ಶಿರೂರು; ರೈತ ಸಂಘ ಶಿರೂರು ಇದರ ವತಿಯಿಂದ ಅ.03 ರಂದು ಹೊಸ್ತು ಹಬ್ಬ ಆಚರಣೆ ಪ್ರಯುಕ್ತ ಕರಾವಳಿಯ ಸೋಡಿಬೆಟ್ಟಿನಲ್ಲಿ ಗ್ರಾಮೀಣ ಸಾಂಪ್ರದಾಯಿಕ ಕ್ರೀಡಾ ಸಂಭ್ರಮ ನಡೆಯಲಿದೆ.ಹೊಸ್ತು ಹಬ್ಬ ಗ್ರಾಮೀಣ ಸೊಗಡಿನ ಆಚರಣೆಯಾಗಿದ್ದು ನವರಾತ್ರಿ ತಿಂಗಳಲ್ಲಿ ಆಚರಿಸಲಾಗುತ್ತದೆ. ಕರಾವಳಿ ಭಾಗದಲ್ಲಿ ಮರೆಯಾಗುತ್ತಿರುವ ಕ್ರೀಡೆಗಳನ್ನು ನೆನಪಿಸುವ ಜೊತೆಗೆ ಸಾಂಪ್ರದಾಯಿಕ ಕ್ರೀಡೆಗಳನ್ನು ಯುವಪೀಳಿಗೆಗೆ ಮುಂದುವರಿಸುವ ಉದ್ದೇಶದಿಂದ ಹೊಸ್ತಿನ ದಿನ ಈ ಕ್ರೀಡೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘದ ಅಧ್ಯ್ಷ ಕ್ಷ ರವೀಂದ್ರ ಶೆಟ್ಟಿ ಹೊಸ್ಮನೆ ತಿಳಿಸಿದ್ದಾರೆ.
