ಶಿರೂರು: ಶ್ರೀ ನಾಗಬ್ರಹ್ಮ ಮತ್ತು ಸಪರಿವಾರ ಮಂದಿರ ಅಕ್ಷರ ಕರಾವಳಿ ಶಿರೂರು ಇದರ 10ನೇ ವರ್ಷದ ವರ್ಧಂತ್ಯೋತ್ಸವದ ಅಂಗವಾಗಿ ಅಂತರ್ ಜಿಲ್ಲಾ ಮಟ್ಟದ ಕುಣಿತ ಭಜನಾ ಸ್ಪರ್ಧೆ ಮಂಗಳವಾರ ನಡೆಯಿತು.ಬೆಳಿಗ್ಗೆ ಕಲಾವೃದ್ದಿ ಹೋಮ,ಧಾರ್ಮಿಕ ಕಾರ್ಯಕ್ರಮಗಳು,ಸಂಜೆ ದೀಪೋತ್ಸವ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ಬಳಿಕ ವಿವಿಧ ಅಂತರ್ ಜಿಲ್ಲಾ ತಂಡಗಳಿಂದ ಭಜನಾ ಕುಣಿತ ಸ್ಪರ್ಧೆ ನಡೆಯಿತು.

ಜಾನಪದ ಪರಿಷತ್ ಸದಸ್ಯ ನಿವೃತ್ತ ಶಿಕ್ಷಕ ಗೋವಿಂದ ಬಿಲ್ಲವ ಮಾತನಾಡಿ  ಭಜನೆಗಳಿಂದ ಭಗವಂತನ ಸಾಕ್ಷಾತ್ಕಾರ ಸಾಧ್ಯ.ಹಿರಿಯರು  ಮುಂದುವರೆಸಿಕೊಂಡು ಬಂದ ಸನಾತನ ಸಂಸ್ಕ್ರತಿಯಾಗಿದೆ.ಕುಣಿತ ಭಜನೆ ಯುವಜನತೆಯನ್ನು ಆಕರ್ಷಿಸುವ ನಿಟ್ಟಿನಲ್ಲಿ ಒಂದಿಷ್ಟು ಹೊಸತನದಿಂದ ಬದಲಾವಣೆ ಕಂಡಿದೆ.ಇಂತಹ ಕಾರ್ಯಕ್ರಮಗಳು ಧಾರ್ಮಿಕತೆಯ ಸಾರತೆಯನ್ನು ಹೆಚ್ಚಿಸುತ್ತದೆ ಎಂದರು.

ಸಮಿತಿಯ ಅಧ್ಯಕ್ಷರಾದ ಚನ್ನ ಪೂಜಾರಿ ತೆಂಕಮನೆ,ಗೌರವಾಧ್ಯಕ್ಷ ಅಣ್ಣಪ್ಪ ಮೊಗವೀರ ಗುರುನಮನೆ,ಜಿ.ಪಂ ಮಾಜಿ ಸದಸ್ಯ ಸುರೇಶ ಬಟ್ವಾಡಿ,ತಾ.ಪಂ ಮಾಜಿ ಸದಸ್ಯ ಪುಷ್ಪರಾಜ್ ಶೆಟ್ಟಿ,ಗ್ರಾ.ಪಂ ಸದಸ್ಯರಾದ ಪ್ರಸನ್ನ ಕುಮಾರ್ ಶೆಟ್ಟಿ,ಪದ್ಮಾವತಿ ಮೊಗವೀರ,ಮಾಜಿ ಗ್ರಾ.ಪಂ ಸದಸ್ಯ ಸಂಜೀವ ಮೊಗವೀರ,ಪರಮೇಶ್ವರ ಪೂಜಾರಿ ತೀರ್ಪುಗಾರರಾಗಿ ಶಿಕ್ಷಕ ಚಂದ್ರಶೇಖರ ಶೆಟ್ಟಿ ವಂಡ್ಸೆ, ವಾಸುದೇವ ಎಸ್.ಶಿಕ್ಷಕರು ಶ್ರೀವಲಿ ಫ್ರೌಢಶಾಲೆ ಚಿತ್ರಾಪುರ ಶಿರಾಲಿ,ಸುಂದರ ಮೊಗವೀರ,ಮಾಧವ ಮೊಗವೀರ,ಮಂಜು ಪೂಜಾರಿ,ಗಣೇಶ ಮೊಗವೀರ ಹಾಗೂ ಸಮಿತಿಯ ಸರ್ವ ಸದಸ್ಯರು ಹಾಜರಿದ್ದರು.

ಈ ಸಂದರ್ಭದಲ್ಲಿ ಭಜನಾ ಕಾರ್ಯಕ್ರಮಕ್ಕೆ ಕೊಡುಗೆ ನೀಡಿದ ದಾನಿಗಳನ್ನು,ಅನ್ನದಾನದ ಸೇವಾಕರ್ತರನ್ನು ಹಾಗೂ ಹಿರಿಯ ಭಜನಾ ಕಲಾವಿದರನ್ನು ಸಮ್ಮಾನಿಸಲಾಯಿತು.ಉಡುಪಿ,ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡದ ಪ್ರತಿಷ್ಠಿತ 13 ತಂಡಗಳು ಭಜನಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.

ರತ್ತುಬಾಯಿ ಜನತಾ ಫ್ರೌಢಶಾಲೆಯ ದೈಹಿಕ ಶಿಕ್ಷಕ ಗುರುರಾಜ್ ಎಸ್.ಕಾರ್ಯಕ್ರಮ ನಿರ್ವಹಿಸಿದರು.

ಭಜನಾ ಸ್ಪರ್ಧೆಯ ಫಲಿತಾಂಶ.

ಪ್ರಥಮ:ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಕಾನ್‌ಮದ್ಲು ಭಟ್ಕಳ,ದ್ವಿತೀಯ: ಶ್ರೀ ಆದಿಶಕ್ತಿ ಕಾಳಿಕಾಂಬಾ ಭಜನಾ ಮಂಡಳಿ ಕಾರ್ಕಳ,ತೃತೀಯ: ಶ್ರೀ  ಉದ್ಬವಲಿಂಗೇಶ್ವರ ಭಜನಾ ಮಂಡಳಿ ಪಡುಕೆರೆ ಕೋಟ,ಚತುರ್ಥ: ಶ್ರೀ ಯಕ್ಷದೇವತೆ ಭಜನಾ ಮಂಡಳಿ ಆಶೀಕಾನ್ ಭಟ್ಕಳ ಹಾಗೂ  ಶಿವಶಂಕರ ಭಜನಾ ಮಂಡಳಿ ಗುಡ್ಡೆಯಂಗಡಿ ಪಂಚಮ ಸ್ಥಾನ ಪಡೆದರು.

News/Giri shiruru

Leave a Reply

Your email address will not be published.

fifteen − nine =