ಬೈಂದೂರು: ಶಿರೂರು ವಲಯ ಮೀನುಗಾರರ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಇದರ ವಾರ್ಷಿಕ ಮಹಾಸಭೆ ಶುಕ್ರವಾರ ಓಂ ಗಣೇಶ ಯುವಕ ಸಂಘದ ಸಭಾಭವನ ಅಳ್ವೆಗದ್ದೆಯಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ನಾರಾಯಣ ಮಾಸ್ತಿ ಅಕ್ಷಯ ಶ್ರೀನಿವಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ವರದಿ ವರ್ಷದಲ್ಲಿ ಸಂಘವು ಪ್ರಸ್ತುತ ಲಾಭಾಂಶದಲ್ಲಿದ್ದು.ಪ್ರಸ್ತುತ ಸಾಲಿನಲ್ಲಿ ಸಂಘವು 7 ಲಕ್ಷ ರೂಪಾಯಿಗೂ ಅಧಿಕ ಲಾಭ ಗಳಿಸಿದೆ.ಸಂಘದ ಸದಸ್ಯರಿಗೆ ಶೇಕಡ 10% ಡಿವಿಡೆಂಡ್ ಘೋಷಣೆ ಮಾಡಿದ್ದು ಆಡಿಟ್ ವರ್ಗಿಕರಣದಲ್ಲಿ ’ಬಿ’ ಗ್ರೇಡ್ ಪಡೆದಿರುತ್ತದೆ ಹಾಗೂ ಕೇಂದ್ರ ಪುರಸ್ಕ್ರತ ಉಳಿತಾಯ ಯೋಜನೆ ಬಗ್ಗೆ ಸದಸ್ಯರಿಗೆ ಮಾಹಿತಿ ನೀಡಲಾಯಿತು.
ಈ ಸಂದರ್ಭದಲ್ಲಿ 2025-26ನೇ ಸಾಲಿನ ಎಸ್.ಎಸ್.ಎಲ್.ಸಿ,ಪಿ.ಯು.ಸಿ ಹಾಗೂ ಪದವಿ ವಿಭಾಗದಲ್ಲಿ ಅತ್ಯಧಿಕ ಅಂಕ ಪಡೆದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರಾದ ಬಾಬು ಮೊಗವೀರ,ನಿರ್ದೇಶಕರಾದ ದತ್ತಾತ್ರೇಯ ಮೊಗವೀರ,ತುಳಸಿದಾಸ್ ಮೊಗೇರ್,ಮೋಹನ ಮೊಗವೀರ,ನಾರಾಯಣ ಮೊಗವೀರ, ವೆಂಕಟೇಶ ಮೊಗವೀರ,ಸಂಜೀವ ಮೊಗವೀರ,ದೀಪಾ ಮೊಗವೀರ ,ಅಶ್ವಿನಿ ಮೊಗವೀರ ಉಪಸ್ಥಿತರಿದ್ದರು.




ಈ ಸಂದರ್ಭದಲ್ಲಿ ಕಳೆದ 15 ವರ್ಷಗಳಿಂದ ಸಂಘದಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಶಿವಾನಂದ ಮೊಗೇರ್ ರವರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಮೊಗೇರ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.ಸಿಬ್ಬಂದಿ ರೇಷ್ಮಾ ಮೊಗೇರ್ ವಂದಿಸಿದರು.
ವರದಿ/ಚಿತ್ರ: ಗಿರಿ ಶಿರೂರು