ಬೈಂದೂರು: ಮೇ.07 ರಂದು ನಡೆಯುವ ಶಿವಮೊಗ್ಗ ಲೋಕಸಭಾ ಚುನಾವಣೆಗೆ ಬೈಂದೂರು ವಿಧಾನಸಭಾ ಕ್ಷೇತ್ರದ ತಯಾರಿ ಪೂರ್ಣಗೊಂಡಿದೆ.ಮೇ.06 ರಂದು ಬೆಳಿಗ್ಗೆಯಿಂದ ಬೈಂದೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಮಸ್ಟರಿಂಗ್ ಕಾರ್ಯ ಆರಂಭಗೊಂಡಿದೆ.ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 246 ಮತಗಟ್ಟೆಗಳಿದ್ದು 240500 ಮತದಾರರಿದ್ದಾರೆ.5233 ಹೊಸ ಮತದಾರರಿದ್ದು 2969 ಹಿರಿಯ ಮತದಾರರು ಹಾಗೂ 3156 ಅಂಗವಿಕಲ ಮತದಾರರಿದ್ದಾರೆ.9 ವಿಶೇಷ ಮತಗಟ್ಟೆಗಳನ್ನು ನಿರ್ಮಿಸಿದ್ದು 5 ಸಖಿ ,1 ವಿಶೇಷ ಚೇತನ, 1 ಸಾಂಸ್ಕ್ರತಿಕ,ಸಾಂಪ್ರದಾಯಿಕ ಮತಗಟ್ಟೆಗಳಿವೆ.ಒಟ್ಟು 1192 ಅಧಿಕಾರಿಗಳಿದ್ದು 20 ಸಿಬಂದಿಗಳನ್ನು ಕಾಯ್ದಿರಿಸಲಾಗಿದೆ.598 ಆರಕ್ಷಕರಿದ್ದು 85 ಬಸ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ.ಮತದಾನಕ್ಕೆ ತಯಾರಿ ಪೂರ್ಣಗೊಂಡಿದ್ದು ಮತಗಟ್ಟೆಯಲ್ಲಿ ಕುಡಿಯುವ ನೀರು,ಆರೋಗ್ಯ ಸೇರಿದಂತೆ ಎಲ್ಲಾ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ಆರ್.ಮಂಜುನಾಥ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಕುಂದಾಪುರ ಸಹಾಯಕ ಕಮಿಷನರ್ ರಶ್ಮಿ ಎಸ್.ಆರ್,ಬೈಂದೂರು ತಹಶೀಲ್ದಾರ ಪ್ರದೀಪ್ ಆರ್ ಹಾಗೂ ವಿವಿಧ ಅಧಿಕಾರಿಗಳು ಹಾಜರಿದ್ದರು.

News/pic:Giri shiruru

 

Leave a Reply

Your email address will not be published.

10 + 3 =