ಕರಾವಳಿ ಸಂಭ್ರಮ -2023, ಜನವರಿ 28 ರಂದು ಕರಾವಳಿಯಲ್ಲಿ ಮುಕ್ತ ಗಾಳಿಪಟ ಸ್ಪರ್ಧೆ

ಶಿರೂರು; ಯುವಶಕ್ತಿ ಶ್ರೀ ಗಣೇಶೋತ್ಸವ ಸಮಿತಿ(ರಿ.)ಕರಾವಳಿ ಶಿರೂರು ಇದರ ರಜತ ಸಂಭ್ರಮದ ಪ್ರಯುಕ್ತ ಅರುಣ್ ಪಬ್ಲಿಸಿಟಿ ಶಿರೂರು ಹಾಗೂ ಯುವ ಶಕ್ತಿ ಉತ್ಸವ ಸಮಿತಿ ಇದರ ಜಂಟಿ ಆಶ್ರಯದಲ್ಲಿ ನಡೆಯುತ್ತಿರುವ ಕರಾವಳಿ ಸಂಭ್ರಮ -2023 ಪ್ರಯುಕ್ತ ಜನವರಿ 28 ರಂದು ಸಂಜೆ…

ಜನವರಿ 29 ರಂದು ಯುವಶಕ್ತಿ ಕರಾವಳಿ ಸಂಭ್ರಮ ಕಾರ್ಯಕ್ರಮ,ಪೋಸ್ಟರ್ ಬಿಡುಗಡೆ

ಶಿರೂರು; ಯುವಶಕ್ತಿ ಶ್ರೀ ಗಣೇಶೋತ್ಸವ ಸಮಿತಿ(ರಿ.)ಕರಾವಳಿ ಶಿರೂರು ಇದರ ರಜತ ಸಂಭ್ರಮದ ಪ್ರಯುಕ್ತ ಅರುಣ್ ಪಬ್ಲಿಸಿಟಿ ಹಾಗೂ ಯುವ ಶಕ್ತಿ ಉತ್ಸವ ಸಮಿತಿ ಇದರ ಜಂಟಿ ಆಶ್ರಯದಲ್ಲಿ ಕರಾವಳಿ ಸಂಭ್ರಮ -2023 ಮುನ್ನುಡಿ ಕಾರ್ಯಕ್ರಮ ಜನವರಿ 29 ರಂದು ನಡೆಯಲಿದೆ.ಜನವರಿ 28…

ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್(ರಿ.)ಉಪ್ಪುಂದ  11ನೇ ಮನೆ ಪ್ರವೇಶೋತ್ಸವ ಕಾರ್ಯಕ್ರಮ,ಜ್ಞಾನಕ್ಕೆ ಜಾತಿಯಿಲ್ಲ, ಸಹಕಾರಕ್ಕೆ ಬೇಧಭಾವದ ಅಡ್ಡಿಯಿಲ್ಲ: ವಿನಯ್ ಗುರೂಜೀ

ಬೈಂದೂರು: ಜಗತ್ತಿನಲ್ಲಿ ಬಹಳಷ್ಟು ಜನ ಧನವಂತರಿದ್ದಾರೆ.ಆದರೆ ಇದ್ದವರಿಗೆಲ್ಲಾ ಕೊಡುವಷ್ಟು ಔದಾರ್ಯಗಳಿಲ್ಲ.ಹೃದಯವಂತರು ಮಾತ್ರ ಇನ್ನೊಬ್ಬರ ಕಷ್ಟಕ್ಕೆ ಸ್ಪಂಧಿಸುತ್ತಾರೆ.ಅಂತಹ ಚಿಂತನೆಗಳು ಮುಖ್ಯ.ಜ್ಞಾನಕ್ಕೆ ಯಾವುದೇ ಜಾತಿಯಿಲ್ಲ,ಇತರರ ಒಳಿತುಗಳಿಗೆ ಸಹಕಾರ ನೀಡಲು ಬೇಧಭಾವವಿಲ್ಲ.ಡಾ.ಗೋವಿಂದ ಬಾಬು ಪೂಜಾರಿಯವರ ಸೇವಾ ಕೈಂಕರ್ಯ ಶ್ರೇಷ್ಟವಾದ ಕಾರ್ಯವಾಗಿದೆ ಎಂದು ಎಂದು ಅವಧೂತ ಶ್ರೀ…

ಜ.14 ಮತ್ತು 15 ರಂದು ವತ್ತಿನಕಟ್ಟೆ ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನದಲ್ಲಿ ಹಾಲು ಹಬ್ಬ,ಜಾತ್ರೆ

ಬೈಂದೂರು: ಐತಿಹಾಸಿಕ ಪ್ರಸಿದ್ದ ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನ ವತ್ತಿನಕಟ್ಟೆ ಬೈಂದೂರು ಇದರ ಕೆಂಡ ಸೇವೆ ಹಾಗೂ ವಾರ್ಷಿಕ ಹಾಲು ಹಬ್ಬ ಜ.14 ಮತ್ತು 15 ರಂದು ನಡೆಯಲಿದೆ. ಜ.14ರಂದು ಬೆಳಿಗ್ಗೆ ಶ್ರಿದೇವಿಗೆ ವಿಶೇಷ ಪೂಜೆ,ತುಲಾಭಾರ ಸೇವೆ,ಮಹಾಪೂಜೆ,ಮಹಾಅನ್ನಸಂತರ್ಪಣೆ ನಡೆಯಲಿದೆ.ರಾತ್ರಿ 9 ರಿಂದ…

ಜ.22 ರಂದು ರಾಷ್ಟ್ರಭಕ್ತ ಸ್ವಾಮಿ ವಿವೇಕಾನಂದ ವೇದಿಕೆ ಶಿರೂರು 20ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ.

ಶಿರೂರು; ರಾಷ್ಟ್ರಭಕ್ತ ಸ್ವಾಮಿ ವಿವೇಕಾನಂದ ವೇದಿಕೆ ಶಿರೂರು ಇದರ 20ನೇ ವರ್ಷದ ಅದ್ದೂರಿ ವಾರ್ಷಿಕೋತ್ಸವದ ಪ್ರಯುಕ್ತ ನೃತ್ಯಕಲಾ ವೈಭವ -2023 ಕಾರ್ಯಕ್ರಮ ಜ.22ರಂದು ಸಂಜೆ 6  ಗಂಟೆಗೆ ಪೇಟೆ ಶಾಲೆ ಮೈದಾನದಲ್ಲಿ ನಡೆಯಲಿದೆ.ಬೈಂದೂರು ಶಾಸಕ ಬಿ.ಎಮ್.ಸುಕುಮಾರ ಶೆಟ್ಟಿ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.ಸ್ವಾಮಿ…

ಸ.ಹಿ.ಪ್ರಾ.ಶಾಲೆ ಗಂಗನಾಡು ವಾರ್ಷಿಕ ಕ್ರೀಡಾಕೂಟ,ಶೈಕ್ಷಣಿಕ ಸಾಧನೆಯ ಜೊತೆಗೆ ಕ್ರೀಡಾ ಪ್ರತಿಭೆಗಳಿಗೂ ಸಹ ಉತ್ತಮ ಅವಕಾಶವಿದೆ;ನವೀನ್ ಕುಮಾರ್

ಬೈಂದೂರು; ಕ್ರೀಡಾ ಆಸಕ್ತಿಗಳು ವಿದ್ಯಾರ್ಥಿಗಳಲ್ಲಿನ ಪ್ರತಿಭೆಗಳಿಗೆ ಉತ್ತಮ ಅವಕಾಶ ನೀಡಿದಂತಾಗುತ್ತದೆ.ಶೈಕ್ಷಣಿಕ ಸಾಧನೆಯ ಜೊತೆಗೆ ಕ್ರೀಡಾ ಪ್ರತಿಭೆಗಳಿಗೂ ಸಹ ಉತ್ತಮ ಅವಕಾಶವಿದೆ.ಕ್ರೀಡೆಗಳು ವಿದ್ಯಾರ್ಥಿಗಳಿಗೆ ದೈಹಿಕ ಹಾಗೂ ಮಾನಸಿಕವಾದ ಪ್ರಬುದ್ದತೆಯನ್ನು ಬೆಳೆಸುತ್ತದೆ ಎಂದು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ನವೀನ್ ಕುಮಾರ್ ಹೇಳಿದರು ಅವರು ಸರಕಾರಿ…

ಜ 8.ಸೈನಿಕನ ಆಂತರ್ಯದ ಪಿಸು ನುಡಿ ಕೃತಿ ಲೋಕಾರ್ಪಣೆ ಕಾರ್ಯಕ್ರಮ.

ಬೈಂದೂರು; ಲೇಖಕ ಬೈಂದೂರು ಚಂದ್ರಶೇಖರ ನಾವಡರ ಸೈನಿಕನ ಆಂತರ್ಯದ ಪಿಸು ನುಡಿ ಕೃತಿ ಲೋಕಾರ್ಪಣೆ ಕಾರ್ಯಕ್ರಮ ಜ.8 ರಂದು ಬೆಳಿಗ್ಗೆ 11 ಗಂಟೆಗೆ ವತ್ತಿನಕಟ್ಟೆ ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನದ ಸಭಾಂಗಣದಲ್ಲಿ ಲೋಕಾರ್ಪಣೆ ಗೊಳ್ಳಲಿದೆ.ಉಪ್ಪುಂದ ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ.ಗೋವಿಂದ…

ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್(ರಿ.)ಉಪ್ಪುಂದ ಜ.5 ರಂದು ವರಲಕ್ಷ್ಮೀ  ನಿಲಯದ 11ನೇ ಮನೆ ಪ್ರವೇಶೋತ್ಸವ ಕಾರ್ಯಕ್ರಮ

ಬೈಂದೂರು: ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್(ರಿ.)ಉಪ್ಪುಂದ ಶೈಕ್ಷಣಿಕ,ಸಾಮಾಜಿಕ ಸೇವಾ ಸಂಸ್ಥೆ ಇದರ ಟ್ರಸ್ಟ್ ವತಿಯಿಂದ ಬಡಕುಟುಂಬಕ್ಕೆ ಶಾಶ್ವತ ಸೂರು ನಿರ್ಮಿಸಿಕೊಡುವ ಕಾರ್ಯ ಶ್ರೀ ವರಲಕ್ಷ್ಮೀ ನಿಲಯದ 11ನೇ ಮನೆ ಪ್ರವೇಶೋತ್ಸವ ಕಾರ್ಯಕ್ರಮ ಜ.5 ರಂದು ಮದ್ಯಾಹ್ನ 3 ಗಂಟೆಗೆ ರಾಜು ಮರವಂತೆ…

ಹೇನ್‌ಬೇರು ಬಸ್ ತಂಗುದಾಣಕ್ಕೆ ಗುದ್ದಲಿ ಪೂಜೆ,ಸಾರ್ವಜನಿಕರಿಗೆ ಅನುಕೂಲವಾಗುವ ಕಾರ್ಯ ಸದಾ ಪ್ರಶಂಸನಿಯ:ಸುರೇಶ್ ಬಟ್ವಾಡಿ

ಶಿರೂರು: ಸಾರ್ವಜನಿಕರಿಗೆ ಅನುಕೂಲವಾಗುವ ಪ್ರತಿ ಕಾರ್ಯವು ಸರಕಾರದಿಂದ ದೊಡ್ಡ ಪ್ರಮಾಣದಲ್ಲಿ ನಿರೀಕ್ಷಿಸಲು ಸಾಧ್ಯವಿರುವುದಿಲ್ಲ.ವಿವಿಧ ಇಲಾಖೆಯ ಸಹಭಾಗಿತ್ವ  ಹಾಗೂ ಸಾರ್ವಜನಿಕರ ಸಹಕಾರ ಇದ್ದಾಗ ಮಾತ್ರ ಅನೇಕ ಜನೋಪಯೋಗಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಸಾಧ್ಯವಾಗುತ್ತದೆ.ಈ ಭಾಗದಲ್ಲಿ ಗ್ರಾಮ ಅರಣ್ಯ ಇಲಾಖೆ ಸ್ಥಾಪಿಸಿದ ಬಸ್ ತಂಗುದಾಣ ಸಾರ್ವಜನಿಕರಿಗೆ…

ಶಿರೂರು ದಾಸನಾಡಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ

ಶಿರೂರು: ಶ್ರೀ ವೆಂಕಟರಮಣ ದೇವಸ್ಥಾನ ದಾಸನಾಡಿ ಶಿರೂರು ಇದರ ವೈಕುಂಠ ಏಕಾದಶಿ ಸೋಮವಾರ ಪೂರ್ವಾಹ್ನ 5:50ಕ್ಕೆ ಶ್ರೀ ವೆಂಕಟರಮಣ ದೇವರ ದಿವ್ಯ ದರ್ಶನ ನಡೆಯಿತು.ದೇವಸ್ಥಾನದ ಅರ್ಚಕ ರವೀಂದ್ರ ಅಯ್ಯಂಗಾರ್ ನೇತ್ರತ್ವದಲ್ಲಿ ಪೂಜಾ ವಿಧಿ ವಿಧಾನಗಳು ನಡೆಯಿತು.ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರ…