ಬೈಂದೂರು: ಪಟ್ಟಣ ಪಂಚಾಯತ್ ವ್ಯಾಪ್ತಿಯಿಂದ ಗ್ರಾಮೀಣಭಾಗಗಳನ್ನು ಕೈ ಬಿಡುವಂತೆ ಆಗ್ರಹಿಸಿ ಕಳೆದ ಒಂದು ವರ್ಷದಿಂದ ಬೈಂದೂರಿನಲ್ಲಿ ರೈತರು ನಡೆಸುತ್ತಿರುವ ಧರಣಿ ಮತಗತು ಬೇಡಿಕೆ ಕುರಿತು ಬೆಂಗಳೂರಿನ ವಿಧಾನಸೌದದ ನಗರಾಭಿವ್ರದ್ದಿ ಸಚಿವರ ಕಛೇರಿಯಲ್ಲಿ ವಿಶೇಷ ಸಭೆ ನಡೆಯಿತು.ಕಸ್ತೂರಿ ರಂಗನ್ ವರದಿ ಜನಾಭಿಪ್ರಾಯ ಸಂವಾದ ಕಾರ್ಯಕ್ರಮದಲ್ಲಿ ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಆಗಮಿಸಿದ ವೇಳೆ ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ ಶೆಟ್ಟಿ ನೇತ್ರತ್ವದಲ್ಲಿ ಸಾವಿರಾರು ರೈತರು ಬೇಟಿ ಮಾಡಿ ಮನವಿ ನೀಡಿದ್ದರು.
ಮನವಿ ಸ್ವೀಕರಿಸಿ ಮಾಹಿತಿ ಪಡೆದ ಮುಖ್ಯಮಂತ್ತಿಗಳುರೈತರಿಗೆ ಶೀಘ್ರ ನ್ಯಾಯ ಒದಗಿಸುವ ಭರವಸೆ ನೀಡಿದ್ದರು.ಹಾಗೂ ಈ ಕುರಿತು ಸರಕಾರದ ಮಟ್ಟದಲ್ಲಿ ತರುವಂತೆ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿಯವರಿಗೆ ಜವಬ್ದಾರಿ ನೀಡಿದ್ದರು.
ಈ ಕುರಿತು ಮಂಜುನಾಥ ಭಂಡಾರಿಯವರ ನೇತ್ರತ್ವದಲ್ಲಿ ರೈತರ ನಿಯೋಗ ಬೆಂಗಳೂರಿನಲ್ಲಿ ನಗರಾಭಿವ್ರದ್ದಿ ಸಚಿವರು ಮತ್ತು ವಿವಿಧ ಅಧಿಕಾರಿಗಳನ್ನು ಬೇಟಿ ಮಾಡಿದ್ದರು.ವಿಧಾನಸೌದದಲ್ಲಿ ನಗರಾಭಿವ್ರದ್ದಿ ಸಚಿವ ಭಾಲಕ್ರಷ್ಣ ವಿಶೇಷ ಸಭೆ ನಡೆಸಿ ಬೈಂದೂರು ಪಟ್ಟಣ ಪಂಚಾಯತ್ ಕುರಿತು ಚರ್ಚೆ ನಡೆಸಿದರು.ಅಧಿಕಾರಗಳ ವಿವರ ಪಡೆದು ಮಾಹಿತಿ ಪಡೆದು ಸೂಕ್ತ ನ್ಯಾಯ ಒದಗಿಸುವ ಭರವಸೆ ನೀಡಿದರು.
ಈ ಸಂಧರ್ಭದಲ್ಲಿ ಮಾಜಿ ನಗರಾಭಿವ್ರದ್ದಿ ಸಚಿವ ರಹಿಂ ಖಾನ್,ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ನಗರಾಭಿವ್ರದ್ದಿ ಮುಖ್ಯ ಕಾರ್ಯದರ್ಶಿ ಕಾವೇರಿ,ಮಾಜಿ ಶಾಸಕ ಕೆ ಗೋಪಾಲ ಪೂಜಾರಿ,ರೈತ ಮುಖಂಡರಾದ ದೀಪಕ್ ಕುಮಾರ ಶೆಟ್ಟಿ, ಅರುಣ ಕುಮಾರ ಶಿರೂರು.ವೀರಭದ್ರ ಗಾಣಿಗ ಹಾಗೂ ವಿವಿಧ ಹಿರಿಯ ಅಧಿಕಾರಿಗಳು ಹಾಜರಿದ್ದರು>