ಬೈಂದೂರು: ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಪ್ ಇದರ ವತಿಯಿಂದ ಜಾಗತಿಕ ಕುಂದಗನ್ನಡಿಗರನ್ನು ಒಗ್ಗೂಡಿಸಿ ಅಂರ್ತಜಾಲದ ವರ್ಚುವಲ್ ಮೂಲಕ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯನ್ನು ಆಚರಿಸಲಾಯಿತು.

ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಪ್ ಇದರ ಅಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಾಗಿಲು ಕಾರ್ಯಕ್ರಮ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಕುಂದಾಪ್ರ ಕನ್ನಡ ಅಧ್ಯಯನ ಪೀಠದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ಮಾತನಾಡಿ ಕುಂದಾಪ್ರ ಕನ್ನಡ ಉಳಿಸಿ ಬೆಳಸಲು ಅಧ್ಯಯನ ಪೀಠದ ಮೂಲಕ ಸರಕಾರದ ಸ್ಪಂಧನೆ ದೊರೆತಿದೆ.ಬಾಷೆಯ ಉಳಿವಿಗಾಗಿ ಸದಾ ಒಗ್ಗೂಡಿಸುವ ಮನೋಭಾವನೆ ಮೂಲಕ ಒಂದಾಗೋಣ ಎಂದರು.

ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಮಾತನಾಡಿ ಬೈಂದೂರು ಅಭಿವೃದ್ದಿ ಮತ್ತು ಕುಂದಾಪ್ರ ಕನ್ನಡದ ಬೆಳವಣಿಗೆಯಲ್ಲಿ ಸದಾ ಒಮ್ಮತದ ಹೋರಾಟವಿದೆ.ಎಲ್ಲವನ್ನು ಮೀರಿ ಎತ್ತರಕ್ಕೆ ಬೆಳೆಯುವ ಶಕ್ತಿ ಕುಂದಾಪ್ರ ಕನ್ನಡ ಭಾಷೆಯಾಗಿದೆ.ಈಗಾಗಲೇ ನೂತನ ವಿಮಾನ ನಿಲ್ದಾಣ ಸೇರಿದಂತೆ ಹಲವು ಯೋಜನೆಗಳ ಸಾಕಾರದ ಪ್ರಗತಿ ನಡೆಯುತ್ತಿದೆ ಎಂದರು.

ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಪ್ ಇದರ ಸ್ಥಾಪಕಾಧ್ಯಕ್ಷ ಸಾಧನ್‌ದಾಸ್ ಮಾತನಾಡಿ ಸಂಸ್ಥೆ ವಿದೇಶದಲ್ಲಿ ನೆಲೆಸಿರುವ ಕುಂದಗನ್ನಡಿಗರು ಧ್ವನಿಯಾಗಿರುವ ಜೊತೆಗೆ ಜಾಗತಿಕ ಮಟ್ಟದಲ್ಲಿ ಕುಂದಗನ್ನಡಿಗರನ್ನು ಒಗ್ಗೂಡಿಸಿ ಪ್ರತಿ ವರ್ಷ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ ಎಂದರು.

ಕಾರ್ಯಕ್ರಮದಲ್ಲಿ ಯು.ಕೆ ಯಿಂದ ಹಿರಿಯ ವೈದ್ಯ ಅನಂತರಾಮ ಶೆಟ್ಟಿ,ಕುಂದಾಪ್ರ ಕನ್ನಡ ಬಳಗದ ಪೋಷಕ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ,ಉಪಾಧ್ಯಕ್ಷ ಸುಜಿತ್ ಶೆಟ್ಟಿ,ಮಂಜುನಾಥ ದೇವಾಡಿಗ,ಸತೀಶ ಹಂಗಳೂರು,ಚಂದ್ರಶೇಖರ ಕೋಡಿ,ನಿತ್ಯಾನಂದ,ರಾಘವೇಂದ್ರ ಕಂಬ್ಳು,ಓಮನ್ ದೇಶದಿಂದ ರಮಾನಂದ ಪ್ರಭು,ಕುವೈಟ್‌ನಿಂದ ಸುರೇಶ ನೇರಂಬಳ್ಳಿ,ಸೌದಿ ಅರೇಬಿಯಾದಿಂದ ಸಂತೋಷ ಶೆಟ್ಟಿ,ಮೋಶಿನ್ ಬೈಂದೂರು,ಬೆಹರಿನ್ ದೇಶದಿಂದ ಪ್ರದೀಪ ಶೆಟ್ಟಿ,ಕಮಲಾಕ್ಷ ಅಮೀನ್,ಶೀನ ದೇವಾಡಿಗ ತ್ರಾಸಿ,ಪ್ರಕಾಶ ಕೋಣಿ,ವಾಸುದೇವ ದೇವಾಡಿಗ,ಅರುಣ್ ಕುಮಾರ್ ಶಿರೂರು,ಸುನೀಲ್ ಬೈಂದೂರು,ರಂಜಿತ್ ಶಿರಿಯಾರ್ ಮುಂತಾದವರು ಭಾಗವಹಿಸಿದ್ದರು.

ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಪ್ ಸ್ಥಾಪಕಾಧ್ಯಕ್ಷ ಸಾಧನ್‌ದಾಸ್ ಸ್ವಾಗತಿಸಿದರು.ವಿಘ್ನೇಶ ಕುಂದಾಪುರ ಕಾರ್ಯಕ್ರಮ ನಿರೂಪಿಸಿದರು.ಸುಧಾಕರ ಪೂಜಾರಿ ವಂದಿಸಿದರು.

News/Giri Shiruru

 

Leave a Reply

Your email address will not be published. Required fields are marked *

eleven + eight =