ಶಿರೂರು; ಅಳ್ವೆಗದ್ದೆ ಮಹಿಳಾ ಮೀನುಗಾರರ ಸಹಕಾರಿ ಸಂಘ(ನಿ.) ಅಳ್ವೆಗದ್ದೆ ಶಿರೂರು ಇದರ 2025-26ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಕಛೇರಿಯಲ್ಲಿ ನಡೆಯಿತು.
ಸಂಘದ ಅಧ್ಯಕ್ಷೆ ಸಾವಿತ್ರಿ ಎನ್.ಅಳ್ವೆಗದ್ದೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ವರದಿ ವರ್ಷದಲ್ಲಿ ಸಂಘವು ಪ್ರಸ್ತುತ ಲಾಭಾಂಶದಲ್ಲಿದ್ದು.ಸಂಘದ ಅಭಿವೃದ್ದಿಗೆ ಪ್ರತಿಯೊರ್ವ ಸದಸ್ಯರ ಸಹಕಾರ ಅಗತ್ಯವಾಗಿದೆ.ಒಗ್ಗಟ್ಟಿನಿಂದ ಮುನ್ನೆಡೆದು ನಮ್ಮ ಸಂಘ ಇನ್ನಷ್ಟುಬಲಗೊಳಿಸೋಣ ಎಂದರು.
ಸಂಘದ ಉಪಾಧ್ಯಕ್ಷೆ ನಾಗವೇಣಿ,ನಿರ್ದೇಶಕರಾದ ಪದ್ಮಾವತಿ,ಗೀತಾ,ಚಂದ್ರಾವತಿ, ರುಕ್ಮಿಣಿ,ದೇವಕಿ,ಚಂದ್ರಕಲಾ,ಕಮಲ,ಪ್ರೇಮಾ ಉಪಸ್ಥಿತರಿದ್ದರು.
ಕಾರ್ಯದರ್ಶಿ ಸಂಗೀತಾ ವಾರ್ಷಿಕ ವರದಿ ಮಂಡಿಸಿ ಕಾರ್ಯಕ್ರಮ ನಿರ್ವಹಿಸಿದರು.