ಬೈಂದೂರು ಸಂಭ್ರಮ ಸಡಗರದ ಮನ್ಮಹಾರಥೋತ್ಸವ ಸಂಪನ್ನ

ಬೈಂದೂರು; ಮಹೋತೊಭಾರ ಶ್ರೀ ಸೇನೇಶ್ವರ ದೇವಸ್ಥಾನ ಬೈಂದೂರು ಇದರ ಮನ್ಮಹಾರಥೋತ್ಸವ ರವಿವಾರ ಸಂಭ್ರಮ ಸಡಗರದಿಂದ ನಡೆಯಿತು.ಬೆಳಿಗ್ಗೆ ದೇವರಿಗೆ ನಿತ್ಯ ಬಲಿ, ಶತರುದ್ರಾಭಿಷೇಕ, ರಥ ಬಲಿ, ಕ್ಷೇತ್ರಪಾಲ ಬಲಿ, ಪಂಚಾಮೃತ ಅಭಿಷೇಕ, ವಿಶೇಷ ಭೂತ ಬಲಿ, ರಥಾರೋಹಣ ಸೇರಿದಂತೆ ಹಲವು ಧಾರ್ಮಿಕ ವಿಧಿ…

ಶ್ರೀ ಎರಗೇಶ್ವರ  ದೇವಸ್ಥಾನ ಮೇಲ್ಪಂಕ್ತಿ ಶಿರೂರು ನೂತನ ಶಿಲಾ ಧ್ವಜ ಆಗಮನ 

ಶಿರೂರು; ಶ್ರೀ ಎರಗೇಶ್ವರ ದೇವಸ್ಥಾನ ಮೇಲ್ಪಂಕ್ತಿ ಶಿರೂರು ಇದರ ಜೀರ್ಣೋದ್ದಾರದ ಪ್ರಯುಕ್ತ ನೂತನ ಶಿಲಾ ಧ್ವಜ ಸ್ಥಂಭವನ್ನು ಶನಿವಾರ ಬೆಳಿಗ್ಗೆ ಶಿರೂರು ನೀರ್‍ಗದ್ದೆಯಿಂದ ದೇವಸ್ಥಾನದ ವರೆಗೆ ಪೂರ್ಣಕುಂಭ ಮೆರವಣಿಗೆ ಮೂಲಕ ಸ್ವಾಗತಿಸಲಾಯಿತು. ಈ ಸಂಧರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಶಾಂತಾನಂದ…

ಎಸ್ ಎಸ್ ಎಲ್ ಸಿ ಫಲಿತಾಂಶ ಶಿರೂರು ಸರಕಾರಿ ಪದವಿ ಪೂರ್ವ ಕಾಲೇಜು ಉತ್ತಮ ಸಾಧನೆ

ಶಿರೂರು; ಪ್ರಸಕ್ತ ಸಾಲಿನ ಎಸ್.ಎಸ್.ಎಲ್. ಸಿ ಪರೀಕ್ಷೆ ಯಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು, ಶಿರೂರು ಶಾಲೆ 97.46% ದಾಖಲೆಯ ಫಲಿತಾಂಶ ದಾಖಲಿಸಿದೆ. ವಿದ್ಯಾರ್ಥಿಗಳಾದ, ನೇಜಿ ಹಾಜಿರಾ ಸಫ್ರೀನ್ (545) , ನನ್ನು ಅಮೀಮಾ ಅಂಜುಮ್(503)’ ರಿಜಾ ನಾಯಿಫಾ ಬಾತ್ಯಾ ನಾಸಿರ್(485,)…

ಶಿವಮೊಗ್ಗ ಲೋಕಸಭಾ ಚುನಾವಣೆ ಬೈಂದೂರು ಹಾಗೂ ಶಿರೂರು ಮುಂತಾದ ಕಡೆ ಬೆಳಿಗ್ಗೆಯಿಂದಲೆ ಮತದಾನಕ್ಕೆ ಉತ್ತಮ ಸ್ಪಂಧನೆ

ಬೈಂದೂರು: ಶಿವಮೊಗ್ಗ ಲೋಕಸಭಾ ಚುನಾವಣೆ ಕ್ಷೇತ್ರವ್ಯಾಪ್ತಿ ಬೈಂದೂರು ಹಾಗೂ ಶಿರೂರು ಮುಂತಾದ ಕಡೆ ಮತದಾನಕ್ಕೆ ಬೆಳಿಗ್ಗೆಯಿಂದಲೇ ಉತ್ತಮ ಸಂಧನೆ ದೊರೆತಿದೆ.ಅತ್ಯಂತ ವ್ಯವಸ್ಥಿತವಾಗಿ ಎಲ್ಲಾ ಮತಗಟ್ಟೆಗಳಲ್ಲೂ ಮತದಾನ ಪ್ರಕ್ರಿಯೆ ಆರಂಭಗೊಂಡಿದೆ.ಮದ್ಯಾಹ್ನ ಬಿಸಿಲಿನ ತಾಪ ಅಽಕವಾದ ಹಿನ್ನೆಲೆಯಲ್ಲಿ ಒಂದಿಷ್ಟು ಮತದಾರರು ವಿಳಂಬವಾಗಿದ್ದರು.ಇನ್ನುಳಿದಂತೆ ಹೊಸ ಮತದಾರರು,ಹಿರಿಯರು,ಮಹಿಳೆಯರು…

ಅಳ್ವೆಗದ್ದೆ ಶ್ರೀ ಮಹಾಗಣಪತಿ ದೇವಸ್ಥಾನ ನೂತನ ಗರ್ಭಗುಡಿ ಶಿಲಾನ್ಯಾಸ 

ಶಿರೂರು: ಶ್ರೀ ಮಹಾಗಣಪತಿ ದೇವಸ್ಥಾನ ಅಳ್ವೆಗದ್ದೆ ಶಿರೂರು ಇದರ ವತಿಯಿಂದ ಸುಮಾರು ಮೂರು ಕೋಟಿ ವೆಚ್ಚ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ಗರ್ಭಗುಡಿಯ ಶಿಲಾನ್ಯಾಸ ಕಾರ್ಯಕ್ರಮ ರವಿವಾರ ನಡೆಯಿತು.ತಂತ್ರಿಗಳಾದ ವೇ.ಮೂ ರಾಮಚಂದ್ರ ಭಟ್ ಶಿರಾಲಿ ಇವರ ಮಾರ್ಗದರ್ಶನದಲ್ಲಿ  ಧಾರ್ಮಿಕ ವಿಧಿ ವಿಧಾನಗಳು…

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆ,ಬೈಂದೂರು ವಿಧಾನಸಭಾ ಕ್ಷೇತ್ರ ಪೂರ್ಣಗೊಂಡ ಸಿದ್ದತೆ, ಬೈಂದೂರು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಸ್ಟರಿಂಗ್

ಬೈಂದೂರು: ಮೇ.07 ರಂದು ನಡೆಯುವ ಶಿವಮೊಗ್ಗ ಲೋಕಸಭಾ ಚುನಾವಣೆಗೆ ಬೈಂದೂರು ವಿಧಾನಸಭಾ ಕ್ಷೇತ್ರದ ತಯಾರಿ ಪೂರ್ಣಗೊಂಡಿದೆ.ಮೇ.06 ರಂದು ಬೆಳಿಗ್ಗೆಯಿಂದ ಬೈಂದೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಮಸ್ಟರಿಂಗ್ ಕಾರ್ಯ ಆರಂಭಗೊಂಡಿದೆ.ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 246 ಮತಗಟ್ಟೆಗಳಿದ್ದು 240500 ಮತದಾರರಿದ್ದಾರೆ.5233…

ಶಿರೂರಿನ ವಿವಿಧ ಕಡೆಗಳಲ್ಲಿ ಚುನಾವಣಾ ಮುಂಜಾಗ್ರತೆಯ ಕ್ರಮವಾಗಿ ಕೇಂದ್ರ ಮೀಸಲು ಪಡೆಯ ವತಿಯಿಂದ ಪಥ ಸಂಚಲನ

ಶಿರೂರು: ಶಿವಮೊಗ್ಗ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಶಿರೂರಿನ ವಿವಿಧ ಕಡೆಗಳಲ್ಲಿ ಚುನವಣಾ ಭದ್ರತೆಗಾಗಿ ಕೇಂದ್ರ ಮೀಸಲು ಪಡೆ ತುಕಡಿಗಳನ್ನು ನಗರದ ಪ್ರಮುಖ ರಸ್ತೆಗಳಲ್ಲಿ ಪಥ ಸಂಚಲನ ನಡೆಸಿದರು.ಶಾಂತಿ,ಸುವ್ಯವಸ್ಥಿತವಾಗಿ ಚುನಾವಣೆ ನಡೆಸುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಧೈರ್ಯ ತುಂಬಿ, ಚುನಾವಣಾ ಜಾಗೃತಿ ಮೂಡಿಸುವ ಸಲುವಾಗಿ…

ಶಿರೂರಿನ ವಿವಿಧ ಕಡೆಗಳಲ್ಲಿ ಕಾಂಗ್ರೆಸ್ ಪಕ್ಷದ ಪರ ಮೀನುಗಾರಿಕಾ ಸಚಿವ ಮಂಕಾಳ ಎಸ್.ವೈದ್ಯ ಚುನಾವಣಾ ಪ್ರಚಾರ

ಶಿರೂರು: ಕರ್ನಾಟಕ ರಾಜ್ಯದ ಮೀನುಗಾರಿಕಾ,ಒಳನಾಡು ಜಲಸಾರಿಗೆ ಮತ್ತು ಬಂದರು ಸಚಿವ ಮಂಕಾಳ ಎಸ್.ವೈದ್ಯ ಶಿರೂರು,ಅಳ್ವೆಗದ್ದೆ ,ಕಳಿಹಿತ್ಲು ಮುಂತಾದ ಕಡೆಗಳಲ್ಲಿ ಶನಿವಾರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಪರ ಚುನಾವಣಾ ಪ್ರಚಾರ ನಡೆಸಿದರು.ಬಳಿಕ ಮಾತನಾಡಿದ ಅವರು ರಾಜ್ಯದಲ್ಲಿ ಸಿದ್ದರಾಮಯ್ಯ ನೇತ್ರತ್ವದ…

ಬೈಂದೂರು; ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್(ರಿ.)ಉಪ್ಪುಂದ 15ನೇ ಮನೆ ಹಸ್ತಾಂತರ,ನಮ್ಮಲ್ಲಿರುವ ಸಂಪತ್ತಿನ ಒಂದಂಶವನ್ನು ದಾನ ಮಾಡುವುದರಿಂದ ಸಂತೃಪ್ತಿಯ ಜೊತೆಗೆ ಸೇವೆಯ ಸಾರ್ಥಕತೆ ದೊರೆಯುತ್ತದೆ;ಶ್ರೀ  ರೇಣುಕಾನಂದ  ಸ್ವಾಮೀಜಿ

ಬೈಂದೂರು: ಸಮಾಜದಲ್ಲಿ ಉಳ್ಳವರು ಅನೇಕ ಜನ ಇರುತ್ತಾರೆ. ಉಳ್ಳವರೆಲ್ಲರಿಗೂ ದಾನ ಮಾಡುವ ಮನಸ್ಸು ಬಹಳ ಕಡಿಮೆ.ನಮ್ಮಲ್ಲಿರುವ ಸಂಪತ್ತಿನ ಒಂದಂಶವನ್ನು ದಾನ ಮಾಡುವುದರಿಂದ ಸಂತೃಪ್ತಿಯ ಜೊತೆಗೆ ಸೇವೆಯ ಸಾರ್ಥಕತೆ ದೊರೆಯುತ್ತದೆ ಎಂದು ಶ್ರೀನಾರಾಯಣ ಗುರು ಮಹಾ ಸಂಸ್ಥಾನ ನಿಟ್ಟೂರಿನ ಶ್ರೀ  ರೇಣುಕಾನಂದ  ಸ್ವಾಮೀಜಿ…

ಬೈಂದೂರಿನಲ್ಲಿ ತತ್ವಂ ಚೈಲ್ಡ್ ಕೇರ್ ಸೆಂಟರ್ ಶುಭಾರಂಭ

ಬೈಂದೂರು: ಬೈಂದೂರಿನ ಸೇನೇಶ್ವರ ದೇವಸ್ಥಾನದ ಲಾವಣ್ಯ ರಂಗ ಮನೆಯ ಬಳಿ ನಿರ್ಮಾಣಗೊಂಡಿರುವ ತತ್ವಂ ಚೈಲ್ಡ್ ಕೇರ್ ಸೆಂಟರ್ ಗುರುವಾರ ಶುಭಾರಂಭಗೊಂಡಿತು.ಕುಂದಾಪುರ ಶ್ರೀದೇವಿ ನರ್ಸಿಂಗ್ ಹೋಮ್ ಇದರ ಮುಖ್ಯಸ್ಥ ಡಾ.ರವೀಂದ್ರ ರಾವ್ ಹಾಗೂ ಡಾ.ಭವಾನಿ ಆರ್.ರಾವ್ ನೂತನ ತತ್ವಂ ಚೈಲ್ಡ್ ಕೇರ್ ಸೆಂಟರ್…