Month: January 2025

ಕರಾವಳಿ ಸೋಡಿಬೆಟ್ಟು ಪ್ರಿಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ ಉದ್ಘಾಟನೆ

ಶಿರೂರು:  ಕೋಸ್ಟಲ್ ಪ್ರೆಂಡ್ಸ್ ಕಟ್ಟೆಗದ್ದೆ ಕರಾವಳಿ ಶಿರೂರು ಇವರ ಆಶ್ರಯದಲ್ಲಿ 30 ಗಜಗಳ ಕ್ರಿಕೆಟ್ ಪಂದ್ಯಾಟ ಸೋಡಿಬೆಟ್ಟು ಮೈದಾನ ಕರಾವಳಿಯಲ್ಲಿ ನಡೆಯಿತು. ತಾ.ಪಂ ಮಾಜಿ ಸದಸ್ಯ ಪುಷ್ಪರಾಜ ಶೆಟ್ಟಿ ಕ್ರಿಕೆಟ್ ಪಂದ್ಯಾಟವನ್ನು ಉದ್ಘಾಟಸಿದರು.ಈ ಸಂದರ್ಭದಲ್ಲಿ ಕಿಶೋರ್ ಪೂಜಾರಿ,ನಾಗೇಶ್ ಮೊಗವೀರ,ಪ್ರವೀಣ್ ಭಂಡಾರಿ,ಭಾಸ್ಕರ ಭಂಡಾರಿ,ಗಣಪತಿ…

ಶಿರೂರು: ಗ್ರಹ ಆರೋಗ್ಯ ಮಾಹಿತಿ ಕಾರ್ಯಕ್ರಮ

ಶಿರೂರು: ಉಡುಪಿ ಜಿ.ಪಂ,ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಶಿರೂರು ಇದರ ವತಿಯಿಂದ 100 ದಿನ ಕ್ಷಯ ರೋಗ ಪತ್ತೆ ಆಂದೋಲನ ಮತ್ತು ಗ್ರಹ ಆರೋಗ್ಯ ಮಾಹಿತಿ ಕಾರ್ಯಕ್ರಮ ಪ್ರಾ.ಆ.ಕೇಂದ್ರ ಶಿರೂರಿನಲ್ಲಿ ನಡೆಯಿತು. ದಾನಿಗಳಾದ ಅರುಣ್…

ಬೈಂದೂರು ಲಾವಣ್ಯ ಸಂಸ್ಥೆಯು ಅಧ್ಯಕ್ಷರಾಗಿ ನರಸಿಂಹ ಬಿ. ನಾಯಕ್ ಪುನರಾಯ್ಕೆ

ಬೈಂದೂರು: ಲಾವಣ್ಯ ಬೈಂದೂರು ಇದರ 2025-27 ನೇ ಸಾಲಿನ ನೂತನ ಅಧ್ಯಕ್ಷರಾಗಿ ನರಸಿಂಹ ಬಿ. ನಾಯಕ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಎಚ್.ವಿಶ್ವನಾಥ ಆಚಾರ್ಯ ಪುನರಾಯ್ಕೆಯಾಗಿದ್ದಾರೆ. ಶನಿವಾರ ಸಂಜೆ ಲಾವಣ್ಯ ರಂಗಮನೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಗೌರವಾಧ್ಯಕ್ಷರಾಗಿ…

ಯುವಶಕ್ತಿ ಕರಾವಳಿ ಗೌರವ ಸಮರ್ಪಣೆ ಕಾರ್ಯಕ್ರಮ

ಶಿರೂರು: ಯುವಶಕ್ತಿ (ರಿ.) ಕರಾವಳಿ,ಯುವಶಕ್ತಿ ಉತ್ಸವ ಸಮಿತಿ ಕರಾವಳಿ ಶಿರೂರು,ನವೋದಯ ಮತ್ತು ಧ.ಗ್ರಾ.ಯೋಜನೆ, ಸ್ತ್ರಿಶಕ್ತಿ ಸ್ವ-ಸಹಾಯ ಸಂಘ ಹಾಗೂ ಸಮಸ್ತ ಕರಾವಳಿ ಗ್ರಾಮಸ್ಥರ ಸಹಯೋಗದಲ್ಲಿ ಗೌರವ ಸಮರ್ಪಣೆ ಕಾರ್ಯಕ್ರಮ ಯುವಶಕ್ತಿ ಸಭಾ ವೇದಿಕೆ ಕರಾವಳಿಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಪ್ರತಿಷ್ಠಿತ ಬೈಂದೂರು…

ಇಂದು ಕರಾವಳಿ ಯುವಶಕ್ತಿ ಸಭಾ ವೇದಿಕೆಯಲ್ಲಿ ಗೌರವ ಸಮರ್ಪಣೆ ಕಾರ್ಯಕ್ರಮ

ಶಿರೂರು: ಯುವಶಕ್ತಿ (ರಿ.) ಕರಾವಳಿ ಶಿರೂರು, ಯುವಶಕ್ತಿ ಉತ್ಸವ ಸಮಿತಿ ಕರಾವಳಿ ಶಿರೂರು,ನವೋದಯ ಮತ್ತು ಸ್ತಿಶಕ್ತಿ ಸ್ವ-ಸಹಾಯ ಸಂಘ ಹಾಗೂ ಸಮಸ್ತ ಕರಾವಳಿ ಗ್ರಾಮಸ್ಥರ ಸಹಯೋಗದಲ್ಲಿ ಪ್ರತಿಷ್ಠಿತ ಬೈಂದೂರು ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕರಾಗಿ ಆಯ್ಕೆಯಾದ ಚಿಕ್ಕು ಪೂಜಾರಿ ಹಾಗೂ…

ಬೈಂದೂರು: ವತ್ತಿನಕಟ್ಟೆ ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿ ವಾರ್ಷಿಕ ಹಾಲುಹಬ್ಬಕ್ಕೆ ಚಾಲನೆ

ಬೈಂದೂರು: ವತ್ತಿನಕಟ್ಟೆ ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನದಲ್ಲಿ ಮಕರ ಸಂಕ್ರಮಣದ ಪರ್ವಕಾಲದ ವಾರ್ಷಿಕ ಹಾಲುಹಬ್ಬಕ್ಕೆ ಚಾಲನೆ ನೀಡಲಾಯಿತು. ದೇವಳದ ಪ್ರಧಾನ ಅರ್ಚಕ ಬಿ. ಕೃಷ್ಣಮೂರ್ತಿ ನಾವಡ ದೀಪ ಬೆಳಗಿಸಿ ಹಾಲು ಹಬ್ಬಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಶ್ರೀ ಮಹಾಸತಿ ಅಮ್ಮನವರ…

ಜೆಸಿಐ ಶಿರೂರು ಇದರ ನೂತನ ಅಧ್ಯಕ್ಷರಾಗಿ ಜಯಂತ ಪೂಜಾರಿ ಹಾಗೂ ಕಾರ್ಯದರ್ಶಿಯಾಗಿ ವಿನೋದ ಮೇಸ್ತ ಆಯ್ಕೆ

ಶಿರೂರು: ಜೆಸಿಐ ಶಿರೂರು ಘಟಕ ಇದರ ೨೦೨೫ ನೇ ಸಾಲಿನ ನೂತನ ಅಧ್ಯಕ್ಷರಾಗಿ ಜಯಂತ ಪೂಜಾರಿ ಹಾಗೂ ಕಾರ್ಯದರ್ಶಿಯಾಗಿ ವಿನೋದ ಮೇಸ್ತ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.  

ಶಿರೂರು ದಂತ ಚಿಕಿತ್ಸೆ ಮತ್ತು ಆರೋಗ್ಯ ತಪಾಸಣಾ ಶಿಬಿರ ಉದ್ಘಾಟನೆ,ಆರೋಗ್ಯದ ಬಗ್ಗೆ ಕಾಳಜಿ ಅತ್ಯಗತ್ಯ: ಡಾ.ನವೀನ್

ಶಿರೂರು: ನಿಟ್ಟೆ ಕೆ.ಎಸ್.ಹೆಗ್ಡೆ ಮತ್ತು ಎ.ಬಿ ಶೆಟ್ಟಿ ಸಮೂಹ ಸಂಸ್ಥೆಗಳ ಸಹಯೋಗದಲ್ಲಿ ದಿ.ನಾರಾಯಣ ಬಿಲ್ಲವ ಹಾಗೂ ದಿ.ಜಾನಕಿ ಬಿಲ್ಲವ ಇವರ ಸವಿನೆನಪಿಗಾಗಿ ದಂತ ಚಿಕಿತ್ಸೆ ಮತ್ತು ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮ ಪಿ.ಎಂ.ಶ್ರೀ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಶಿರೂರಿನಲ್ಲಿ…

ಫೆ.01 ರಂದು ಶಿರೂರು ಮುದ್ರಮಕ್ಕಿ ಡಾನ್ಸ್ ಕಾಂಪಿಟೇಶನ್ -2025

ಶಿರೂರು: ಶ್ರೀ ಮಹಾಸತಿ ಯುವಕ ಸಂಘ(ರಿ.) ಮುದ್ರಮಕ್ಕಿ ಶಿರೂರು ಇದರ 25ನೇ ವಾರ್ಷಿಕೋತ್ಸವದ ಪ್ರಯುಕ್ತ ಮುದ್ರಮಕ್ಕಿ ಡಾನ್ಸ್ ಕಾಂಪಿಟೇಶನ್ -2025 ಫೆ.01 ರಂದು ರಾತ್ರಿ 9 ಗಂಟೆಗೆ ಮುದ್ರಮಕ್ಕಿ ದೇವಸ್ಥಾನದ ಆವರಣದಲ್ಲಿ ನಡೆಯಲಿದೆ.ಜ.25 ರೊಳಗೆ ತಂಡದ ಹೆಸರನ್ನು ನೊಂದಾಯಿಸಲು ಕೊನೆಯ ದಿನಾಂಕವಾಗಿರುತ್ತದೆ…

ಸ.ಹಿ.ಪ್ರಾ.ಶಾಲೆ ಮೈಕಳ ವಸ್ರೆ ಶಾಲಾ ವಾರ್ಷಿಕೋತ್ಸವ ಸಮಾರಂಭ,ತಂತ್ರಜ್ಞಾನ ಹಾಗೂ ಅಭಿವೃದ್ದಿಯ ಧಾವಂತದಲ್ಲಿ ಓದು ಹಾಗೂ ಮನೋಲ್ಲಾಸದ ಆಸಕ್ತಿ ಕಡಿಮೆಯಾಗಬಾರದು;ಕೆ.ಬಾಬು ಶೆಟ್ಟಿ

ಬೈಂದೂರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೈಕಳ (ವಸ್ರೆ) ಇದರ 2024-25ನೇ ಸಾಲಿನ  ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಿತು. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ  ಕೆ.ಬಾಬು ಶೆಟ್ಟಿ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಕನ್ನಡ ಮಾಧ್ಯಮ…