ಶಿರೂರು: ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಆಲಂದೂರು ಇದರ ನೂತನ ಎಲ್. ಕೆ.ಜಿ ಮತ್ತು ಯು. ಕೆ.ಜಿ ತರಗತಿಗಳ ಉದ್ಘಾಟನಾ ಕಾರ್ಯಕ್ರಮ ಆಲಂದೂರು  ಶಾಲಾ ಆವರಣದಲ್ಲಿ ನಡೆಯಿತು.

ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷ  ವಿನಾಯಕ ಗಾಣಿಗ ನೂತನ ಎಲ್. ಕೆ.ಜಿ ಮತ್ತು ಯು. ಕೆ.ಜಿ ತರಗತಿಗಳನ್ನು ಉದ್ಘಾಟಿಸಿದರು ಈ ಸಂದರ್ಭದಲ್ಲಿ ಮಾತನಾಡಿದ ಅವರು ಸರಕಾರಿ ಶಾಲೆಯ ಆಭಿವೃದ್ದಿಯಾಗಬೇಕಾದರೆ ಸಾರ್ವಜನಿಕರ ಸಹಭಾಗಿತ್ವ ಮತ್ತು ಕ್ರಿಯಾತ್ಮಕ ಚಿಂತನೆಗಳು ಮುಖ್ಯ.ಹೀಗಾಗಿ ಹೊಸತನಗಳನ್ನು ಅಳವಡಿಸಿ ಸಂಸ್ಥೆಯನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆಯಿದೆ ಆದುದರಿಂದ ಆಲಂದೂರು ಶಾಲೆಯಲ್ಲಿ ಪ್ರಸ್ತುತ ವರ್ಷದಿಂದ ಎಲ್. ಕೆ.ಜಿ ಮತ್ತು ಯು. ಕೆ.ಜಿ ತರಗತಿಗಳನ್ನು ಆರಂಭಿಸಲಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ನಿಯೋಜಿತ ರೋಟರಿ ಕ್ಲಬ್ ಅಧ್ಯಕ್ಷ ಅರುಣ್ ಕುಮಾರ್ ಶಿರೂರು,ಯಡ್ತರೆ ಗ್ರಾ.ಪಂ ಮಾಜಿ ಸದಸ್ಯ ಉದಯ ಮಾಕೋಡಿ,ಮಾನಸ ಮಿತ್ರ ಮಂಡಳಿ ಅಧ್ಯಕ್ಷ ಸುರೇಶ್ ಎಸ್.ಪೂಜಾರಿ,ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಹೇಶ್ ಮಾಕೋಡಿ, ಮಾನಸ ಮಹಿಳಾ ಮಂಡಳ  ಅಧ್ಯಕ್ಷೆ ನೀತಾ ಗಣೇಶ,ಶಾಲಾ ಮುಖ್ಯೋಪಾಧ್ಯಾಯನಿ ವಿನ್ನಿ  ಫನಾಂಡಿಸ್ ಉಪಸ್ಥಿತರಿದ್ದರು.

ಗೌರವ ಶಿಕ್ಷಕಿ ಶಿಲ್ಪಾ ಭಟ್ ಸ್ವಾಗತಿಸಿದರು.ಆಲಂದೂರು ಮಂಜುನಾಥ ಗಾಣಿಗ ಕಾರ್ಯಕ್ರಮ ನಿರೂಪಿಸಿದರು.ಶಾಲಾ ಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಅಶ್ವಿನಿ ಕೊಠಾರಿ ವಂದಿಸಿದರು.

ವರದಿ/ಗಿರಿ ಶಿರೂರು

ಚಿತ್ರ: ಸುರೇಶ್ ಮಾಕೋಡಿ

Leave a Reply

Your email address will not be published. Required fields are marked *

two × 5 =