ಬೈಂದೂರು: ಜೆಸಿಐ ಉಪ್ಪುಂದ ಇದರ 2023 ನೇ ಸಾಲಿನ ಅಧ್ಯಕ್ಷ ಪ್ರದೀಪ ಶೆಟ್ಟಿ ಕಾರಿಕಟ್ಟೆ ಯವರಿಗೆ ಸಂಘ ಸಂಸ್ಥೆಗಳಿಗೆ ಸಲ್ಲಿಸಿದ ಅಪಾರ ಸೇವೆಯನ್ನು ಗುರುತಿಸಿ ಕಮಪತ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಜೆಸಿಐ ಉಪ್ಪುಂದದ ಮೂಲಕ ಕಳೆದ ಸಾಲಿನಲ್ಲಿ 100 ಕಾರ್ಯಕ್ರಮಗಳನ್ನು ಸಂಘಟಿಸಿಸಿದ್ದು.ಮುಖ್ಯವಾಗಿ ಪದ್ಮಶ್ರೀ ಪುರಸ್ಕ್ರತರಾದ ಹರೆಕಳ ಹಾಜಬ್ಬ ಹಾಗೂ ವೃಕ್ಷಮಾತೆ ತುಳಸಿಗೌಡ ಅವರನ್ನು ಅತಿಥಿಯಾಗಿ ಜೇಸಿ ವಲಯದಲ್ಲಿ ಸಂಚಲನ ಮೂಡಿಸಿದ್ದಾರೆ.
ಇವರು ಮಾರಿಕಾಂಬ ಯುತ್ ಕ್ಲಬ್, ಎಸ್‌ಡಿಎಮ್ ಗೆಳೆಯರ ಬಳಗ, ಕನ್ನಡ ಸಾಹಿತ್ಯ ಪರಿಷತ್ತು, ಕಳವಾಡಿ ಮಾರಿಕಾಂಬ ದೇವಸ್ಥಾನ, ಬಂಟರ ಯುವ ಸಂಘಟನೆ, ಬಂಟರ ಯಾನೆ ನಾಡವರ ಸಂಘ, ಕುಂದಾಪುರ ಕನ್ನಡ ಸಂಸ್ಕೃತಿ ಪ್ರತಿಷ್ಠಾನ, ಕಳವಾಡಿ ಹವ್ಯಾಸಿ ಕಲಾತಂಡ, ಭಜನಾ ತಂಡ ಹೀಗೆ ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತನ್ನನ್ನು ತೊಡಗಿಸಿಕೊಂಡಿರುವ ಅವರುಈ ವರ್ಷ ಜೆಸಿ ವಲಯ ೧೫ರ ಜೇಸಿ ಸಪ್ತಾಹದ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಈ ಎಲ್ಲ ಸೇವೆಯನ್ನು ಗುರುತಿಸಿ ಪ್ರತಿಷ್ಠಿತ ಕಮಲ ಪತ್ತ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಉಪ್ಪುಂದ ಜೆಸಿಐ ಅಧ್ಯಕ್ಷರಾದ ಮಂಜುನಾಥ ದೇವಾಡಿಗ ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಗೋವಿಂದ ಬಾಬು ಪೂಜಾರಿ, ಕೊಲ್ಲೂರು ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ನೂತನ ಸದಸ್ಯರಾದ ರಘುರಾಮ ದೇವಾಡಿಗ, ಬಿಇಓ ನಾಗೇಶ್ ನಾಯ್ಕ, ಕುಂದಾಪುರ ಕನ್ನಡ ಪ್ರತಿಷ್ಠಾನದ ಮುಖ್ಯಸ್ಥರಾದ ಶರತ್ ಶೆಟ್ಟಿ, ಪ್ರಿಯದರ್ಶಿನಿ ಬೆನ್ನೂರು, ಲಕ್ಷ್ಮಿಕಾಂತ ಬೆನ್ನೂರು, ನಾಗರಾಜ್ ಆರ್ ಸುವರ್ಣ, ನರಸಿಂಹ ದೇವಾಡಿಗ, ರಾಮ ದೇವಾಡಿಗ, ಮಹೇಂದ್ರ ಪೂಜಾರಿ ಯೆಡೇರಿ, ರವೀಂದ್ರ ಎಚ್, ಗುರುರಾಜ ಹೆಬ್ಬಾರ್, ಮತ್ತಿತರರು ಉಪಸ್ಥಿತರಿದ್ದರು.