ಶಿರೂರು: ಉಡುಪಿ ಜಿ.ಪಂ,ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಶಿರೂರು ಇದರ ವತಿಯಿಂದ 100 ದಿನ ಕ್ಷಯ ರೋಗ ಪತ್ತೆ ಆಂದೋಲನ ಮತ್ತು ಗ್ರಹ ಆರೋಗ್ಯ ಮಾಹಿತಿ ಕಾರ್ಯಕ್ರಮ ಪ್ರಾ.ಆ.ಕೇಂದ್ರ ಶಿರೂರಿನಲ್ಲಿ ನಡೆಯಿತು.
ದಾನಿಗಳಾದ ಅರುಣ್ ಕುಮಾರ್ ಶಿರೂರು ರವರು ಕೊಡ ಮಾಡಿದ 2 ಪುಡ್ ಕಿಟ್‌ಗಳನ್ನು ರೋಗಿಗಳಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ವೈದ್ಯಾಧಿಕಾರಿ ಡಾ.ಮಹಮ್ಮದ್ ಸುಹೇಲ್,ಆರೋಗ್ಯ ಸುರಕ್ಷಾಧಿಕಾರಿ ಗೀತಾ ಪಿ,ವೀಣಾ,ಡಾ.ಅಶ್ವಿನಿ,ಪತ್ರಕರ್ತ ಗಿರೀಶ್ ಶಿರೂರು,ಆಶಾ ಕಾರ್ಯಕರ್ತೆ ಸರೋಜಾ ಮೇಸ್ತ,ನಾಗರತ್ನ,ಹೇಮಲತಾ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು. ಆರೋಗ್ಯ ಇಲಾಖೆಯ ನಾಗರಾಜ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.