ಶಿರೂರು: ಕಳೆದ 35 ವರ್ಷಗಳಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಐ.ಆರ್.ಬಿ) ಯಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ ಶಿರೂರು ಟೋಲ್ ಪ್ಲಾಜಾದಲ್ಲಿ ಕಳೆದ ಮೂರು ವರ್ಷಗಳಿಂದ ಟೋಲ್ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ರಾಜನ್ ನಾಯರ್ ರವರ ಬೀಳ್ಕೋಡುಗೆ ಸಮಾರಂಭ ಶಿರೂರಿನಲ್ಲಿ ನಡೆಯಿತು.ಶಿರೂರು ಟೋಲ್ ಪ್ಲಾಜಾದ ಸಿಬ್ಭಂದಿಗಳ ವತಿಯಿಂದ ರಾಜನ್ ನಾಯರ್ ರವರನ್ನು ಸಮ್ಮಾನಿಸಲಾಯಿತು.ಸಮ್ಮಾನ ಸ್ವೀಕರಿಸಿ ಮಾತನಾಡಿದ ಅವರು ವಿವಿಧ ಊರುಗಳನ್ನು ಬೆಸೆಯುವ ರಾಷ್ಟ್ರೀಯ ಹೆದ್ದಾರಿಯ ನಿರ್ವಹಣೆಯ ಐ.ಆರ್.ಬಿ ಕಂಪೆನಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತನಾಗುತ್ತಿರುವ ಹೆಮ್ಮೆಯಿದೆ.ಉಡುಪಿ ಜಿಲ್ಲೆ ಹಾಗೂ ಶಿರೂರು ಅತ್ಯಂತ ಸಹಕಾರ ನೀಡಿರುವ ಜೊತೆಗೆ ಉತ್ತಮ ಬಾಂಧವ್ಯ ಹೊಂದಿರುವುದು ಅತ್ಯುತ್ತಮ ಸೇವೆ ಸಲ್ಲಿಸಲು ಸಹಕಾರಿಯಾಗಿದೆ.ಸೇವೆಯಿಂದ ನಿವೃತ್ತಿಯಾದರು ಸಹ ಊರಿನ ಬಾಂಧವ್ಯ ಸದಾ ಜಾಗೃತವಾಗಿರುತ್ತದೆ ಎಂದರು.
ಈ ಸಂದರ್ಭದಲ್ಲಿ ಮುಖ್ಯ ಟೋಲ್ ಸಂಯೋಜಕ ಪ್ರಮೋದ್ ಶುಕ್ಲ,ವಿನೋದ್ ನಿಕಮ್,ಪ್ರೋಜೆಕ್ಟ್ ಜಿ.ಎಮ್ ಮದನ್‌ಕರ್,ಶ್ರೀನಿವಾಸ ರಾವ್,ಬೈಂದೂರು ಆರಕ್ಷಕ ಠಾಣೆಯ ಠಾಣಾಧಿಕಾರಿ ತಿಮ್ಮೇಶ ಬಿ.ಎನ್,ಕ್ರೈಂ ಇನ್ಸ್‌ಪೇಕ್ಟರ್ ನವೀನ್ ಬೋರ್ಕರ್,ಉದ್ಯಮಿಗಳಾದ ರಘುರಾಮ ಕೆ.ಪೂಜಾರಿ,ಸುಬ್ರಾಯ ನಾಯ್ಕ,ಪತ್ರಕರ್ತ ಅರುಣ್ ಕುಮಾರ್ ಶಿರೂರು, ಟೋಲ್ ಅಧಿಕಾರಿಗಳು ಹಾಗೂ ಟೋಲ್ ಸಿಬ್ಬಂದಿಗಳು ಹಾಜರಿದ್ದರು.
ಟೋಲ್ ಸಿಬ್ಬಂದಿ ದೀಪಕ್ ಕುಮಾರ್ ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ವರದಿ/ಚಿತ್ರ : ಗಿರಿ ಶಿರೂರು