ಶಿರೂರು: ಯುವಶಕ್ತಿ (ರಿ.) ಕರಾವಳಿ ಶಿರೂರು, ಯುವಶಕ್ತಿ ಉತ್ಸವ ಸಮಿತಿ ಕರಾವಳಿ ಶಿರೂರು,ನವೋದಯ ಮತ್ತು ಸ್ತಿಶಕ್ತಿ ಸ್ವ-ಸಹಾಯ ಸಂಘ ಹಾಗೂ ಸಮಸ್ತ ಕರಾವಳಿ ಗ್ರಾಮಸ್ಥರ ಸಹಯೋಗದಲ್ಲಿ ಪ್ರತಿಷ್ಠಿತ ಬೈಂದೂರು ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕರಾಗಿ ಆಯ್ಕೆಯಾದ ಚಿಕ್ಕು ಪೂಜಾರಿ ಹಾಗೂ ಸಹಕಾರಿ ಕ್ಷೇತ್ರಕ್ಕೆ ಪ್ರಪ್ರಥಮ ಬಾರಿಗೆ ನಿರ್ದೇಶಕರಾಗಿ ಆಯ್ಕೆಯಾದ ಯುವಶಕ್ತಿ ನಿಕಟಪೂರ್ವ ಅಧ್ಯಕ್ಷ ಅರುಣ್ ಕುಮಾರ್ ಶಿರೂರು ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಸಕ್ರೀಯ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಮಾಧವ ಬಿಲ್ಲವ ಕಾಳನಮನೆ ಯವರಿಗೆ ಗೌರವ ಸಮರ್ಪಣೆ ಕಾರ್ಯಕ್ರಮಇಂದು ಸಂಜೆ 04 ಗಂಟೆಗ ಯುವಶಕ್ತಿ ಸಭಾ ವೇದಿಕೆ ಕರಾವಳಿಯಲ್ಲಿ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.