ಬೈಂದೂರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೈಕಳ (ವಸ್ರೆ) ಇದರ 2024-25ನೇ ಸಾಲಿನ  ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಿತು.

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ  ಕೆ.ಬಾಬು ಶೆಟ್ಟಿ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಪರಿಪೂರ್ಣವಾದ ಶಿಕ್ಷಣ ದೊರೆಯುತ್ತದೆ. ವಿದ್ಯಾರ್ಥಿಗಳು ಎಳವೆಯಲ್ಲಿ ಕಲೆ,ಸಾಹಿತ್ಯ, ಸಂಸ್ಕ್ರತಿ ಹಾಗೂ ನಮ್ಮ ಸುತ್ತಮುತ್ತಲಿನ ಬದುಕಿನ ಬಗೆಗೆ ಆಸಕ್ತಿ ಮೂಡಿಸಿಕೊಳ್ಳಬೇಕು.ತಂತ್ರಜ್ಞಾನ ಹಾಗೂ ಅಭಿವೃದ್ದಿಯ ಧಾವಂತದಲ್ಲಿ ಓದು ಹಾಗೂ ಮನೋಲ್ಲಾಸದ ಆಸಕ್ತಿ ಕಡಿಮೆಯಾಗಬಾರದು ಎಂದರು.

ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷ ನಾಗೇಶ್ ಪೂಜಾರಿ ಕಿರುಕಿ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಬೈಂದೂರು ಸರ್ಕಾರಿ ನೌಕರದ ಸಂಘದ ಅಧ್ಯಕ್ಷ ಬೈಂದೂರ ಶೇಖರ್ ಪೂಜಾರಿ,ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗೌರವಾಧ್ಯಕ್ಷ ವಿಶ್ವನಾಥ ಪೂಜಾರಿ, ಬಿ ಆರ್ ಪಿ ಮಂಜುನಾಥ ನಾಯಕ್,ಪ್ರಭಾರ ಸಿ.ಆರ್.ಪಿ ಚಂದ್ರ ನಾರಾಯಣ ಬಿಲ್ಲವ,ಶಿಕ್ಷಕ ಗಣಪತಿ ಹೋಬಳಿದಾರ್,ಶ್ರೀ ಶಾರದಾ ಕಾಲೇಜು ಬಸ್ರೂರು ಉಪನ್ಯಾಸಕಿ ಸರಸ್ವತಿ ಕೊಠಾರಿ ಬಡ್ಡುಮಕ್ಕಿ,ಶಿರೂರು ಶಾಖೆಯ ಸಾಗರ್ ಬ್ಯಾಂಕ್ ಪ್ರಬಂಧಕ ನಾಗರಾಜ ಪೂಜಾರಿ ತಲಕೂಡು, ಎಸ್ ಡಿ ಎಂ ಸಿ  ಉಪಾಧ್ಯಕ್ಷೆ ನೇತ್ರಾವತಿ ಕೊಠಾರಿ,ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆ ಮೂಕಾಂಬು,ವಿದ್ಯಾರ್ಥಿ ನಾಯಕಿ ಐಶ್ವರ್ಯ,ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಿತಿನ್ ಕುಮಾರ್ ಉಪಸ್ಥಿತರಿದ್ದರು.

ಉಪನ್ಯಾಸಕ ಉದಯ ನಾಯ್ಕ ಸ್ವಸ್ತಿವಾಚನಗೈದರು. ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಶ್ರೀಕಾಂತ್ ಕಾಮತ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಸಹ ಶಿಕ್ಷಕ ಉದಯ ಆಚಾರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

 

Leave a Reply

Your email address will not be published. Required fields are marked *

3 × five =