: ಸರಕಾರ ಗ್ರಾಮಗಳ ಅಭಿವೃದ್ದಿಗೆ ನೂರೆಂಟು ಯೋಜನೆಗಳನ್ನು ಜಾರಿಗೆ ತರುತ್ತದೆ.ಅನುಷ್ಟಾನಕ್ಕೆ ಹತ್ತಾರು ಅಧಿಕಾರಿಗಳನ್ನು ನಿಯೋಜಿಸುತ್ತದೆ.ಪ್ರತಿ ಗ್ರಾಮ ಪಂಚಾಯತ್ ಮೂಲಕ ಅಭಿವೃದ್ದಿ ಯೋಜನೆಗಳನ್ನು ನಿರ್ವಹಿಸುತ್ತದೆ.ಆದರೆ ಬೈಂದೂರು ತಾಲೂಕಿನಲ್ಲಿ ಪಂಚಾಯತ್‌ರಾಜ್ ಯೋಜನೆ ಕಾಮಗಾರಿ ನಿರ್ವಹಿಸಬೇಕಾದ ಬಹುದೊಡ್ಡ ಇಲಾಖೆಯಲ್ಲಿ ಒಂದೇ ಒಂದು ಇಂಜಿನಿಯರ್‌ಗಳಿಲ್ಲ.ಇದರ ಪರಿಣಾಮ ಸಮೃದ್ದ ಬೈಂದೂರಿನ ಸಮಗ್ರ ಅಭಿವೃದ್ದಿ ಕುಂಠಿತಗೊಳ್ಳುವಂತಾಗಿದೆ.
ಎನಿದು ಸಮಸ್ಯೆ: ಜಿ.ಪಂ ಹಾಗೂ ತಾ.ಪಂ ಹಾಗೂ ಗ್ರಾಮ ಪಂಚಾಯತ್ ಮೂಲಕ ಸರಕಾರ ರಸ್ತೆ,ಸೇತುವೆ,ನೀರಾವರಿ ಕಾಮಗಾರಿಗಾಗಿ ಅನುದಾನ ಮೀಸಲಿಡುತ್ತಿದೆ.ಇದರ ನಿರ್ವಹಣೆಯನ್ನು ಪಂಚಾಯತ್‌ರಾಜ್ ಇಂಜಿನಿಯರಿಂಗ್ ಇಲಾಖೆ ನಿರ್ವಹಿಸಬೇಕಿದೆ.ಇದರ ಜೊತೆಗೆ ಶಾಸಕರ ಅನುದಾನ,ಸಂಸದರ ಯೋಜನೆಗಳನ್ನು ಕೂಡಸೇರಿಕೊಳ್ಳುತ್ತದೆ.ಬೈಂದೂರು ಮತ್ತು ಕುಂದಾಪುರ ಉಪವಿಭಾಗ ವ್ಯಾಪ್ತಿಯಲ್ಲಿ ಈ ಹಿಂದೆ 99 ಗ್ರಾಮಗಳಿದ್ದರು ಅವುಗಳಲ್ಲಿ ಬೆಳ್ವೆ,ಮಡಾಮಕ್ಕಿ,ಹೆಬ್ರಿ ವ್ಯಾಪ್ತಿಗೆ ಸೇರ್ಪಡೆಯಾದ ಕಾರಣ ಪ್ರಸ್ತುತ 97 ಗ್ರಾಮ ಪಂಚಾಯತ್‌ಗಳಿವೆ.ಆದರೆ ಈ ಎಲ್ಲಾ ಪಂಚಾಯತ್‌ಗಳಿಗೆ ಕಾಮಗಾರಿ ನಿರ್ವಹಣೆಗೆ ಇಲಾಖೆಯಲ್ಲಿ ಇಂಜಿನಿಯರ್‌ಗಳಿಲ್ಲ. ಕಾರ್ಕಳ,ಉಡುಪಿಯಿಂದ ಹೆಚ್ಚುವರಿ ಇಂಜಿನಿಯರ್‌ಗಳನ್ನು ಅಪರೂಪಕ್ಕೆ ಕರೆಸಲಾಗುತ್ತದೆ.ಇದರಿಂದ ಎಲ್ಲೋ ಒಂದಿಷ್ಟು ಕಾಮಗಾರಿ ತೆವಳುತ್ತಾ ಸಾಗುತ್ತಿದೆ.ಒಟ್ಟಾರೆ ಗ್ರಾಮ ಪಂಚಾಯತ್‌ಗಳು ಅಧಿಕಾರಿಗಳಿಗಾಗಿ ಕ್ರಿಯಾಯೋಜನೆ ಮಾಡಿಕೊಂಡು ಜಾತಕ ಪಕ್ಷಿಯಂತೆ ಕಾಯಬೇಕಾಗಿದೆ.
97 ಪಂಚಾಯತ್‌ಗಳು ಒಬ್ಬ ರಾಜಕುಮಾರ,ತಾಂತ್ರಿಕ ಮಂಜೂರಾತಿಗೂ ಅಧಿಕಾರಿಗಳಿಲ್ಲ: ಸರಕಾರ ಯೋಜನೆಗಳಿಗೆ ಕ್ರಿಯಾಯೋಜನೆ ರೂಪಿಸಬೇಕಾಗುವ ಮೊದಲು ಪಂಚಾಯತ್ ಇಂಜಿನಿಯರಿಂಗ ವಿಭಾಗ ಸ್ಥಳಕ್ಕಾಗಮಿಸಿ ಎಸ್ಟಿಮೇಟ್ ಮಾಡಬೇಕು.ತಾಂತ್ರಿಕ ಮಂಜೂರಾತಿ ನೀಡಬೇಕು.ಅನುದಾನ ಬಿಡುಗಡೆಯಾದ ನಂತರ ಕಾಮಗಾರಿ ಆರಂಭವಾಗಿ ಮುಗಿಯುವ ವರೆಗೆ ಪ್ರತಿ ಹಂತದಲ್ಲೂ ಬೇಟಿ ನೀಡಿ ಪರಿಶೀಲಿಸಬೇಕು.ಕಾಮಗಾರಿ ಮುಗಿದ ಬಳಿಕ ಇಂಜಿನಿಯರ್ ವರದಿ ನೀಡಿದ ಬಳಿಕ ಬಿಲ್ ಮಂಜೂರಾಗುತ್ತದೆ.ಆದರೆ ಕುಂದಾಪುರ ಉಪವಿಭಾಗ ವ್ಯಾಪ್ತಿಯ ಬೈಂದೂರು ತಾಲೂಕಿನಲ್ಲಿ ತಾಂತ್ರಿಕ ಮಂಜೂರಾಗಿ ನೀಡಲು ಅಧಿಕಾರಿಗಳಿಲ್ಲ.ಒಂದು ತಾತ್ಕಾಲಿಕ ಸಿಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಅದರೆ ಅವರು ಪ್ರಭಾವವಿದ್ದವರಿಗೆ ಮಾತ್ರ ಲಭ್ಯವಿರುವಂತಾಗಿದೆ.
ಬೈಂದೂರು ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದಲ್ಲಿ ಈ ಹಿಂದೆ ನಾಲ್ಕು ಜನ ಇಂಜಿನಿಯರ್‌ಗಳಿದ್ದರು.ಪ್ರಸ್ತುತ ಈ ಹುದ್ದೆಗಳು ಖಾಲಿಯಿದೆ.ಒಂದು ಜೂನಿಯರ್ ಇಂಜಿನಿಯರಿಂಗ್ ಹುದ್ದೆಯಿದೆ.ಪ್ರಸ್ತುತ ಜಲಜೀವನ್ ಮಿಶನ್ ಯೋಜನೆಯಲ್ಲಿ ಬೈಂದೂರು ಕ್ಷೇತ್ರದಲ್ಲಿ 585 ಕೋಟಿ ಅನುದಾನದ ಕಾಮಗಾರಿ ನಡೆಯುತ್ತಿದೆ.ಬೈಂದೂರು ಪಟ್ಟಣ ಪಂಚಾಯತ್ ಹಾಗೂ 15 ಗ್ರಾಮ ಪಂಚಾಯತ್‌ಗಳಿವೆ.ಗ್ರಾಮ ಪಂಚಾಯತ್ ರಸ್ತೆ,ಸೇತುವೆ,ಬಾವಿ ನಿರ್ಮಾಣ ಸೇರಿದಂತೆ ಎಲ್ಲಾ ಮೂಲಭೂತ ಕಾಮಗಾರಿಗಳು ಕೂಡ ಇಂಜಿನಿಯರಿಂಗ್ ಇಲಾಖೆ ಸಿಬಂದಿ ಸಮಸ್ಯೆಯಿಂದ ಬಾಕಿ ಉಳಿಯುವಂತಾಗಿದೆ.ಮಾತ್ರವಲ್ಲದೆ ಇರುವ ತಾತ್ಕಾಲಿಕ ಇಂಜಿನಿಯರ್ ಕೂಡ ಜನರಿಗೆ ಸಿಗುತ್ತಿಲ್ಲ.ಬೈಂದೂರು ತಾಲೂಕು ಅಭಿವೃದ್ದಿಗೆ ಮತ್ತು ಕಾಮಗಾರಿಗಳ ಅನುದಾನಕ್ಕೆ ಪಂಚಾಯತ್ ರಾಜ್ ಇಲಾಖೆ ಬಹುಮುಖ್ಯವಾಗಿದ್ದು ಈ ಇಲಾಖೆಯ ಸಿಬಂದಿಗಳಿಲ್ಲದಿದ್ದರೆ ಯೋಜನೆಗಳ ಅನುದಾನ ಮಾಡುವರ್‍ಯಾರು ಎನ್ನುವುದು ಸಾರ್ವಜನಿಕ ಪ್ರಶ್ನೆಯಾಗಿದೆ.ಮಾತ್ರವಲ್ಲದೆ ಕಾಮಗಾರಿಗಳ ಸಮರ್ಪಕ ನಿರ್ವಹಣೆ ಕೊರತೆಯಿಂದ ಕಳಪೆ ಕಾಮಗಾರಿ ಮೂಲಕ ಸರಕಾರದ ಅನುದಾನ ಗುತ್ತಿಗೆದಾರರ ಪಾಲಾಗುವ ಆತಂಕಗಳಿವೆ.ಹೀಗಾಗಿ ಜಿಲ್ಲಾಡಳಿತ ಈ ಬಗ್ಗೆ ಗಮನಹರಿಸಿ ಬೈಂದೂರು ಪಂಚಾಯತ್‌ರಾಜ್ ಇಲಾಖೆ ಶೀಘ್ರ ಖಾಯಂ ಇಂಜಿನಿಯರ್‌ಗಳನ್ನು ನೇಮಕ ಮಾಡಬೇಕಿದೆ.
ಹೇಳಿಕೆ.1
ಪಂಚಾಯತ್‌ರಾಜ್ ಇಂಜಿನಿಯರಿಂಗ್ ಇಲಾಖೆ ಕುಂದಾಪುರ ವಿಭಾಗ ಬಹುದೊಡ್ಡ ವ್ಯಾಪ್ತಿಯನ್ನು ಹೊಂದಿದೆ.ಕಾಮಗಾರಿಗಳ ಪರಿಶೀಲನೆಗೆ ಇರುವ ನಾಲ್ಕು ಹುದ್ದೆಗಳು ಖಾಲಿ ಇವೆ.ಸದ್ಯದ ಪರಿಸ್ಥಿತಿಯಲ್ಲಿ ಪಿ.ಎಮ್.ಆರ್.ವೈ ಸೇರಿದಂತೆ ಇತರ ಕೆಲವು ಇಲಾಖೆಯಿಂದ ಕಾರ್ಕಳ ಮತ್ತು ಉಡುಪಿಯಲ್ಲಿ ಕರ್ತವ್ಯ ನಿರ್ವಹಿಸುವ ಇಂಜಿನಿಯರ್‌ಗಳನ್ನು ಕುಂದಾಪುರ ಉಪವಿಭಾಗಕ್ಕೆ ಹೆಚ್ಚುವರಿ ಜವಬ್ದಾರಿ ನೀಡಲಾಗಿದೆ.ಜಲಜೀವನ್ ಯೋಜನೆ ಪ್ರಗತಿಯಲ್ಲಿದೆ.ಸಿಬಂದಿಗಳ ಕೊರತೆಯಿಂದ ಪ್ರತಿ ಪಂಚಾಯತ್ ವ್ಯಾಪ್ತಿಗೆ ಬೇಟಿ ನೀಡಲು ಸಮಸ್ಯೆಯಾಗುತ್ತದೆ.ಈ ಕುರಿತು ಸರಕಾರಕ್ಕೂ ಮಾಹಿತಿ ನೀಡಲಾಗಿದೆ.ಹೆಚ್ಚುವರಿ ಇಂಜಿನಿಯರ್‌ಗಳ ನಿಯೋಜನೆಯವರೆಗೆ ಈ ವ್ಯವಸ್ಥೆಯನ್ನು ಮುಂದುವರಿಸಿಕೊಂಡು ಹೋಗಬೇಕಾಗಿದೆ……ರಾಜ್‌ಕುಮಾರ್,ಸಹಾಯಕ ಕಾರ್ಯಪಾಲಕ ಅಭಿಯಂತರರು.