ಬೈಂದೂರು: ವತ್ತಿನಕಟ್ಟೆ ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನದಲ್ಲಿ ಮಕರ ಸಂಕ್ರಮಣದ ಪರ್ವಕಾಲದ ವಾರ್ಷಿಕ ಹಾಲುಹಬ್ಬಕ್ಕೆ ಚಾಲನೆ ನೀಡಲಾಯಿತು.
ದೇವಳದ ಪ್ರಧಾನ ಅರ್ಚಕ ಬಿ. ಕೃಷ್ಣಮೂರ್ತಿ ನಾವಡ ದೀಪ ಬೆಳಗಿಸಿ ಹಾಲು ಹಬ್ಬಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಶ್ರೀ ಮಹಾಸತಿ ಅಮ್ಮನವರ ಸೇವಾ ಸಮಿತಿ ಅಧ್ಯಕ್ಷ ನಾಕಟ್ಟೆ ನಾಗರಾಜ ಶೆಟ್ಟಿ, ಕಾರ್ಯದರ್ಶಿ ಶಿವರಾಮ ಪೂಜಾರಿ ಯಡ್ತರೆ,ನಾಗರಾಜ ಗಾಣಿಗ,ಸದಸ್ಯರಾದ ಶಂಕರ ಮೊಗವೀರ, ಸತ್ಯಪ್ರಸನ್ನ, ಅಣ್ಣಪ್ಪ ಪೂಜಾರಿ (ಪಾತ್ರಿ),ಮಂಜುನಾಥ ಬಿಲ್ಲವ,ರವೀಂದ್ರ ಶ್ಯಾನುಭಾಗ್ ಹಾಜರಿದ್ದರು.ರಾತ್ರಿ ವಿಶೇಷ ಗೆಂಡಸೇವೆ ಸಡಗರದಿಂದ ನಡೆಯಲಿದೆ.3
ಬುಧವಾರ ಬೆಳಿಗ್ಗೆ ಶ್ರೀದೇವರಿಗೆ ವಿಶೇಷ ಪೂಜೆ, ಚಂಡಿಕಾಹೋಮ ಹರಕೆ ಕಾಣಿಕೆ ಸಮರ್ಪಣೆ, ಮಧ್ಯಾಹ್ನ 12ರಿಂದ ತುಲಾಭಾರ ಸೇವೆ, ದರ್ಶನ ಸೇವೆ ನಂತರ ಮಹಾಅನ್ನಸಂತರ್ಪಣೆ ನಡೆಯಲಿದೆ.