Category: Shiruru Exclusive

ಸ.ಹಿ.ಪ್ರಾ.ಶಾಲೆ ಮುಲ್ಲಿಬಾರು ಶಾಲೆಗೆ ಕಂಪ್ಯೂಟರ್ ಕೊಡುಗೆ,ಗ್ರಾಮೀಣ ಭಾಗದ ಶಾಲೆಗಳನ್ನು ಗುರುತಿಸಿ ನೀಡುತ್ತಿರುವ ಕೊಡುಗೆ ನೂರಾರು ಬಡ ವಿದ್ಯಾರ್ಥಿಗಳಿಗೆ ಮತ್ತು ಕ್ಷೇತ್ರದ ಗೌರವವನ್ನು ಹೆಚ್ಚಿಸಿದೆ;ಗುರುರಾಜ ಗಂಟಿಹೊಳೆ

ಬೈಂದೂರು; ಸಮೃದ್ದ ಬೈಂದೂರು ಸಂಸ್ಥೆಯ ಮೂಲಕ ಕ್ಷೇತ್ರದ ಬಹುತೇಕ ಶಾಲೆಗಳಿಗೆ ಮೂಲ ಸೌಕರ್ಯ ಒದಗಿಸುವ ಜೊತೆಗೆ ಶಿಕ್ಷಣ,ಆರೋಗ್ಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ದಾನಿಗಳ ನೆರವಿನಿಂದ ಅತ್ಯುತ್ತಮ ಕಾರ್ಯ ನಡೆಯುತ್ತಿದೆ.ಸ್ವಯಂಸ್ಪೂರ್ತಿ ಫೌಂಡೇಶನ್ ಬೆಂಗಳೂರು ಸಂಸ್ಥೆ ಬೈಂದೂರು ಕ್ಷೇತ್ರದ ಗ್ರಾಮೀಣ ಭಾಗದ ಶಾಲೆಗಳನ್ನು ಗುರುತಿಸಿ…

ಓಲಂಪಿಯಡ್ ಪರೀಕ್ಷೆಯಲ್ಲಿ ಹೊಸೂರಿನ ವಂಶಿಕಾ ಮರಾಠಿ ತಾಲೂಕಿಗೆ ಪ್ರಥಮ

ಬೈಂದೂರು; ಆಲೂರು ವೆಂಕಟರಾಯರ ಕನ್ನಡ ಭಾಷಾ ಓಲಂಪಿಯಾಡ್ ಸಾಮಾನ್ಯ ಜ್ಞಾನ ಪರೀಕ್ಷೆಯಲ್ಲಿ ಹೈಸ್ಕೂಲ್ ವಿಭಾಗದ ಎಂಟನೇ ತರಗತಿಗೆ ನಡೆಸಲಾದ ಪರೀಕ್ಷೆಯಲ್ಲಿ ಬೈಂದೂರು ವಲಯದ ಗ್ರಾಮೀಣ ಪ್ರದೇಶವಾದ ಮುಲ್ಲಿಬಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ವಂಶಿಕ ಮರಾಠಿ…

ಬೈಂದೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಘಟಕದ ಅಧ್ಯಕ್ಷರಾಗಿ ಅರುಣ್ ಕುಮಾರ ಶಿರೂರು ನೇಮಕ

ಬೈಂದೂರು: ಬೈಂದೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಘಟಕದ ನೂತನ ಅಧ್ಯಕ್ಷರಾಗಿ ಪತ್ರಕರ್ತ ಅರುಣ್ ಕುಮಾರ ಶಿರೂರು ನೇಮಕ ವಾಗಿದ್ದಾರೆ. ಮಂಗಳವಾರ ಜೆ ಎನ್ ಅರ್ ಬಯಲು ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧಿಕಾರ ಸ್ವೀಕರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಉಡುಪಿ ಜಿಲ್ಲಾ…

ಹೇರಂಜಾಲು: ಗುಡೆ ಏತ ನೀರಾವರಿ ಯೋಜನೆ ಮಾಹಿತಿ ಸಭೆ,ರೈತ ನಾಯಕರು ಮತ್ತು ಗುತ್ತಿಗೆದಾರ ಪರ ನಾಯಕರ ಜಟಾಪಟಿ,ಬೈಂದೂರು ಕ್ಷೇತ್ರದಲ್ಲಿ ಆರಂಭಗೊಂಡಿದೆ ರಾಜಕೀಯ ಜಂಗಿ ಕುಸ್ತಿ

ಬೈಂದೂರು; ರಾಜಕೀಯ ಜಂಜಾಟ ಗುತ್ತಿಗೆದಾರರ ಒಳರಾಜಕೀಯ.ನಾಯಕರುಗಳ ತೆರೆಮರೆಯ ಕಸರತ್ತು.ಒಳಗೊಳಗಿನ ಮಸಲತ್ತು ಪರ ವಿರೋದ ಹೊಂದಾಣಿಕೆ ಬೈಂದೂರು ಕ್ಷೇತ್ರದಲ್ಲಿ ಇದು ಇಂದು ನಿನ್ನೆಯದಲ್ಲ.ನಿರಂತರ ಇಂತಹ ಹತ್ತಾರು ಜಂಗಿ ಕುಸ್ತಿ ನಡೆಯುವುದು ಬಳಿಕ ಅದ್ಯಾವುದೋ ಮದ್ಯಸ್ಥಿಕೆಯಲ್ಲಿ ತಟಸ್ಥವಾಗುವುದು ಸಹಜ ಸಾಮಾನ್ಯ ವಾಗಿದೆ.ಆದರೆ ಹೆರಂಜಾಲು ಗುಡೆ…

ಶ್ರೀ ಮಹಾಸತಿ ಯುವಕ ಸಂಘ ಮುದ್ರಮಕ್ಕಿ 25ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ

ಶಿರೂರು: ಶ್ರೀ ಮಹಾಸತಿ ಯುವಕ ಸಂಘ (ರಿ.) ಮುದ್ರಮಕ್ಕಿ ಶಿರೂರು ಇದರ 25 ನೇ ವಾರ್ಷಿಕೋತ್ಸವ ಸಮಾರಂಭ ಮುದ್ರಮಕ್ಕಿಯಲ್ಲಿ ನಡೆಯಿತು.ಪತ್ರಕರ್ತ ಅರುಣ್ ಕುಮಾರ್ ಶಿರೂರು ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಧ.ಗ್ರಾಮಾಭಿವೃದ್ದಿ  ಯೋಜನೆಯ ಭಜನಾ ಪರಿಷತ್ ಗೌರವಾಧ್ಯಕ್ಷ  ರಘುರಾಮ್ ಕೆ.ಪೂಜಾರಿ ಮಾತನಾಡಿ…

ದಿ.ಭಟ್ಕಳ ಅರ್ಬನ್ ಕೋ-ಅಪರೇಟಿವ್ ಬ್ಯಾಂಕ್ ನಿರ್ದೇಶಕರಾಗಿ ತುಳಸಿದಾಸ್ ಮೊಗೇರ್ ಶಿರೂರು ಆಯ್ಕೆ

ಶಿರೂರು: ಪ್ರತಿಷ್ಠಿತ ದಿ.ಭಟ್ಕಳ ಅರ್ಬನ್ ಕೋ-ಅಪರೇಟಿವ್ ಬ್ಯಾಂಕ್ ಲಿ.ಇದರ ದ್ವಿತೀಯ ಬಾರಿಗೆ ನಿರ್ದೇಶಕರಾಗಿ ತುಳಸಿದಾಸ್ ಮೊಗೇರ್ ಶಿರೂರು ಇವರು ಅತ್ಯಧಿಕ ಮತಗಳಿಂದ ಗೆಲುವು ಸಾಧಿಸಿದ್ದಾರೆ.

ಜೆಸಿಐ ಬೈಂದೂರು ಸಿಟಿ ಘಟಕ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭ

ಬೈಂದೂರು: ಮನುಷ್ಯನಾಗಿ ಜನ್ಮತಾಳಿದ ಮೇಲೆ ಸಮಾಜ ಸೇವೆಯ ಮೂಲಕ ನಮ್ಮ ಹೆಜ್ಜೆ ಗುರುತನ್ನು ಉಳಿಸಿ ಹೋಗಬೇಕು.ಜೇಸಿಯಂತಹ ಯುವಕರ ಸಂಸ್ಥೆ ವ್ಯಕ್ತಿತ್ವ ವಿಕಸನ ಮತ್ತು ಸಮಾಜ ಸೇವೆಗೆ ರಹದಾರಿ ಎಂದು ಕೇರಳ ಕಾಸರಗೋಡಿನ ಬ್ರಹ್ಮಕುಮಾರಿ ಈಶ್ವರೀ ವಿದ್ಯಾಲಯದ ಮೇಲ್ವಿಚಾರಕಿ ರಾಜಯೋಗಿನಿ ಬಿ. ಕೆ.…

ಎಮ್.ಎಮ್.ಫೌಂಡೇಶನ್ ಶಿರೂರು,ಗಣರಾಜ್ಯೋತ್ಸವ ಸಂಭ್ರಮದ ಪ್ರಯುಕ್ತ ನನ್ನ ದೇಶ ನನ್ನ ಜವಬ್ದಾರಿ ಉಪನ್ಯಾಸ

ಶಿರೂರು: ಎಮ್.ಎಮ್.ಫೌಂಡೇಶನ್ ಶಿರೂರು ಹಾಗೂ ಜೆಸಿಐ ಶಿರೂರು ಇದರ ಸಂಯುಕ್ತ ಆಶ್ರಯದಲ್ಲಿ ಗಣರಾಜ್ಯೋತ್ಸವ ಸಂಭ್ರಮದ ಪ್ರಯುಕ್ತ ನನ್ನ ದೇಶ ನನ್ನ ಜವಬ್ದಾರಿ ಉಪನ್ಯಾಸ ಮತ್ತು ಕುಟುಂಬ ಸಮ್ಮೀಲನ ಕಾರ್ಯಕ್ರಮ ಎಮ್.ಎಮ್.ರೇಸಾರ್ಟ್ ಗೋರ್ಟೆಯಲ್ಲಿ ನಡೆಯಿತು. ಉಪನ್ಯಾಸಕ ಅಬ್ದುಲ್ ರವೂಪ್ ನನ್ನ ದೇಶ ಮತ್ತು…

ಶಿರೂರು ಸ್ವಚ್ಚತಾ ಕಾರ್ಯಕ್ರಮ

ಶಿರೂರು: ಶ್ರೀ ಮಹಾಸತಿ ಯುವಕ ಸಂಘ (ರಿ.) ಮುದ್ರಮಕ್ಕಿ  ಶಿರೂರು ಇದರ ಅಧ್ಯಕ್ಷರಾದ ರಾಘು ಶಿರೂರು ರವರ ನೇತೃತ್ವದಲ್ಲಿ  ಶಿರೂರು ಮಾರ್ಕೆಟ್ ಮತ್ತು ಕೇಳಪೇಟೆ ಯಲ್ಲಿನ ಪ್ರಯಾಣಿಕರ  ತಂಗುದಾಣವನ್ನು ಸ್ವಚ್ಛಗೊಳಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಸದಸ್ಯರಾದ ತಿಮ್ಮಪ್ಪ ಪೂಜಾರಿ, ಮಂಜುನಾಥ್ ಪೂಜಾರಿ,…

ಶಿರೂರಿನಲ್ಲಿ ಹೊನಲು ಬೆಳಕಿನ ಮುಕ್ತ ಪುಟ್ಬಾಲ್ ಪಂದ್ಯಾಟ

ಶಿರೂರು: ಕೆಸರಕೋಡಿ ಯಂಗ್ ಸ್ಟಾರ್‍ಸ್ ಇವರ ವತಿಯಿಂದ ಹೊನಲು ಬೆಳಕಿನ ಮುಕ್ತ ಪುಟ್ಬಾಲ್ ಪಂದ್ಯಾಟ ಜ.31 ಹಾಗೂ ಫೆ.01 ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೆಸರಕೋಡಿ ಮೈದಾನದಲ್ಲಿ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.