ಬೈಂದೂರು: ಜನವರಿ 07 ರಂದು ಬೈಂದೂರಿನ ಗಂಗನಾಡು ಸಮೀಪದ ಕ್ಯಾರ್ತೂರು ಕಂಬಳ ಗದ್ದೆಯಲ್ಲಿ ರಾಜ್ಯ ಮಟ್ಟದ ಹೊನಲು ಬೆಳಕಿನ ಕಂಬಳೋತ್ಸವ ನಡೆಯಲಿದೆ ಎಂದು ಬೈಂದೂರು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಹೇಳಿದರು ಅವರು ಶುಕ್ರವಾರ ಗಂಗನಾಡುವಿನ ಕ್ಯಾರ್ತೂರುವಿನಲ್ಲಿ ಕಂಬಳ ಗದ್ದೆಯ ಮುಹೂರ್ತ ನೆರವೇರಿಸಿ ಬಳಿಕ ಮಾತನಾಡಿದ ಆವರು ಗಂಗನಾಡು,ಕ್ಯಾರ್ತೂರು,ವನಕೊಡ್ಲು ಭಾಗದಲ್ಲಿ ಧಾರ್ಮಿಕ ಹಿನ್ನೆಲೆಯ ಶ್ರೀ ಮಹಾಲಿಂಗೇಶ್ವರ ಹಾಗೂ ಶ್ರೀ ನರಸಿಂಹ ದೇವಸ್ಥಾನಗಳನ್ನು ಹೊಂದಿದ್ದು.ಕೃಷಿಯೇ ಇಲ್ಲಿನ ಜನರ ಬದುಕಾಗಿದೆ.ವಾರ್ಷಿಕವಾಗಿ ಗ್ರಾಮೀಣ ಭಾಗದ ರೈತರನ್ನು ಒಗ್ಗೂಡಿಸುವ ನೆಲೆಯಲ್ಲಿ ಪ್ರಪ್ರಥಮ ಬಾರಿಗೆ ಬೈಂದೂರಿನಲ್ಲಿ ರಾಜ್ಯಮಟ್ಟದ ಕಂಬಳವನ್ನು ಆಯೋಜಿಸಲಾಗಿದೆ.ಈ ಕಾರ್ಯಕ್ರಮಕ್ಕೆ ರಾಜ್ಯದ ವಿವಿಧ ಕಡೆಯಿಂದ ಹತ್ತು ಸಾವಿರಕ್ಕೂ ಅಧಿಕ ರೈತರು ಆಗಮಿಸಲಿದ್ದಾರೆ.ಅತ್ಯಾಧುನಿಕ ರೀತಿಯಲ್ಲಿ ಕಂಬಳವನ್ನು ಆಯೋಜಿಸಿದ್ದು ಕಂಬಳದಲ್ಲಿ ವಿಜೇತರಾದವರಿಗೆ ಚಿನ್ನದ ಪದಕಗಳನ್ನು ನೀಡಲಾಗುವುದು.ಕಂಬಳ ಸಮಿತಿ ಸೇರಿದಂತೆ ಎಲ್ಲಾ ಹಿರಿಯರ ಮತ್ತು ವಿವಿಧ ಸಮುದಾಯಗಳ ಸಹಕಾರದೊಂದಿಗೆ ಅದ್ದೂರಿಯ ಬೈಂದೂರು ಕಂಬಳೋತ್ಸವ ನಡೆಯಲಿದೆ.ಈ ಸಂಧರ್ಭದಲ್ಲಿ ಸಾಧಕ ಕಂಬಳದ ಓಟಗಾರರನ್ನು,ಹಿರಿಯ ರೈತರನ್ನು ಹಾಗೂ ಕಂಬಳದ ಪೋಷಕರನ್ನು ಸಮ್ಮಾನಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಮಂಜು ಪೂಜಾರಿ ಸಸಿಹಿತ್ಲು,ಗಣಪ ಮರಾಠಿ,ರಾಜು ಮರಾಠಿ ಬೆಳಕೊಡ್ಲು,ರಾಜು ದೇವಪ್ಪನೆಡೆ,ದೇವಪ್ಪ ಹಂಡೆ,ಶಿವಯ್ಯ ಗಂಗನಾಡು,ಹರೀಶ ಮರಾಠಿ ಗಂಗನಾಡು ಹಾಗೂ ಊರಿನ ಗ್ರಾಮಸ್ಥರು ಹಾಜರಿದ್ದರು.
News/pic:Giri shiruru