ಬೈಂದೂರು: ಶ್ರೀ ವಿಶ್ವಕರ್ಮ ಸೌಹಾರ್ದ ಸಹಕಾರಿ ಸಂಘ ಬೈಂದೂರು ಇದರ ವಾರ್ಷಿಕ ಮಹಾಸಭೆ ಶ್ರೀ ಕೃಷ್ಣ ಲಲಿತಾ ಕಲಾ ಮಂದಿರ ನಾಗೂರಿನಲ್ಲಿ ನಡೆಯಿತು.

ಸಂಘದ ಅಧ್ಯಕ್ಷ ದಿವಾಕರ ಆಚಾರ್ಯ ಮಾರಣಕಟ್ಟೆ ಅಧ್ಯಕ್ಷತೆ ವಹಿಸಿದ್ದರು.

ಸಂಸ್ಥೆಯ ಉಪಾಧ್ಯಕ್ಷ ನಾರಾಯಣ ಆಚಾರ್ಯ ಮುವುಡ,ನಿರ್ದೇಶಕರಾದ ಮಂಜುನಾಥ ಆಚಾರ್ಯ ಬಡಾಕೆರೆ, ನಾಗರಾಜ ಆಚಾರ್ಯ ಬಿಜೂರು,ದಿನೇಶ ಆಚಾರ್ಯ ನೀರ್ಕೆರೆ,ರಾಘವ ಆಚಾರ್ಯ ಶಿರೂರು,ಜಿ. ವಾಸುದೇವ ಆಚಾರ್ಯ ಗುಜ್ಜಾಡಿ, ಉಮೇಶ ಆಚಾರ್ಯ ಆಲೂರು ಮುಂಡಕೋಡ, ಮೂಕಾಂಬಿಕಾ ಎಮ್‌ ಆಚಾರ್ಯ ಬಡಾಕೆರೆ,ಪೂರ್ಣಿಮಾ ಆಚಾರ್ಯ ಕಳವಾಡಿ, ಉಪ್ರಳ್ಳಿ ಕಾಳಿಕಾಂಬಾ ದೇವಸ್ಥಾನದ ಮೂರನೇ ಮೊಕ್ತೇಸರ ಶ್ರೀಧರ ಆಚಾರ್ಯ ಸಂಸ್ಥೆಯ ಸಿಬ್ಬಂದಿಗಳು ಹಾಗೂ ಪಿಗ್ಮಿ ಸಂಗ್ರಹಕರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಜಗದೀಶ ಆಚಾರ್ಯ ಚೌಥನಿ ಭಟ್ಕಳ ರವರನ್ನು ಸಮ್ಮಾನಿಸಲಾಯಿತು ಹಾಗೂ ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಲಾಯಿತು.

ಅಧ್ಯಕ್ಷ ದಿವಾಕರ ಆಚಾರ್ಯ ಮಾರಣಕಟ್ಟೆ ಚಿತ್ತೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು.ಸಂಸ್ಥೆಯ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೆಂಕಟೇಶ ಆಚಾರ್ಯ ಹೇರಂಜಾಲು ವಾರ್ಷಿಕ ವರದಿ ಮಂಡಿಸಿದರು.ನಿರ್ದೇಶಕ ದಿನೇಶ ಆಚಾರ್ಯ ನೀರ್ಕೆರೆ ಸ್ವಾಗತಿಸಿದರು.ನಿರ್ದೇಶಕ ನಾಗರಾಜ ಆಚಾರ್ಯ ಬಿಜೂರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

 

Leave a Reply

Your email address will not be published. Required fields are marked *

1 × two =