ಬೈಂದೂರು: ಬೈಂದೂರಿನ ಸೇನೇಶ್ವರ ದೇವಸ್ಥಾನದ ಲಾವಣ್ಯ ರಂಗ ಮನೆಯ ಬಳಿ ನಿರ್ಮಾಣಗೊಂಡಿರುವ ತತ್ವಂ ಚೈಲ್ಡ್ ಕೇರ್ ಸೆಂಟರ್ ಗುರುವಾರ ಶುಭಾರಂಭಗೊಂಡಿತು.ಕುಂದಾಪುರ ಶ್ರೀದೇವಿ ನರ್ಸಿಂಗ್ ಹೋಮ್ ಇದರ ಮುಖ್ಯಸ್ಥ ಡಾ.ರವೀಂದ್ರ ರಾವ್ ಹಾಗೂ ಡಾ.ಭವಾನಿ ಆರ್.ರಾವ್ ನೂತನ ತತ್ವಂ ಚೈಲ್ಡ್ ಕೇರ್ ಸೆಂಟರ್ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಆಧುನಿಕ ಆಹಾರ ಪದ್ದತಿಯಲ್ಲಿ ಮಕ್ಕಳು,ಮಹಿಳೆಯರು ಮತ್ತು ಜನರ ಆರೋಗ್ಯ ಕಾಳಜಿ ಮತ್ತು ಜಾಗೃತಿ ಬಹುಮುಖ್ಯ ಕಾಯಿಲೆ ಬಂದ ನಂತರ ಚಿಕಿತ್ಸೆ ಪಡೆಯುವುದಕ್ಕಿಂತ ಮುಂಚಿತವಾಗಿ ಜಾಗೃತಿ ಮತ್ತು ತಜ್ಞ ವೈದ್ಯರಿಂದ ಆರೋಗ್ಯ ಮಾಹಿತಿ ಪಡೆದುಕೊಳ್ಳುವುದು ಬಹಳ ಸೂಕ್ತ.ತಾಲೂಕು ಕೇಂದ್ರವಾದ ಬೈಂದೂರಿನಲ್ಲಿ ತತ್ವಂ ಚೈಲ್ಡ್ ಕೇರ್ ನಂತಹ ಸೆಂಟರ್‌ಗಳು ಆರಂಭವಾಗಿರುವುದರಿಂದ ತುರ್ತು ಪರಿಸ್ಥಿತಿಗಳಲ್ಲಿ ತಕ್ಷಣ ಸೂಕ್ತ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತದೆ.ಸಂಸ್ಥೆ ಉತ್ತಮವಾಗಿ ಬೆಳೆಯುವುದರ ಜೊತೆಗೆ ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳುವಂತಾಗಲಿ ಎಂದರು.
ಹಾಗೂ ಕಳೆದ 20 ವರ್ಷಗಳಿಂದ ಮಕ್ಕಳ ಆರೈಕೆ ಹಾಗೂ ಚಿಕಿತ್ಸೆಯಲ್ಲಿ ಕುಂದಾಪುರ ಮನೀಷ್ ಆಸ್ಪತ್ರೆ, ಶ್ರೀದೇವಿ ಆಸ್ಪತ್ರೆ ಹಾಗೂ ಶ್ರೀದೇವಿ ನರ್ಸಿಂಗ್ ಹೋಮ್‌ನಲ್ಲಿ ಮಕ್ಕಳ ತಜ್ಞೆಯಾಗಿ ಸೇವೆ ಸಲ್ಲಿಸುತ್ತಿರುವ ಡಾ.ರಶ್ಮೀ ಎಸ್.ಉಡುಪ (ಎಂ.ಡಿ.ಪಿಡಿಯಾಟ್ರಿಕ್ಸ್) ರವರು ನೂತನ ಕ್ಲಿನಿಕ್‌ನಲ್ಲಿ ಬೆಳಿಗ್ಗೆ 10 ರಿಂದ ಮದ್ಯಾಹ್ನ 02 ಗಂಟೆಯವರೆಗೆ ಸೇವೆಗೆ ಲಭ್ಯರಿದ್ದಾರೆ.
ಈ ಸಂದರ್ಭದಲ್ಲಿ ಕಟ್ಟಡದ ಮಾಲಕರಾದ ಗಣೇಶ ಕಾರಂತ್ ಬೈಂದೂರು,ಕುಂದಾಪುರದ ವೈದ್ಯರು,ಸುದಶ೯ನ ಉಡುಪ,ವಾಸುದೇವ ಹಾಗೂ ಹಿತೈಷಿಗಳು ಉಪಸ್ಥಿತರಿದ್ದರು.