ಬೈಂದೂರು: ಹಿಂದೂಗಳ ಪವಿತ್ರ ಹಬ್ಬವಾದ ನಾಗರಪಂಚಮಿ ಹಬ್ಬ ಮಂಗಳವಾರ ಬೈಂದೂರು ಹಾಗೂ ಶಿರೂರಿನ ವಿವಿಧ ಕಡೆಗಳಲ್ಲಿ ಶ್ರದ್ದಾ ಭಕ್ತಿಯಿಂದ ಆಚರಿಸಲಾಯಿತು.
ಶಿರೂರು ಕರಾವಳಿ ನಾಕಟ್ಟೆ ನಾಗಬನ, ಚೆನ್ನಪ್ಪಯ್ಯನತೊಪ್ಪಲು ನಾಗಬನ ಕರಾವಳಿ ಶಿರೂರು, ಶಿರೂರು ಅಳ್ವೆಗದ್ದೆ ನಾಗಬನ, ಉಪ್ಪುಂದ ಸುಮನಾವತಿ ಬಳಿ ನಾಗಮಂದಿರ ಮುಂತಾದ ಕಡೆಗಳಲ್ಲಿ ನಾಗರಪಂಚಮಿ ಹಬ್ಬವನ್ನು ಆಚರಿಸಲಾಯಿತು.