ಬೈಂದೂರು: ನಾಗಶ್ರೀ ಭಜನಾ ಮಂಡಳಿ ಕರಾವಳಿ ಶಿರೂರು ಇದರ 36ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ನಡೆದ ರಾಜ್ಯ ಮಟ್ಟದ ಆಹ್ವಾನಿತ ಭಜನಾ ತಂಡಗಳ ಕುಣಿತ ಭಜನಾ ಸ್ಪರ್ಧೆ ನಡೆಯಿತು.
ನಾಗಶ್ರೀ ಭಜನಾ ಮಂಡಳಿ ಅಧ್ಯಕ್ಷ ನಾರಾಯಣ ಪೂಜಾರಿ ರಾಜ್ಯ ಮಟ್ಟದ ಭಜನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಭಜನೆ ಕೇವಲ ಒಂದು ಸ್ಪರ್ಧಾ ಮನೋಭಾವದಲ್ಲಿ ನಡೆಯದೆ ಭಕ್ತಿ ಭಾವದಲ್ಲೇ ದೇವರ ಸಂಕೀರ್ತನೆಯನ್ನು ಮಾಡಬೇಕು.ಭಜನೆ ಒಂದೇ ದಿನಕ್ಕೆ ಸೀಮಿತವಾಗದೆ ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಪ್ರತಿನಿತ್ಯ ಭಜನೆ ಮಾಡುವಂತಾಗಬೇಕು.ದಾಸ ಸಂಕೀರ್ತನೆಗಳು ಜೀವನದ ಸಂಕಷ್ಟ ಕಾಲದಲ್ಲಿ ಧೈರ್ಯ ಹಾಗೂ ಸುಖದ ಕಾಲದಲ್ಲಿ ಬದುಕು ಕಟ್ಟಿಕೊಳ್ಳಲು ದಾರಿ ದೀಪವಾಗಿದೆ ಎಂದರು.
ಕುಣಿತ ಭಜನಾ ಸ್ಪರ್ಧೆಯ ನಿರ್ಣಾಯಕರಾದ ಚಂದ್ರಶೇಖರ ಶೆಟ್ಟಿ,ದಿನೇಶ ಎಸ್.ಸುವರ್ಣ,ನಿವೃತ್ತ ಶಿಕ್ಷಕ ಗೋವಿಂದ ಬಿಲ್ಲವ,ಭಜನಾ ಮಂಡಳಿಯ ಸದಸ್ಯರು ಹಾಜರಿದ್ದರು.
ಈ ಸಂದರ್ಭದಲ್ಲಿ ಬೈಂದೂರು ತಾಲೂಕು ಭಜನಾ ಪರಿಷತ್ ಅಧ್ಯಕ್ಷ ಕೃಷ್ಣ ಪೂಜಾರಿ ಹಾಗೂ ಎಸ್.ಎಸ್.ಎಲ್.ಸಿ ವಿಭಾಗದಲ್ಲಿ ಅತ್ಯಽಕ ಅಂಕ ಗಳಿಸಿದ ಪಲ್ಲವಿ ಯವರನ್ನು ಸಮಿತಿಯ ವತಿಯಿಂದ ಸಮ್ಮಾನಿಸಲಾಯಿತು.
ಕುಣಿತಾ ಭಜನಾ ಸ್ಪರ್ಧೆಯಲ್ಲಿ ಸೇವಾ ಭಾರತಿ ಭಜನಾ ಮಂಡಳಿ ಸಚ್ಚರಿಪೇಟೆ ಪ್ರಥಮ ಸ್ಥಾನ ಪಡೆದರು.ಶ್ರೀ ಆಂಜನೇಯ ಭಜನಾ ಮಂಡಳಿ (ರಿ.)ಸಾಣೂರು ದ್ವಿತೀಯ ಸ್ಥಾನ ಪಡೆದರು ಹಾಗೂ ಮಾಣಿ ಸಿದ್ದಲಿಂಗೇಶ್ವರ ಭಜನಾ ಮಂಡಳಿ ಮೊವಾಡಿ ತೃತೀಯ ಸ್ಥಾನ ಪಡೆದರು.ಸುಮಾರು 8 ಭಜನಾ ತಂಡಗಳು ಆಗಮಿಸಿತ್ತು.

ಕಾರ್ಯದರ್ಶಿ ಯೋಗೇಶ್ ಪೂಜಾರಿ ಸ್ವಾಗತಿಸಿದರು.ದೈಹಿಕ ಶಿಕ್ಷಕ ಗುರುರಾಜ್ ಎಸ್ ಕಾರ್ಯಕ್ರಮ ನಿರೂಪಿಸಿದರು.ಕೃಷ್ಣ ಬಿ.ಪಿ ವಂದಿಸಿದರು.
ವರದಿ/ಗಿರಿ ಶಿರೂರು