ಶಿರೂರು: ಶ್ರೀ ಮಹಾಸತಿ ಯುವಕ ಸಂಘ(ರಿ.) ಮುದ್ರಮಕ್ಕಿ ಶಿರೂರು ಇದರ 25ನೇ ವಾರ್ಷಿಕೋತ್ಸವದ ಪ್ರಯುಕ್ತ ಮುದ್ರಮಕ್ಕಿ ಡಾನ್ಸ್ ಕಾಂಪಿಟೇಶನ್ -2025 ಫೆ.01 ರಂದು ರಾತ್ರಿ 9 ಗಂಟೆಗೆ ಮುದ್ರಮಕ್ಕಿ ದೇವಸ್ಥಾನದ ಆವರಣದಲ್ಲಿ ನಡೆಯಲಿದೆ.ಜ.25 ರೊಳಗೆ ತಂಡದ ಹೆಸರನ್ನು ನೊಂದಾಯಿಸಲು ಕೊನೆಯ ದಿನಾಂಕವಾಗಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಜ.19 ರಂದು ಕ್ರೀಡೋತ್ಸವ ಕಾರ್ಯಕ್ರಮ: ಶ್ರೀ ಮಹಾಸತಿ ಯುವಕ ಸಂಘ(ರಿ.) ಮುದ್ರಮಕ್ಕಿ ಶಿರೂರು ಇದರ 25ನೇ ವಾರ್ಷಿಕೋತ್ಸವದ ಪ್ರಯುಕ್ತ ಕ್ರೀಡೋತ್ಸವ ಕಾರ್ಯಕ್ರಮ ಜ.19 ರಂದು ಬೆಳಿಗ್ಗೆ 09 ಗಂಟೆಗೆ ಮುದ್ರಮಕ್ಕಿ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ.ಮಕ್ಕಳಿಗೆ,ಮಹಿಳೆಯರಿಗೆ ಹಾಗೂ ಪುರುಷರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಲಿದೆ ಎಂದು ಅಧ್ಯಕ್ಷ ರಾಘವೇಂದ್ರ ಶಿರೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.