ಬೈಂದೂರು: ಕಳೆದ 125 ದಿನಗಳಿಂದ ಬೈಂದೂರು ತಾಲೂಕು ಆಡಳಿತ ಸೌಧದ ಎದುರು ನಡೆಯುತ್ತಿರುವ ರೈತರ ಹೋರಾಟ ಭಾನುವಾರ ಉಗ್ರಗೊಂಡಿದೆ.ಜಿಲ್ಲೆಯಲ್ಲಿ ರೈತರು ನ್ಯಾಯಕ್ಕಾಗಿ ಆಗ್ರಹಿಸಿ ಬೀದಿಯಲ್ಲಿದ್ದರೆ ಜಿಲ್ಲಾಡಳಿತ ಆಡಳಿತ ವ್ಯವಸ್ಥೆ ಉತ್ಸವದ ಸಂಭ್ರಮದಲ್ಲಿದೆ.ಹಾಗಿದ್ದರೆ ರೈತರ ಗೋರಾಟಕ್ಕೆ ಬೆಲೆ ಇಲ್ಲವೆ ಎಂದು  ರೈತರು ಭಾನುವಾರ ರಾತ್ರಿ ರೊಚ್ಚಿಗೆದ್ದಿದ್ದರು.ಅಹೋರಾತ್ರಿ ಧರಣಿ ಕರೆಕೊಟ್ಟು ನೂರಾರು ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದು ಇತರಸಂಘಟನೆಗಳು ಕೂಡ ಬೆಂಬಲ ನೀಡಿದ್ದರು

ಸ್ಥಳಕ್ಕೆ ಉಸ್ತುವಾರಿ ಸಚಿವರ ಬೇಟಿ;  ಭಾನುವಾರ ಬೈಂದೂರು ಉತ್ಸವಕ್ಕೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಮೀ ಹೆಬ್ಬಾಳ್ಕರ್ ಆಗಮಿಸುವುದು ನಿಗದಿಯಾಗಿತ್ತು.ಬೈಂದೂರು ರೈತರು ಉತ್ಸವದ ಬಗ್ಗೆ ಅಸಮಾಧಾನವಿದ್ದರು ಯಾವುದೆ ರೀತಿಯಲ್ಲಿ ತೊಂದರೆ ನೀಡಿಲ್ಲ.ಹೀಗಾಗಿ ತಾಲೂಕು ಆಡಳಿತ ಸೌಧದ ಎದುರುಗಡೆ ಧರಣಿ ಸ್ಥಳದಲ್ಲಿ ಜನಾಯಿಸಿದ್ದರು ಇದನ್ನು ಗಮನಿಸಿದ ಸಚಿವರು ಉತ್ಸವ ಕಾರ್ಯಕ್ರಮ ಮುಗಿಸಿ ನೇರವಾಗಿ ರೈತರ ಧರಣಿ ಸ್ಥಳಕ್ಕೆ ಆಗಮಿಸಿ ಜವಬ್ದಾರಿ ಮೆರೆದಿದ್ದಾರೆ.

ವಿಫಲವಾದ ಸಚಿವರು ಬಾರದಂತೆ ತಡೆಯುವ ಪ್ರಯತ್ನ : ರೈತರು ಅಹೋರಾತ್ರಿ ಧರಣಿ ಉತ್ಸವ ಆಯೋಜಕರಿಗೆ ನುಂಗಲಾರದ ತುಪ್ಪವಾಗಿ ಬಹಳ ಮುಜುಗರ ತಂದಿತ್ತು.ಇದರ ಜೊತೆಗೆ ಸಚಿವರು ರೈತ ಹೋರಾಟದ ದಾರಿಯಲ್ಲೆ ಸಾಗಬೇಕಾದ ಕಾರಣ ಗೊಂದಲವಾಗಬಹುದೆನ್ನುವ ಉದ್ದೇಶದಿಂದ ಸಚಿವರು ಬರುವ ವೇಳೆ ರೈತ ಹೋರಾಟ ಸ್ಥಳದ ಸುತ್ತಮುತ್ತ ಎಕಾಎಕಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಯಿತು.ಇದು ರೈತರನ್ನು ಕೆರಳಿಸಿತ್ತು ಹೀಗಾಗಿ ಜೋರಾಗಿ ಘೋಷಣೆ ಕೂಗುವ ವೇಳೆ ಸಚಿವರು ಕತ್ತಲೆಯಲ್ಲಿ ಧರಣಿ ನಡೆಸುವ ರೈತರನ್ನು ಗಮನಿಸಿ ಕಾರಿನಲ್ಲಿ ಕೈ ಸನ್ನೆ ಮಾಡಿ ಕಾರ್ಯಕ್ರಮ ಮುಗಿಸಿ ಬರುವುದಾಗಿ ತಿಳಿಸಿದರು.ಬಳಿಕ ವಾಪಾಸ್ಸು ಬರುವಾಗ ರೈತರ ಧರಣಿಗೆ ಬರಬಾರದು ಎಂದು ಬದಲಿ ಮಾರ್ಗದಲ್ಲಿ ಸಚಿವರನ್ನು ಕರೆದುಕೊಂಡು ಹೋಗುವ ಪ್ರಯತ್ನವಾದರು ಸಹ ಸಚಿವರು ಹೆದ್ದಾರಿಗೆ ಬಂದು ಉಡುಪಿಗೆ ಹೋಗಲು ಸಿದ್ದವಾದಾಗ ಸಚಿವರು ಸ್ವತ ರೈತರ ಧರಣಿ ಬೇಟಿ ಕೊಡಲು ವಾಹನ ತಿರುಗಿಸಲು ಸೂಚನೆ ನೀಡಿ ರೈತರನ್ನು ಬೇಟಿ ಮಾಡಿದ್ದು ರೈತರ ಸಂಭ್ರಮ ಹೆಚ್ಚಿಸಿತ್ತು ಹಾಗೂ ಸಚಿವರ ಬಗ್ಗೆ ರೈತರ ಪರ ನಿಂತಿರುವ ಕುರಿತು ಅಭಿಮಾನ ಹೊಸ ಉತ್ಸಾಹ ನೀಡಿತ್ತು.

ರೈತರನ್ನು ಉದ್ದೇಶಿಸಿ ಮಾತನಾಡಿದ ಉಸ್ತುವಾರಿ ಸಚಿವರಾದ ಲಕ್ಮೀ ಹೆಬ್ಬಾಳ್ಕರ್ ಬೈಂದೂರು ರೈತರ ಹೋರಾಟಕ್ಕೆ ಆರಂಭದಿಂದಲು ಸರಕಾರದ ಮಟ್ಟದಲ್ಲಿ ಬೆಂಬಲವಾಗಿ ನಿಂತಿದ್ದೇನೆ.ಈಗಾಗಲೆಲೇ ನಡೆಯಬೇಕಿದ್ದ ಚುನಾವಣೆಯನ್ನು ಅಧಿಕಾರಿಗಳಿಗೆ ತಿಳಿಸಿ ಮುಂದೂಡಿದ್ದು ಇಷ್ಟೊಂದು ದೀರ್ಘ ಹೋರಾಟ ರೈತರ ದಿನ ನಿತ್ಯದ ಕೆಲಸ ಕಾರ್ಯಗಳಿಗೆ ಬಹಳ ತೊಂದರೆ ಅನುಭವಿಸುತ್ತಿರುವದು ಅಧಿಕಾರಿಗಳಿಂದ ವಿಳಂಬವಾಗಿರುವುದು ಬೇಸರ .ಹೀಗಾಗಿ ಮಾನ್ಯ ಮುಖ್ಯಮಂತ್ರಿಗಳ ಜೊತೆ ಮಾತನಾಡಿ ವಿಶೇಷ ಪ್ರಕರಣ ಎಂದು ಪರಿಗಣಿಸಿ ಶೀಘ್ರ ಸರಕಾರದ ಮಟ್ಟದಲ್ಲಿ ನ್ಯಾಯ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೆನೆ ನಂಬಿಕೆ ಇರಲಿ ನ್ಯಾಯ ಖಂಡಿತ ಸಿಗುತ್ತದೆ ಎಂದರು.ಸಚಿವರ ರೈತಪರ ಕಾಳಜಿ ರೈತರಿಗೆ ಹೊಸ ಭರವಸೆ ನೀಡಿತ್ತು.

ಈ ಸಂಧರ್ಭದಲ್ಲಿ ಉಡುಪಿ ಸ್ವರೂಪ ಟಿ.ಕೆ,ಜಿಲ್ಲಾಧಿಕಾರಿ,ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್,ಬೈಂದೂರು ತಹಶೀಲ್ದಾರ ರಾಮಚಂದ್ರಪ್ಪ,ಬೈಂದೂರು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ,ರೈತ ಮುಖಂಡರಾದ ಅರುಣ್ ಕುಮಾರ್ ಶಿರೂರು,ವೀರಭದ್ರ ಗಾಣಿಗ,ಸಾಮಾಜಿಕ ಹೋರಾಟಗಾರ ಸುಬ್ರಹ್ಮಣ್ಯ ಬಿಜೂರು,ಲಿಮೋನ್ ಬೈಂದೂರು,ಪದ್ಮಾಕ್ಷ ಗೋಳಿಬೇರು,ಹೆರಿಯಣ್ಣ ಪೂಜಾರಿ ಗೋಳಿಬೇರು,ಮಹಾದೇವ ಪೂಜಾರಿ ಕಿಸ್ಮತ್ತಿ ಹಾಗೂ ನೂರಾರು ರೈತರು ಹಾಜರಿದ್ದರು.

ವರದಿ/ಚಿತ್ರ: ಗಿರಿ ಶಿರೂರು

 

Leave a Reply

Your email address will not be published. Required fields are marked *

3 × 3 =