ಶಿರೂರು: ಮೀನುಗಾರಿಕೆಗೆ ತೆರಳಿ ವಾಪಾಸ್ಸು ಬರುವ ವೇಳೆ ದೋಣಿ ಮಗುಚಿ ಇಬ್ಬರು ಮೀನುಗಾರರು ಪ್ರಾಣ ಕಳೆದುಕೊಂಡ ಘಟನೆ ಶಿರೂರು ಕಳುವಿತ್ಲುವಿನಲ್ಲಿ ನಡೆದಿದೆ.ಭಾನುವಾರ ರಾತ್ರಿ 10-00 ಗಂಟೆಗೆ ಶಿರೂರು ಕಳುಹಿತ್ಲುನಿಂದ ಮೀನುಗಾರಿಕೆಗೆ ತೆರಳಿದ ನುಮೈರಾ ಅಂಜುಮ್ IND KA 03 MO-4827 ದೋಣಿಯಲ್ಲಿ 3 ಜನ ಮೀನುಗಾರಿಕೆ ಮೀನುಗಾರರಿದ್ದರು. ಮೀನುಗಾರಿಕೆ ನಡೆಸಿ ವಾಪಾಸ್ಸು ಬರುವಾಗ ದಿನಾಂಕ ಸೋಮುವಾರ ಮುಂಜಾವು 01.30 ಗಂಟೆಗೆ ಶಿರೂರು ಕಳುಹಿತ್ಲು ಅಳಿವೆ ಸಮೀಪ ಅರಬ್ಬೀ ಸಮುದ್ರದಲ್ಲಿ ದೋಣಿ ಮಗುಚಿ ದೋಣಿಯಲ್ಲಿದ್ದ ನನ್ನು ಅಬ್ಸುಲ್ ಸತ್ತರ್ ಪ್ರಾಯ: (45 )ಹಡವಿನಕೋಣೆ ಶಿರೂರು ಮಿಸ್ಬಾ ಯೂಸುಫ್ ಪ: (48) ಕುದ್ವಾಯಿ ರೋಡ್, ಭಟ್ಕಳ. ರವರು ಮೃತಪಟ್ಟಿದ್ದಾರೆ.
ದೋಣಿಯಲ್ಲಿದ್ದ ಮತ್ತೋರ್ವ ಬುಡ್ಡು ಮುಖ್ತಾರ್ ( 37) ಹಡವಿನಕೋಣೆ ಇವರನ್ನು ಇನ್ನೊಂದು ದೋಣಿಯಲ್ಲಿದ್ದ ಮಾಮ್ಸು ಯಾಕೂಬ್ ರವರು ರಕ್ಷಣೆ ಮಾಡಿದ್ದಾರೆ.ಈ ಭಾಗದಲ್ಲಿ ಕೆಲವೆ ತಿಂಗಳುಗಳ ಹಿಂದೆ ಇಬ್ಬರು ಮೀನುಗಾರರ ಸಮುದ್ರ ಪಾಲಾಗಿದ್ದು ಈ ವರ್ಷ ಬೈಂದೂರು ಭಾಗದಲ್ಲಿ ಅತ್ಯಧಿಕ ಮೀನುಗಾರಿಕಾ ದುರಂತಗಳು ನಡೆದಿದೆ.ಕರಾವಳಿ ಕಾವಲು ಪಡೆ ಹಾಗೂ ಆರಕ್ಷಕ ಸಿಬಂಧಿಗಳು ಆಗಮಿಸಿದ್ದು ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.