Author: Giri shiruru

ಬೈಂದೂರು ವತ್ತಿನೆಣೆ ಬಳಿ ಸಿಮೆಂಟ್ ತುಂಬಿದ ಲಾರಿ ಪಲ್ಟಿ ಚಾಲಕ ಅಪಾಯದಿಂದ ಪಾರು

ಬೈಂದೂರು: ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66ರ ಬೈಂದೂರಿನ ವತ್ತಿನೆಣೆ ಬಳಿ ಸಿಮೆಂಟ್ ತುಂಬಿದ ಲಾರಿಯೊಂದು ಪಲ್ಟಿಯಾಗಿ ಚಾಲಕ ಅಪಾಯದಿಂದ ಪಾರಾದ ಘಟನೆ ಗುರುವಾರ ಮದ್ಯಾಹ್ನ ನಡೆದಿದೆ.ಭಟ್ಕಳ ಕಡೆಯಿಂದ ಸಿಮೆಂಟ್ ತುಂಬಿಕೊಂಡು ಕುಂದಾಪುರ ಕಡೆಗೆ ಚಲಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ.ಲಾರಿ ಪಲ್ಟಿಯಾದ…

ಜೆಸಿಐ ಉಪ್ಪುಂದ 2026ನೇ ಸಾಲಿನ ನೂತನ ಅಧ್ಯಕ್ಷರಾಗಿ ರಂಜಿತ್‌ ಉಪ್ಪುಂದ ಹಾಗೂ ನೂತನ ಕಾರ್ಯದರ್ಶಿಯಾಗಿ ಪುರಂದರ್‌ ಉಪ್ಪುಂದ ಆಯ್ಕೆ

ಬೈಂದೂರು: ಜೆಸಿಐ ಭಾರತ ವಲಯ 15ರ ಪ್ರತಿಷ್ಠಿತ ಘಟಕ ಜೆಸಿಐ ಉಪ್ಪುಂದ ಇದರ 2026ನೇ ಸಾಲಿನ ನೂತನ ಅಧ್ಯಕ್ಷರಾಗಿ ರಂಜಿತ್‌ ಉಪ್ಪುಂದ ಹಾಗೂ ನೂತನ ಕಾರ್ಯದರ್ಶಿಯಾಗಿ ಪುರಂದರ್‌ ಉಪ್ಪುಂದ ಇವರು ಪೂರ್ವಾಧ್ಯಕ್ಷರುಗಳ ಸಮ್ಮುಖದಲ್ಲಿ ಆಯ್ಕೆಯಾಗಿದ್ದಾರೆ.ಡಿ.19ರಂದು ಮಾತೃಶ್ರೀ ಸಭಾಭವನ ಉಪ್ಪುಂದದಲ್ಲಿ ನೂತನ ಆಡಳಿತ…

ಬೈಂದೂರು; ಐತಿಹಾಸಿಕ ಪ್ರಸಿದ್ದ ತಗ್ಗರ್ಸೆ ಕಂಬಳೋತ್ಸವ ಸಂಪನ್ನ, ಸಾಂಪ್ರದಾಯಿಕ ಚೌಕಟ್ಟಿನಲ್ಲಿ ನಡೆಯುವ ಬೈಂದೂರು ಭಾಗದ ಅತ್ಯಂತ ದೊಡ್ಡ ಕಂಬಳ ಇದಾಗಿದೆ;ಟಿ.ನಾರಾಯಣ ಹೆಗ್ಡೆ

ಬೈಂದೂರು: ಬೈಂದೂರು ಭಾಗದ ಐತಿಹಾಸಿಕ ಪ್ರಸಿದ್ದ ತಗ್ಗರ್ಸೆ ಕಂಠದಮನೆ ಸಾಂಪ್ರದಾಯಿಕ ಕಂಬಳೋತ್ಸವ  ಬುಧವಾರ ಅತ್ಯಂತ ಯಶಸ್ವಿಯಾಗಿ ನಡೆಯಿತು. ತಗ್ಗರ್ಸೆ ಕಂಠದಮನೆಯ ಟಿ.ನಾರಾಯಣ ಹೆಗ್ಡೆ ಕಂಬಳೋತ್ಸವಕ್ಕೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ಕಳೆದ ಹಲವು ವರ್ಷಗಳಿಂದ ತಗ್ಗರ್ಸೆ ಕಂಬಳೋತ್ಸವ ಸಾರ್ವಜನಿಕರ ಸಹಕಾರದಿಂದ…

ಡಿ.13 ರಂದು ಶಿರೂರಿನಲ್ಲಿ ಜೇಸಿ ಸಪ್ತಾಹದ ಅಂಗವಾಗಿ ಭಾವಯಾನ -2025  ಕಾರ್ಯಕ್ರಮ

ಶಿರೂರು: ಜೆಸಿಐ ಶಿರೂರು ಇದರ ವತಿಯಿಂದ ಜೇಸಿ ಸಪ್ತಾಹದ ಅಂಗವಾಗಿ ಭಾವಯಾನ -2025  ಕಾರ್ಯಕ್ರಮ ಡಿ.13 ರಂದು ಸಂಜೆ 07  ಗಂಟೆಗೆ ಬಪ್ಪನಬೈಲುವಿನಲ್ಲಿ ನಡೆಯಲಿದೆ.ಸಂಜೆ ಸಭಾ ಕಾರ್ಯಕ್ರಮ,ಸಮ್ಮಾನ ಕಾರ್ಯಕ್ರಮ,ಕಮಲಪತ್ರ ಪ್ರಶಸ್ತಿ,ಯುವಜೇಸಿ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.ರಾತ್ರಿ 9 ಗಂಟೆಗೆ ಯಕ್ಷಪಲ್ಲವಿ ಟ್ರಸ್ಟ್ ಯಕ್ಷಗಾನ…

ರೈತರ ನಿರ್ಲಕ್ಷ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳಿಗೆ ಶೋಭೆಯಲ್ಲ,ರೈತರ ಹೋರಾಟಕ್ಕೆ ಬೈಂದೂರಿನ ಜನತೆಯ ಪೂರ್ಣ ಬೆಂಬಲವಿದೆ: ಸುಬ್ರಹ್ಮಣ್ಯ ಬಿಜೂರು

ಬೈಂದೂರು: ರಾಜ್ಯ ಸರಕಾರ ರೈತರ ಬಗ್ಗೆ ವಿಶೇಷ ಕಾಳಜಿ ವಹಿಸುತ್ತದೆ.ರಾಜ್ಯದ ಮುಖ್ಯಮಂತ್ರಿಗಳು ರೈತರ ಪರವಾಗಿದ್ದಾರೆ.ಬೈಂದೂರಿನಲ್ಲಿ ಕಳೆದ 80 ದಿನಗಳಿಂದ ನೂರಾರು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.ಒಂದೆರಡು ದಿನ ಹೋರಾಟ ನಡೆಸುವುದೆ ಕಷ್ಟ ಆದರೆ ಬೈಂದೂರು ರೈತ ಸಂಘ ಮೂರು ತಿಂಗಳಿಂದ ಅನಿಧಿ೯ಷ್ಟಾವಧಿ ಧರಣಿ…

ಅಧಿಕಾರಿಗಳ ವಿಳಂಬಕ್ಕೆ ಹೆಚ್ಚಿದ ರೈತರ ಆಕ್ರೋಶ, ಶುಕ್ರವಾರ ಬೈಂದೂರಿನಲ್ಲಿ ರೈತರ ಬ್ರಹತ್ ಅರೆಬೆತ್ತಲೆ ಪ್ರತಿಭಟನೆ: ದೀಪಕ್ ಕುಮಾರ್ ಶೆಟ್ಟಿ

ಬೈಂದೂರು: ಕಳೆದ 80 ದಿನಗಳಿಂದ ಹೋರಾಟ ನಡೆಸುತ್ತಿದ್ದರು ಸಹ ಅಧಿಕಾರಿಗಳ ನಿರ್ಲಕ್ಷಕ್ಕೆ ಬೈಂದೂರು ಭಾಗದ ಗ್ರಾಮೀಣ ರೈತರ ಆಕ್ರೋಶ ಹೆಚ್ಚಿಸಿದೆ.ಅಧಿಕಾರಿಗಳ ವಿಳಂಬದಿಂದ ರೈತರ ಬೇಡಿಕೆಗೆ ನ್ಯಾಯ ಪಡೆಯಲು ಹಿನ್ನೆಡೆಯಾಗುತ್ತಿದೆ.ಜಿಲ್ಲಾಡಳಿತ ಸೇರಿದಂತೆ ಯಾವುದೇ ಅಧಿಕಾರಿಗಳನ್ನು ರೈತರು ಬೇಟಿಯಾಗಿ ಸ್ಪಷ್ಟತೆ ನೀಡಿಲ್ಲ. ಹೀಗಾಗಿ ರೈತರ…

ಸಾಂಪ್ರದಾಯಿಕ ಭಜನಾ ಸಾಹಿತ್ಯ ಬುತ್ತಿಯನ್ನೊಳಗೊಂಡ ಸಾಂಪ್ರದಾಯಿಕ ಭಜನಾ ಪುಸ್ತಕ ಲೋಕಾರ್ಪಣೆ

ಬೈಂದೂರು: ಭಜನಾ ಯಜ್ಞ ದೀಪ್ತಿ (ಸಾಂಪ್ರದಾಯಿಕ ಭಜನಾ ಸಾಹಿತ್ಯ ಬುತ್ತಿ) ಎನ್ನುವ ವಿಶೇಷ ಸಾಹಿತ್ಯಗಳನ್ನೊಳಗೊಂಡ ಭಜನಾ ಪುಸ್ತಕವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಧರ್ಮಾಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ಭಜನಾ ಕಮ್ಮಟದ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್,ಭಜನಾ ಪರಿಷತ್ತಿನ ರಾಜ್ಯ ಉಪಾಧ್ಯಕ್ಷ…

ಮರವಂತೆ : ಭಾವಸುಧಾ ದೋಣಿಯಾನ ವಿನೂತನ ಕಾರ್ಯಕ್ರಮ

ಮರವಂತೆ : ಕನ್ನಡ ಸಾಹಿತ್ಯ ಪರಿಷತ್ತು ಬೈಂದೂರು ಘಟಕ ಇವರ ಸಹಯೋಗದಲ್ಲಿ ನಾವೆಯಲ್ಲೊಂದು ಕನ್ನಡ ಭಾವ ಸಂವಾದ ‘ಭಾವ ಸುಧಾ’ ದೋಣಿಯಾನ ಕಾರ್ಯಕ್ರಮವು ಮರವಂತೆ ಮಹಾರಾಜ ಸ್ವಾಮಿ ದೇಗುಲದ ಬಳಿಯ ಸೌಪರ್ಣಿಕಾ ನದಿಯಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕವನ ವಾಚನ ಮೂಲಕ…

ಬೈಂದೂರು ರೈತರ ಧರಣಿ 79 ದಿನ, ಬೆಳಗಾಂ ಅಧಿವೇಶನದಲ್ಲಿ ಬೈಂದೂರು ಶಾಸಕರು ಧ್ವನಿ ಎತ್ತಬೇಕೆಂದು ರೈತರ ವಿನಂತಿ

ಬೈಂದೂರು: ಉಡುಪಿ ಜಿಲ್ಲೆಯಲ್ಲಿ ಅತ್ಯಂತ ದೀರ್ಘ ರೈತರ ಹೋರಾಟ ಬೈಂದೂರಿನಲ್ಲಿ ನಡೆಯುತ್ತಿದೆ.ಪಕ್ಷಾತೀತ ಹೋರಾಟದಲ್ಲಿ ಎಲ್ಲಾ ಮುಖಂಡರು,ಜನಪ್ರತಿನಿಧಿಗಳು ಭಾಗವಹಿಸಿ ಬೆಂಬಲ ನೀಡಿದ್ದಾರೆ.ನೂರು ದಿನಗಳಿಂದ ರೈತರು ಹೊಲಗದ್ದೆ, ಕೆಲಸ ಕಾರ್ಯ ಬಿಟ್ಟು ಬೀದಿಯಲ್ಲಿ ಪ್ರತಿಭಟನೆ ನಿರತರಾಗಿ ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದಾರೆ.ಇಂದಿನಿಂದ ಬೆಳಗಾಂ ಚಳಿಗಾಲದ ಅಧಿವೇಶನದಲ್ಲಿ ಬೈಂದೂರು…

ಬೈಂದೂರು ಪಟ್ಟಣ ಪಂಚಾಯತ್ ತ್ಯಾಜ್ಯ ವಿವೇವಾರಿ ಘಟಕ ಕಾಮಗಾರಿಗೆ ರೈತರ ತಡೆ

ಬೈಂದೂರು: ಕಳೆದ 79 ದಿನಗಳಿಂದ ಬೈಂದೂರಿನಲ್ಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯಿಂದ ಗ್ರಾಮೀಣ ಭಾಗಗಳನ್ನು ಕೈಬಿಡಬೇಕೆಂದು ಆಗ್ರಹಿಸಿ ಅರ್ನಿದಿಷ್ಟಾವಧಿ ಧರಣಿ ನಡೆಯುತ್ತಿದೆ.ಈಗಾಗಲೇ ಪ್ರಸ್ತಾವನೆ ಸರಕಾರದ ಮಟ್ಟದಲ್ಲಿದೆ.ಸರಕಾರದಿಂದ ನಿರ್ದೇಶನ ಬಾಕಿ ಇದೆ.ಇದರ ನಡುವೆ ಬೈಂದೂರು ಪಟ್ಟಣ ಪಂಚಾಯತ್ ಅಧಿಕಾರಿಗಳು ತಗ್ಗರ್ಸೆ ಗ್ರಾಮ ಪಂಚಾಯತ್ ವ್ಯಾಪ್ತಿಯ…