ಬೈಂದೂರು: ಕಲೆ ಸಾಹಿತ್ಯ ಸಾಂಸ್ಕ್ರತಿಕ ಸೇರಿದಂತೆ ಬೈಂದೂರು ತಾಲೂಕು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡ ಹೆಗ್ಗಳಿಕೆಯಿದೆ.ಬೈಂದೂರು ದಸರಾ ಮುಂದಿನ ದಿನದಲ್ಲಿ ನಮ್ಮ ತಾಲೂಕಿನ ಅಭಿವೃದ್ದಿಯ ಇತಿಹಾಸವಾಗಲಿದೆ.ಮಂಗಳೂರು ಉಚ್ಚಿಲ ದಸರಾದಂತೆ ನಮ್ಮ ತಾಲೂಕಿನಾದ್ಯಂತ ಪ್ರತಿವರ್ಷ ಸಾರ್ವಜನಿಕ ಸಹಕಾರದಲ್ಲಿ ಆಚರಿಸುವ ಮೂಲಕ ಧಾರ್ಮಿಕ ವೇದಿಕೆಯ ಸಾಂಸ್ಕ್ರತಿಕ ಸಂಭ್ರಮವಾಗಿ ಮೂಡಿ ಬರಲಿದೆ.ಈ ವರ್ಷದ ಬೈಂದೂರು ದಸರಾ ಕಾರ್ಯಕ್ರಮ ಶಿರೂರು ಗಡಿಭಾಗದಿಂದ ಆರಂಭವಾಗುವ ಮೂಲಕ ವಿಭಿನ್ನ ಪರಿಕಲ್ಪನೆಯಲ್ಲಿ ಚಾಲನೆ ನೀಡಲಾಗಿದೆ ಎಂದು ಬೈಂದೂರು ದಸರಾ ಉತ್ಸವ ಸಮಿತಿ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಹೇಳಿದರು ಅವರು ಪೇಟೆ ಶ್ರೀ ವೆಂಕಟರಮಣ ಸಭಾಭವನದಲ್ಲಿ ನಡೆದ ಅಕ್ಟೋಬರ್ 03 ರಿಂದ 12ರ ವರೆಗೆ ನಡೆಯುವ ಮಹತೋಭಾರ ಶ್ರೀ ಸೇನೇಶ್ವರ ದೇವಸ್ಥಾನ ಬೈಂದೂರು ಇದರ ಸಾರ್ವಜನಿಕ ಶಾರದೋತ್ಸವ ಸಮಿತಿ ವತಿಯಿಂದ ಶಿರೂರು ಘಟಕದ ಸಾರಥ್ಯದಲ್ಲಿ ನಡೆಯುವ ನಡೆಯುವ ಬೈಂದೂರು ದಸರಾ -2024 ಇದರ ಅಧ್ಯಕ್ಷತೆ ವಹಿಸಿ ಈ ಮಾತುಗಳನ್ನಾಡಿದರು.
ಶಿರೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ನಾಗರತ್ನ ಆಚಾರ್ಯ ಬೈಂದೂರು ದಸರಾ -2024 ಕಾರ್ಯಕ್ರಮ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಶಿರೂರಿನ ಹಿರಿಯ ವೈದ್ಯರಾದ ಡಾ.ಕೆ.ಪಿ ನಂಬಿಯಾರ್,ಬೈಂದೂರು ಶಾರದೋತ್ಸವ ಸಮಿತಿ ಮಾಜಿ ಅಧ್ಯಕ್ಷ ಗಿರೀಶ್ ಬೈಂದೂರು,ಬೈಂದೂರು ದಸರಾ ಉತ್ಸವ ಸಮಿತಿ ಉಪಾಧ್ಯಕ್ಷ ಕೃಷ್ಣ ದೇವಾಡಿಗ,ಖಜಾಂಚಿ ಉಮೇಶ ದೇವಾಡಿಗ ಬಂಕೇಶ್ವರ ಉಪಸ್ಥಿತರಿದ್ದರು.
ಧ.ಗ್ರಾ.ಯೋಜನೆ ಮಾಜಿ ಕೇಂದ್ರ ಸಮಿತಿ ಅಧ್ಯಕ್ಷ ರಘುರಾಮ ಕೆ.ಪೂಜಾರಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ರಾಘವೇಂದ್ರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ವರದಿ/ಚಿತ್ರ: ಗಿರಿ ಶಿರೂರು