ಬೈಂದೂರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗಂಗಾನಾಡು ಇದರ ವಾರ್ಷಿಕ ಕ್ರೀಡಾಕೂಟ ಶಾಲಾ ಮೈದಾನದಲ್ಲಿ ನಡೆಯಿತು.ಬೈಂದೂರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ  ಜಿ. ಸೂರ್ಯಕಾಂತ ಖಾರ್ವಿ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ ಕ್ರೀಡೆಗಳು ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗಿದೆ.ಮಕ್ಕಳನ್ನು ಕೇವಲ ಪಠ್ಯಪುಸ್ತಕಕ್ಕೆ ಸೀಮಿತ ಮಾಡದೇ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಪ್ರೋತ್ಸಾಹ ನೀಡಬೇಕಿದೆ ಮಕ್ಕಳ ದೈಹಿಕ ಬೆಳವಣಿಗೆಗೆ ಕ್ರೀಡೆ ಅತೀ ಅವಶ್ಯ.ಶಾಲಾ ಹಂತದಲ್ಲೇ ಮಕ್ಕಳು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿದರೆ ಉತ್ತಮ ಭವಿಷ್ಯ ಸಾಧ್ಯ ಎಂದರು.

ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಚಂದ್ರಶೇಖರ ಶೆಟ್ಟಿ  ದ್ವಜಾರೋಹಣ ನೆರವೇರಿಸಿದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಜು ದೇವಪ್ಪನಡಿ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ವಲಯ ಅರಣ್ಯ ಪರಿವೀಕ್ಷಕ ಬಂಗಾರಪ್ಪ,ಬೈಂದೂರು ರೋಟರಿ ಕ್ಲಬ್ ಅಧ್ಯಕ್ಷ ಪ್ರಸಾದ್ ಪ್ರಭು,ಶಿಕ್ಷಣ ಸಂಯೋಜಕ ಚಂದ್ರ ದೇವಾಡಿಗ, ಶಾಲಾ ಎಸ್ ಡಿ ಎಂ ಸಿ ಉಪಾಧ್ಯಕ್ಷೆ ಭಾಗೀರಥಿ ಮರಾಠಿ,ನಿವೃತ್ತ ಮುಖ್ಯ ಶಿಕ್ಷಕ ಅಣ್ಣಪ್ಪ  ಶೇರುಗಾರ್,ಹನುಮಂತ ಬಿಲ್ಲವ, ಎಸ್ ಡಿ ಎಂ ಸಿ ಅಧ್ಯಕ್ಷ ರಾಜು ಬಿ,ನಾಗವೇಣಿ ನಾರಾಯಣ ಶೇರುಗಾರ್,ದುರ್ಗಾಪರಮೇಶ್ವರಿ ಯುವಕ ಮಂಡಳಿ ಎತ್ತಾಬೇರು ಅಧ್ಯಕ್ಷ ನಾಗರಾಜ್ ಪೂಜಾರಿ,ಅರ್ಚಕ ರವೀಶ್ ಮಯ್ಯ,ಬೈಂದೂರು ಆರಕ್ಷಕ ಇಲಾಖೆಯ ಚಂದ್ರ ಮರಾಠಿ ಗಂಗನಾಡು,ಭಾಸ್ಕರ್ ಮರಾಠಿ,ಶಿಬಿ ಪೌಲೋಸ್,ದೇವಪ್ಪ ಹಂಡೆ,ವಾಸುದೇವ ಭಟ್, ಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕುಮಾರ ಮರಾಠಿ,ಗಣಪ ಜಿ ಮರಾಠಿ, ಸುಭಾಷ್ ಚಂದ್ರ  ಶೇರುಗಾರ್,ಶಿವರಾಮ್ ಆಚಾರ್ಯ ಗಂಗಾನಾಡು ಉಪಸ್ಥಿತರಿದ್ದರು.

ಶಾಲಾ ಮುಖ್ಯೋಪಾಧ್ಯಾಯ ಪ್ರಭಾಕರ್ ಬಿಲ್ಲವ ಸ್ವಾಗತಿಸಿದರು, ಜಿಪಿಟಿ ಶಿಕ್ಷಕಿ ಹೇಮಲತಾ ಕಾರ್ಯಕ್ರಮ ನಿರ್ವಹಿಸಿದರು.ದೈಹಿಕ ಶಿಕ್ಷಣ ಶಿಕ್ಷಕಿ ಗೌರಿ ಎಸ್.ವಂದಿಸಿದರು.

Leave a Reply

Your email address will not be published.

12 − 12 =