ಬೈಂದೂರು: ಕ್ರೀಡಾ ಆಸಕ್ತಿಗಳು ವಿದ್ಯಾರ್ಥಿಗಳಲ್ಲಿನ ಪ್ರತಿಭೆಗಳಿಗೆ ಉತ್ತಮ ಅವಕಾಶ ನೀಡಿದಂತಾಗುತ್ತದೆ.ಶೈಕ್ಷಣಿಕ ಸಾಧನೆಯ ಜೊತೆಗೆ ಕ್ರೀಡಾ ಪ್ರತಿಭೆಗಳಿಗೂ ಸಹ ಉತ್ತಮ ಅವಕಾಶವಿದೆ .ಕ್ರೀಡೆಗಳು ವಿದ್ಯಾರ್ಥಿಗಳಿಗೆ ದೈಹಿಕ ಹಾಗೂ ಮಾನಸಿಕವಾದ ಪ್ರಬುದ್ದತೆಯನ್ನು ಬೆಳೆಸುತ್ತದೆ.ವಿಧ್ಯಾರ್ಥಿಗಳಿಗೆ ಕ್ರೀಡಾ ಕ್ಷೇತ್ರದಲ್ಲಿ ವಿಫುಲ ಅವಕಾಶಗಳಿವೆ ಎಂದು ಬೈಂದೂರು ಠಾಣಾಧಿಕಾರಿ ತಿಮ್ಮೇಶ್ ಬಿ.ಎನ್ ಹೇಳಿದರು ಅವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಲ್ಲಿಬಾರುವಿನಲ್ಲಿ ಶಾಲಾ ವಾರ್ಷಿಕ ಕ್ರೀಡಾಕೂಟದ ಕ್ರೀಡಾ ಜ್ಯೋತಿ ಬೆಳಗಿಸಿ ಈ ಮಾತುಗಳನ್ನಾಡಿದರು.
ಉದ್ಯಮಿ ಮ್ಯಾಥ್ಯೂ ಕೆ.ಎಸ್ ನಂದರಗದ್ದೆ ಧ್ವಜಾರೋಹಣಗೈದರು.
ಮುಖ್ಯ ಅತಿಥಿಗಳಾಗಿ ತಾಲೂಕು ದೈಹಿಕ ಪರಿವೀಕ್ಷಣಾಧಿಕಾರಿ ಚಂದ್ರಶೇಖರ ಶೆಟ್ಟಿ,ಶಾಲಾ ಎಸ್.ಡಿ.ಎಮ್.ಸಿ ಉಪಾಧ್ಯಕ್ಷೆ ವೇದಾವತಿ ಜಯಂತ ನಾಯಕ್,ಉದ್ಯಮಿ ನಾರಾಯಣ ಶೆಟ್ಟಿ ಕುಂಟವಾಣಿ,ಕ್ಷೇತ್ರ ಸಮನ್ವಯಾಧಿಕಾರಿ ಮಂಜುನಾಥ ನಾಯ್ಕ,ಶಿಕ್ಷಕ ಗಣಪತಿ ಹೋಬಳಿದಾರ್,ಬಾಡಾ ಶಾಲಾ ಮುಖ್ಯ ಶಿಕ್ಷಕ ಗಿರೀಶ್ ಪಿ.ಮೇಸ್ತ,ಶಾಲಾಭಿವೃದ್ದಿ ಸಮಿತಿ ಮಾಜಿ ಅಧ್ಯಕ್ಷ ವಿ.ಎಮ್.ಪೌಲ್,ಗೌರವಾಧ್ಯಕ್ಷ ಮಾಸ್ತಯ್ಯ ಪೂಜಾರಿ,ಶಾಲಾ ವಾರ್ಷಿಕೋತ್ಸವ ಸಮಿತಿ ಅಧ್ಯಕ್ಷ ತಿಮ್ಮ ಮರಾಠಿ,ಕಾರ್ಯದರ್ಶಿ ವಾಸುದೇವ ಮರಾಠಿ,ಹೂವಯ್ಯ ಮರಾಠಿ,ವಿದ್ಯಾರ್ಥಿ ನಾಯಕ ಸಂಪತ್ ಕುಮಾರ್,ನಾಯಕಿ ವಂಶಿಕಾ ಮರಾಠಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕಳೆದ ಮೂರು ವರ್ಷಗಳಿಂದ ಈ ಶಾಲೆಯಲ್ಲಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಶಿಕ್ಷಕಿ ಸುಲೋಚನಾ ಶೆಟ್ಟಿಗಾರ್ ಹಾಗೂ ಕಬಡ್ಡಿಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ನಿಹಾಲ್ ರೋಡ್ರಿಗ್ರಸ್ ರವರನ್ನು ಸಮ್ಮಾನಿಸಲಾಯಿತು.
ಯಡ್ತರೆ ಗ್ರಾ.ಪಂ ಮಾಜಿ ಅಧ್ಯಕ್ಷ ನಾಗರಾಜ ಶೆಟ್ಟಿ ಶುಭಶಂಸನೆಗೈದರು.ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷ ನಾಗಪ್ಪ ಮರಾಠಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಶಾಲಾ ಮುಖ್ಯ ಶಿಕ್ಷಕ ಮಹಾಬಲೇಶ್ವರ ಎಸ್.ಸ್ವಾಗತಿಸಿದರು.ಶಿಕ್ಷಕ ಸುಧಾಕರ ಪಿ.ಬೈಂದೂರು ಕಾರ್ಯಕ್ರಮ ನಿರ್ವಹಿಸಿದರು.ಶಿಕ್ಷಕ ವಿನಾಯಕ ಪಟಗಾರ್ ವಂದಿಸಿದರು.
News/Giri shiruru
pic/Suresh Makodi