ಕೊಲ್ಲೂರು ದೇವಳದ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಕೆ.ಬಾಬು ಶೆಟ್ಟಿ ಆಯ್ಕೆ
ಬೈಂದೂರು : ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲೊಂದಾದ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ನೂತನ ಅಧ್ಯಕ್ಷರಾಗಿ ಕೆ ಬಾಬು ಶೆಟ್ಟಿ ತಗ್ಗರ್ಸೆ ಆಯ್ಕೆಯಾಗಿದ್ದಾರೆ.ದೇವಸ್ಥಾನದ ಜಗದಾಂಬಿಕಾ ವಸತಿ ಗ್ರಹದ ಆಡಳಿತ ಮಂಡಳಿ ಸಂಕೀರ್ಣದಲ್ಲಿ ನಡೆದ ವ್ಯವಸ್ಥಾಪನಾ ಸಮಿತಿ ನೂತನ ಸದಸ್ಯರ ಪ್ರಥಮ…
ಶಿರೂರು ರೈತ ಸಂಘದ ವತಿಯಿಂದ ಹೊಸ್ತಿನ ಪ್ರಯುಕ್ತ ಗ್ರಾಮೀಣ ಕ್ರೀಡಾ ಸಂಭ್ರಮ
ಶಿರೂರು: ರೈತ ಸಂಘ ಶಿರೂರು ಇದರ ವತಿಯಿಂದ ಹೊಸ್ತು ಹಬ್ಬದ ಆಚರಣೆ ಪ್ರಯುಕ್ತ ಶಿರೂರು ಸೋಡಿಬೆಟ್ಟಿನಲ್ಲಿ ಗ್ರಾಮೀಣ ಕ್ರೀಡಾಕೂಟ ಆಯೋಜಿಸಲಾಯಿತು. ನೂರಾರು ರೈತರು ಕ್ರೀಡಾಕೂಟದಲ್ಲಿ ಭಾಗವಹಿಸಿದರು. ಗ್ರಾಮೀಣ ಕ್ರೀಡಾ ಸಂಭ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶಿರೂರು ರೈತ ಸಂಘದ ಅಧ್ಯಕ್ಷ ರವಿಂದ್ರ…
ಬೈಂದೂರು ದಸರಾ -2024 ಕಾರ್ಯಕ್ರಮ ಉದ್ಘಾಟನೆ,ಬೈಂದೂರು ದಸರಾ ಕ್ಷೇತ್ರದ ಅಭಿವ್ರದ್ದಿಯ ಚರಿತ್ರೆಯಾಗಲಿದೆ:ದೀಪಕ್ ಕುಮಾರ್ ಶೆಟ್ಟಿ
ಬೈಂದೂರು: ಕಲೆ ಸಾಹಿತ್ಯ ಸಾಂಸ್ಕ್ರತಿಕ ಸೇರಿದಂತೆ ಬೈಂದೂರು ತಾಲೂಕು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡ ಹೆಗ್ಗಳಿಕೆಯಿದೆ.ಬೈಂದೂರು ದಸರಾ ಮುಂದಿನ ದಿನದಲ್ಲಿ ನಮ್ಮ ತಾಲೂಕಿನ ಅಭಿವೃದ್ದಿಯ ಇತಿಹಾಸವಾಗಲಿದೆ.ಮಂಗಳೂರು ಉಚ್ಚಿಲ ದಸರಾದಂತೆ ನಮ್ಮ ತಾಲೂಕಿನಾದ್ಯಂತ ಪ್ರತಿವರ್ಷ ಸಾರ್ವಜನಿಕ ಸಹಕಾರದಲ್ಲಿ ಆಚರಿಸುವ ಮೂಲಕ ಧಾರ್ಮಿಕ ವೇದಿಕೆಯ ಸಾಂಸ್ಕ್ರತಿಕ…
ಬೈಂದೂರು ದಸರಾ – 2024,ಶಿರೂರಿನಲ್ಲಿ ಸಂಗೀತ ರಸಮಂಜರಿ, ಬೈಂದೂರಿನಲ್ಲಿ ಅದ್ದೂರಿಯ ಕ್ರೀಡಾಕೂಟ
ಬೈಂದೂರು: ಬೈಂದೂರಿನ ಐತಿಹಾಸಿಕ ಪ್ರಸಿದ್ದ ಮಹಾತಬಾರ ಸೇನೇಶ್ವರ ದೇವಸ್ಥಾನ ಇದರ ಶಾರದೋತ್ಸವದ ಪ್ರಯುಕ್ತ ಅದ್ದೂರಿಯ ಬೈಂದೂರು ದಸರಾ -2024 ಕಾರ್ಯಕ್ರಮ ಅಕ್ಟೋಬರ್ 03 ರಿಂದ 12ರ ವರೆಗೆ ಬೈಂದೂರು ತಾಲೂಕಿನಾದ್ಯಂತ ಹಮ್ಮಿಕೊಳ್ಳಲಾಗಿದೆ. ನವರಾತ್ರಿ ಮೊದಲ ದಿನ ಶಿರೂರು ಪೇಟೆ ವೆಂಕಟರಮಣ ಸಭಾ…
ಶಿರೂರು ಅ.03 ರಂದು ಹೊಸ್ತು ಆಚರಣೆ,ರೈತ ಸಂಘದ ವತಿಯಿಂದ ಗ್ರಾಮೀಣ ಕ್ರೀಡಾ ಸಂಭ್ರಮ
ಶಿರೂರು; ರೈತ ಸಂಘ ಶಿರೂರು ಇದರ ವತಿಯಿಂದ ಅ.03 ರಂದು ಹೊಸ್ತು ಹಬ್ಬ ಆಚರಣೆ ಪ್ರಯುಕ್ತ ಕರಾವಳಿಯ ಸೋಡಿಬೆಟ್ಟಿನಲ್ಲಿ ಗ್ರಾಮೀಣ ಸಾಂಪ್ರದಾಯಿಕ ಕ್ರೀಡಾ ಸಂಭ್ರಮ ನಡೆಯಲಿದೆ.ಹೊಸ್ತು ಹಬ್ಬ ಗ್ರಾಮೀಣ ಸೊಗಡಿನ ಆಚರಣೆಯಾಗಿದ್ದು ನವರಾತ್ರಿ ತಿಂಗಳಲ್ಲಿ ಆಚರಿಸಲಾಗುತ್ತದೆ. ಕರಾವಳಿ ಭಾಗದಲ್ಲಿ ಮರೆಯಾಗುತ್ತಿರುವ ಕ್ರೀಡೆಗಳನ್ನು…
ಕ್ಲೀನ್ ಕಿನಾರ ಬೈಂದೂರು ತಂಡದಿಂದ ಹದ್ದಾರಿ ಬದಿಗಳನ್ನು ಸ್ವಚ್ಚವಾಗಿಡಲು ಮನವಿ
ಬೈಂದೂರು: ಕ್ಲೀನ್ ಕಿನಾರ ಬೈಂದೂರು ಇದರ ವತಿಯಿಂದ ರಾಷ್ಟ್ರೀಯ ಹೆದ್ದಾರಿ ಇಕ್ಕೆಲಗಳಲ್ಲಿ ಕಸ ,ಮದ್ಯದ ಬಾಟಲಿ ,ಪ್ಲಾಸ್ಟಿಕ್ ಗಳು ರಾಶಿ ಬಿದ್ದಿದ್ದು ಕಂಪೆನಿ ಸಿಬಂದ್ದಿಗಳು ಇದರ ಸಮರ್ಪಕ ನಿರ್ವಹಣೆ ಮಾಡಬೆಕೆಂದು ಆಗ್ರಹಿಸಿ ಶಿರೂರು ಟೋಲ್ ಗೇಟ್ ವ್ಯವಸ್ಥಾಪಕರಿಗೆ ರವಿವಾರ ಮನವಿ ನೀಡಲಾಯಿತು.ಟೋಲ್…
ಉಪ್ಪುಂದ ಜೆಸಿಐ ನಿಕಟಪೂರ್ವಾಧ್ಯಕ್ಷ ಪ್ರದೀಪ ಶೆಟ್ಟಿ ಕಾರಿಕಟ್ಟೆ ಅವರಿಗೆ ಕಮಲ ಪತ್ರ ಪ್ರಶಸ್ತಿ ಪ್ರಧಾನ
ಬೈಂದೂರು: ಜೆಸಿಐ ಉಪ್ಪುಂದ ಇದರ 2023 ನೇ ಸಾಲಿನ ಅಧ್ಯಕ್ಷ ಪ್ರದೀಪ ಶೆಟ್ಟಿ ಕಾರಿಕಟ್ಟೆ ಯವರಿಗೆ ಸಂಘ ಸಂಸ್ಥೆಗಳಿಗೆ ಸಲ್ಲಿಸಿದ ಅಪಾರ ಸೇವೆಯನ್ನು ಗುರುತಿಸಿ ಕಮಪತ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜೆಸಿಐ ಉಪ್ಪುಂದದ ಮೂಲಕ ಕಳೆದ ಸಾಲಿನಲ್ಲಿ 100 ಕಾರ್ಯಕ್ರಮಗಳನ್ನು ಸಂಘಟಿಸಿಸಿದ್ದು.ಮುಖ್ಯವಾಗಿ…
ಆಲಂದೂರು ದಸರಾ ಕ್ರೀಡಾಕೂಟ ಉದ್ಘಾಟನೆ,ಕ್ರೀಡೆಯೆನ್ನುವುದು ಕೇವಲ ಮನರಂಜನೆಗಷ್ಟೆ ಸೀಮಿತವಲ್ಲ; ಉದಯ ಮಾಕೋಡಿ
ಶಿರೂರು: ಮಾನಸ ಮಿತ್ರ ಮಂಡಳಿ ಆಲಂದೂರು ಇದರ 21ನೇ ವರ್ಷದ ಶಾರದೋತ್ಸವದ ಪ್ರಯುಕ್ತ ದಸರಾ ಕ್ರೀಡಾಕೂಟ ಆಲಂದೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಿತು. ಮಾನಸ ಮಿತ್ರ ಮಂಡಳಿ ಅಧ್ಯಕ್ಷ ಉದಯ ಮಾಕೋಡಿ ದಸರಾ ಕ್ರೀಡಾಕೂಟವನ್ನು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ…
ಕೋಟೆಮನೆ ಶ್ರೀದುರ್ಗಾಂಬಿಕಾ ದೇವಸ್ಥಾನದಲ್ಲಿ ಅ.03 ರಿಂದ 12ರ ವರೆಗೆ ನವರಾತ್ರಿ, ವಿಜಯದಶಮಿ ಉತ್ಸವ
ಶಿರೂರು; ಶ್ರೀದುರ್ಗಾಂಬಿಕಾ ದೇವಸ್ಥಾನ ಕೋಟೆಮನೆ ಶಿರೂರು ಇದರ ನವರಾತ್ರಿ, ವಿಜಯದಶಮಿ ಉತ್ಸವ ಅ.03 ರಿಂದ 12 ರ ವರೆಗೆ ನಡೆಯಲಿದೆ.ಪ್ರತಿದಿನ ಬೆಳಿಗ್ಗೆ ದೇವಳದಲ್ಲಿ ವಿವಿಧ ಪೂಜಾ ಕಾರ್ಯಕ್ರಮ ಹಾಗೂ ಧಾರ್ಮಿಕ ಕಾರ್ಯಕ್ರಮ ಹಾಗೂ ಪ್ರತಿದಿನ ಮಹಾಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ. ಅ.12 ರಂದು…
ವತ್ತಿನಕಟ್ಟೆ ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನದಲ್ಲಿ ಅ.03 ರಿಂದ 12 ರವರೆಗೆ ಶರವನ್ನವರಾತ್ರಿ ಉತ್ಸವ.
ಬೈಂದೂರು: ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನ ವತ್ತಿನಕಟ್ಟೆ ಬೈಂದೂರು ಇದರ ಶರವನ್ನವರಾತ್ರಿ ಮಹೋತ್ಸವ ಅ.03 ರಿಂದ 12ರ ವರೆಗೆ ನಡೆಯಲಿದೆ.ಪ್ರತಿದಿನ ಬೆಳಿಗ್ಗೆ ದುರ್ಗಾಹೊಮ,ದುರ್ಗಾ ಪಾರಾಯಣ,ಚಂಡಿಕಾಹೋಮ,ಮಹಾಮಂಗಳಾರತಿ,ರಂಗಪೂಜೆ,ಮಹಾಪೂಜೆ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ.ಪ್ರತಿದಿನ ಸಂಜೆ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ ಎಂದು…