ಶಿರೂರು: ಶ್ರೀ ಶಾಂತಾನಂದ ಆಶ್ರಮ ಪೇಟೆ ಶಿರೂರು ಇದರ ಜೀರ್ಣೋದ್ದಾರ ಸಮಿತಿ ಸಭೆ ಹಾಗೂ ಆಶ್ರಮದ ಜೀರ್ಣೋದ್ದಾರದ ಸಮಿತಿ ರಚನೆ ಸಭೆ ಆಶ್ರಮದ ಆವರಣದಲ್ಲಿ ನಡೆಯಿತು.ನೂತನ ದೇವಸ್ಥಾನದ ರಚನೆಗೆ 1.25 ಕೋಟಿ ರೂಪಾಯಿ ವೆಚ್ಚದ ನೀಲನಕ್ಷೆ ಸಿದ್ದಪಡಿಸಲಾಯಿತು ಹಾಗೂ ವಿವಿಧ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಯಿತು.
ನೂತನ ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾಗಿ ಪ್ರಕಾಶ್ ರಾವ್,ಗೌರವಾಧ್ಯಕ್ಷರಾಗಿ ಎಸ್.ಪ್ರಕಾಶ ಪ್ರಭು,ಕಾರ್ಯದರ್ಶಿಯಾಗಿ ಶಾಂತಾನಂದ ಶೆಟ್ಟಿ ಆಲಂದೂರು,ಕೋಶಾಧ್ಯಕ್ಷರಾಗಿ ದಿನೇಶ್ ರಾವ್,ತಾಂತ್ರಿಕ ಸಲಹೆಗಾರರಾಗಿ ಶ್ರೀಕುಮಾರ ಗವಿ,ಲೆಕ್ಕ ಸಲಹೆಗಾರರಾಗಿ ಸಿ.ಎ ಶ್ರೀನಿವಾಸ ಶೆಟ್ಟಿ ಆಯ್ಕೆಯಾದರು.ಸಭೆಯಲ್ಲಿ ಭಕ್ತಾಧಿಗಳು ಹಾಗೂ ಊರಿನ ಗ್ರಾಮಸ್ಥರು ಹಾಜರಿದ್ದರು.

ನೀಲನಕ್ಷೆ