ಶಿರೂರು: ನಿಟ್ಟೆ ಕೆ.ಎಸ್.ಹೆಗ್ಡೆ ಮತ್ತು ಎ.ಬಿ ಶೆಟ್ಟಿ ಸಮೂಹ ಸಂಸ್ಥೆಗಳ ಸಹಯೋಗದಲ್ಲಿ ದಿ.ನಾರಾಯಣ ಬಿಲ್ಲವ ಹಾಗೂ ದಿ.ಜಾನಕಿ ಬಿಲ್ಲವ ಇವರ ಸವಿನೆನಪಿಗಾಗಿ ದಂತ ಚಿಕಿತ್ಸೆ ಮತ್ತು ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮ ಪಿ.ಎಂ.ಶ್ರೀ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಶಿರೂರಿನಲ್ಲಿ ನಡೆಯಿತು.
ಮಕ್ಕಳ ರೋಗ ತಜ್ಞ ಡಾ.ನವೀನ್ ಸಾಗರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಆರೋಗ್ಯ ಕಾಳಜಿ ಪ್ರತಿಯೊಬ್ಬರಿಗೂ ಅತ್ಯಗತ್ಯ.ಆರೋಗ್ಯ ಶಿಬಿರದ ಮೂಲಕ ಸಮಾಜದ ಅನೇಕ ಆರೋಗ್ಯ ಸಮಸ್ಯೆ ಇರುವ ವ್ಯಕ್ತಿಗಳಿಗೆ ನುರಿತ ವೈದ್ಯರಿಂದ ಮಾಹಿತಿ ಹಾಗೂ ಚಿಕಿತ್ಸೆ ನೀಡಲು ಸಹಕಾರಿಯಾಗುತ್ತದೆ.ನಿರಂತರ ಆರೋಗ್ಯ ಶಿಬಿರಗಳ ಆಯೋಜನೆಯಿಂದ ಸುಸ್ಥಿರ ಸಮಾಜ ನಿರ್ಮಾಣ ಸಾಧ್ಯ ಎಂದರು.
ಮುಖ್ಯ ಅತಿಥಿಗಳಾಗಿ ಡಾ.ಜೈಕರ್ ಸೊರಬ,ಡಾ.ಮೂಕಾಂಬಿಕಾ,ಧನಲಕ್ಷ್ಮೀ,ಡಾ.ಶಿಲ್ಪಾ,ಶಾಲಾ ಮುಖ್ಯ ಶಿಕ್ಷಕ ಶಂಕರ ಶಿರೂರು,ಶಿರೂರು ರೈತ ಸಂಘದ ಅಧ್ಯಕ್ಷ ರವೀಂದ್ರ ಶೆಟ್ಟಿ ಹೊಸ್ಮನೆ,ಯಕ್ಷ ಸಂಪದ ಕಲಾ ಬಳಗದ ಅಧ್ಯಕ್ಷ ಚಿಕ್ಕು ಪೂಜಾರಿ,ಧ.ಗ್ರಾ.ಯೋ.ಭಜನಾ ಪರಿಷತ್ ಅಧ್ಯಕ್ಷ ಕೃಷ್ಣ ಪೂಜಾರಿ,ನಿವೃತ್ತ ಮುಖ್ಯ ಶಿಕ್ಷಕ ಮಾಧವ ಬಿಲ್ಲವ,ಸಾಂತೋಡಿ ಸ್ವಾಮಿ ವಿವೇಕಾನಂದ ಯುವ ವೇದಿಕೆ ಅಧ್ಯಕ್ಷ ಶಾಂತಾರಾಮ ಪೂಜಾರಿ,ಶಂಕರ ಬಿಲ್ಲವ,ತಿಮ್ಮಪ್ಪ ಬಿಲ್ಲವ,ವೆಂಕಟೇಶ ಬಿಲ್ಲವ,ನಿಟ್ಟೆ ಕೆ.ಎಸ್ ಹೆಗ್ಡೆ ಸಂಸ್ಥೆಯ ಡಾ.ಅಕ್ಷಯ್ ಉಪಸ್ಥಿತರಿದ್ದರು.




ಸಾಧನದಾಸ್ ಶಿರೂರು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಪತ್ರಕರ್ತ ಅರುಣ್ ಕುಮಾರ್ ಶಿರೂರು ಕಾರ್ಯಕ್ರಮ ನಿರೂಪಿಸಿದರು.ಶಿಕ್ಷಕ ಸಿ.ಎನ್.ಬಿಲ್ಲವ ವಂದಿಸಿದರು.
News/pic: Giri Shiruru