ಶಿರೂರು: ಯುವಶಕ್ತಿ (ರಿ.) ಕರಾವಳಿ,ಯುವಶಕ್ತಿ ಉತ್ಸವ ಸಮಿತಿ ಕರಾವಳಿ ಶಿರೂರು,ನವೋದಯ ಮತ್ತು ಧ.ಗ್ರಾ.ಯೋಜನೆ, ಸ್ತ್ರಿಶಕ್ತಿ ಸ್ವ-ಸಹಾಯ ಸಂಘ ಹಾಗೂ ಸಮಸ್ತ ಕರಾವಳಿ ಗ್ರಾಮಸ್ಥರ ಸಹಯೋಗದಲ್ಲಿ ಗೌರವ ಸಮರ್ಪಣೆ ಕಾರ್ಯಕ್ರಮ ಯುವಶಕ್ತಿ ಸಭಾ ವೇದಿಕೆ ಕರಾವಳಿಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಪ್ರತಿಷ್ಠಿತ ಬೈಂದೂರು ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕರಾಗಿ ಆಯ್ಕೆಯಾದ ಚಿಕ್ಕು ಪೂಜಾರಿ ಹಾಗೂ ಸಹಕಾರಿ ಕ್ಷೇತ್ರಕ್ಕೆ ಪ್ರಪ್ರಥಮ ಬಾರಿಗೆ ನಿರ್ದೇಶಕರಾಗಿ ಆಯ್ಕೆಯಾದ ಯುವಶಕ್ತಿ ನಿಕಟಪೂರ್ವ ಅಧ್ಯಕ್ಷ ಅರುಣ್ ಕುಮಾರ್ ಶಿರೂರು ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಸಕ್ರೀಯ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಮಾಧವ ಬಿಲ್ಲವ ಕಾಳನಮನೆ ಯವರನ್ನು ಸಮ್ಮಾನಿಸಲಾಯಿತು.
ಯುವಶಕ್ತಿ ಉತ್ಸವ ಸಮಿತಿ ಅಧ್ಯಕ್ಷ ಚಂದ್ರ ಮೊಗೇರ್ ಮಾತನಾಡಿ ಗ್ರಾಮೀಣ ಭಾಗದಲ್ಲಿ ಬೆಳೆದು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ನಮ್ಮೂರ ಸಾಧಕರು ನಮ್ಮ ಹೆಮ್ಮೆ. ಯುವಶಕ್ತಿ ಶ್ರೀ ಗಣೇಶೋತ್ಸವ ಸಮಿತಿಯ ಬೆನ್ನೆಲುಬಾಗಿ ನಿಂತು.ಕರಾವಳಿಯ ಅಭಿವೃದ್ದಿಗೆ ನಿರಂತರ ಶ್ರಮಿಸಿದ ಯುವಶಕ್ತಿ ಉತ್ಸವ ಸಮಿತಿಯ ಚಿಕ್ಕು ಪೂಜಾರಿ,ಮಾಧವ ಬಿಲ್ಲವ ಹಾಗೂ ಅರುಣ್ ಕುಮಾರ್ ಶಿರೂರು ರವರ ಸಾಧನೆ ಶ್ಲಾಘನೀಯವಾಗಿದೆ.ಯುವಶಕ್ತಿ ಗಣೇಶೋತ್ಸವ ಸಮಿತಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದರು.
ಸಮ್ಮಾನಿತರ ಪರವಾಗಿ ಮಾತನಾಡಿದ ಬೈ.ವ್ಯ.ಸೇ.ಸಂಘದ ನಿರ್ದೇಶಕ ಚಿಕ್ಕು ಪೂಜಾರಿ ಊರಿನ ಸಹಕಾರವಿದ್ದಾಗ ಸಾಮಾಜಿಕ ಕ್ಷೇತ್ರದಲ್ಲಿ ಇನ್ನಷ್ಟು ತೊಡಗಿಸಿಕೊಳ್ಳಲು ಸಾಧ್ಯವಾಗುತ್ತದೆ.ಯುವಶಕ್ತಿ ಗಣೇಶೋತ್ಸವ ಸಮಿತಿ ಸಮಾಜದ ಎಲ್ಲಾ ಕ್ಷೇತ್ರದ ಸಾಧಕರನ್ನು ನಿರಂತರವಾಗಿ ಗುರುತಿಸಿ ಗೌರವಿಸುತ್ತಾ ಬಂದಿದೆ.ಗಣೇಶೋತ್ಸವದ ಮೂಲಕ ಮಾದರಿ ಯುವ ಸಂಘಟನೆಯಾಗಿರುವುದು ನಮ್ಮೂರ ಹೆಮ್ಮೆ ಎಂದರು.

ಯುವಶಕ್ತಿ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಯಶವಂತ ಬಿಲ್ಲವ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಯುವಶಕ್ತಿ ಮಾಜಿ ಗೌರವಾಧ್ಯಕ್ಷ ವಾಸು ಬಿಲ್ಲವ ತೆಂಕಮನೆ,ನಿವೃತ್ತ ಶಿಕ್ಷಕ ಹೆರಿಯಣ್ಣ ಮಾಸ್ಟರ್,ನಾಯ್ಕನಕಟ್ಟೆ ಶಾಲಾ ಮುಖ್ಯ ಶಿಕ್ಷಕ ಮಹಾದೇವ ಬಿಲ್ಲವ,ತಿಮ್ಮಪ್ಪ ಬಿಲ್ಲವ ದೇವರಹಿತ್ಲು,ಉದ್ಯಮಿ ಚಿಕ್ಕಯ್ಯ ಬಿಲ್ಲವ ತೆಂಕಮನೆ,ಧ.ಗ್ರಾ.ಯೋಜನೆಯ ವಿನಾಯಕ,ಚೆಣ್ಣಮ್ಮ ಕರಾವಳಿ ಉಪಸ್ಥಿತರಿದ್ದರು.

ಬೈಂದೂರು ವಲಯ ಭಜನಾ ಪರಿಷತ್ ಅಧ್ಯಕ್ಷ ಕೃಷ್ಣ ಬಿ.ಪಿ ಪ್ರಾರ್ಥಿಸಿದರು.ನಿವೃತ್ತ ಶಿಕ್ಷಕ ಗೋವಿಂದ ಬಿಲ್ಲವ ಸ್ವಾಗತಿಸಿ ಪ್ರಾಸ್ತಾವಿಕ ಮಾತಗಳನ್ನಾಡಿದರು.ಯುವಶಕ್ತಿ ಮಾಜಿ ಕಾರ್ಯದರ್ಶಿ ಮಹೇಶ್ ಮೊಗೇರ್ ಕಾರ್ಯಕ್ರಮ ನಿರೂಪಿಸಿದರು.ಚಂದ್ರಶೇಖರ ಮೇಸ್ತ ವಂದಿಸಿದರು.
ವರದಿ/ಗಿರಿ ಶಿರೂರು
ಚಿತ್ರ: ಸುರೇಶ್ ಮಾಕೋಡಿ